newsfirstkannada.com

ಇಂಗ್ಲೀಷ್​​ ಮೀಡಿಯಂಗೆ ಸೇರಿಸುತ್ತೇನೆ ಅಂತ ಕರೆ ತಂದ ಸೋನುಗೌಡ; ವಿಚಾರಣೆಯಲ್ಲಿ ಮಗು ಕಣ್ಣೀರು

Share :

Published March 22, 2024 at 1:42pm

Update March 22, 2024 at 3:18pm

    ಅಪ್ಪ, ಅಮ್ಮ ಜೊತೆ ವಿಡಿಯೋ ಕಾಲ್ ಮಾಡಿಕೊಡ್ತಾರೆ ಎಂದ ಮಗು

    ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಧಿಕಾರಿಗಳಿಂದ ಬಾಲಕಿ ವಿಚಾರಣೆ

    ಅಕ್ಕಾ ಬೇಕು ಅಂತ ಒಂದೇ ಸಮನೆ ಅತ್ತು ಹಠ ಹಿಡಿದ 8 ವರ್ಷದ ಬಾಲಕಿ

ಬೆಂಗಳೂರು: ಮಗುವನ್ನು ದತ್ತು ಪಡೆವ ಪ್ರಕರಣದಲ್ಲಿ ಬಿಗ್‌ಬಾಸ್ ಸ್ಪರ್ಧಿ, ನಟಿ ಸೋನು ಶ್ರೀನಿವಾಸ ಗೌಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಧಿಕಾರಿ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಸೋನು ಶ್ರೀನಿವಾಸ ಗೌಡ ಅವರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸೋನು ಶ್ರೀನಿವಾಸ ಗೌಡ ಅವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ದತ್ತು ಪಡೆವ ಮಗುವಿನ ಜೊತೆಗೆ ರೀಲ್ಸ್‌ ಮಾಡಿದ್ದು ಕಾನೂನಿನ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆಯೂ ಸೋನು ಶ್ರೀನಿವಾಸ ಗೌಡ ಅವರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸೋನು ಶ್ರೀನಿವಾಸ ಗೌಡ ಅವರ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ಸೋನು ಗೌಡ ಅವರ ಜೊತೆಗಿದ್ದ ಮಗುವನ್ನು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಧಿಕಾರಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆ ಹೆಣ್ಣು ಮಗು ಸೋನು ಅಕ್ಕ ಚೆನ್ನಾಗಿ ನೋಡಿಕೊಂಡಿದ್ದಾರೆ. ಒಳ್ಳೆ ಬಟ್ಟೆ ಕೊಡಿಸುತ್ತಾರೆ, ಊಟ ತಿಂಡಿ ಕೊಡಿಸುತ್ತಾರೆ. ಅಕ್ಕ ನಾನು ಏನು ಕೇಳಿದ್ರೂ ಕೊಡಿಸುತ್ತಾರೆ ಚೆನ್ನಾಗಿ ನೋಡಿಕೊಳ್ತಾರೆ ಎಂಬ ಹೇಳಿಕೆ ನೀಡಿದೆ.

ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಧಿಕಾರಿಗಳು ಮಗುವಿನ ಬಳಿ ಕಳೆದ 41 ದಿನಗಳಿಂದ ಏನೇನಾಯ್ತು ಅನ್ನೋ ಮಾಹಿತಿ ಕೇಳಿದ್ದಾರೆ. ನಿನ್ನನ್ನು ಏನು ಅಂತ ಹೇಳಿ ಕರೆದುಕೊಂಡು ಬಂದರು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಆ ಮಗು, ನನ್ನ ಅಪ್ಪ-ಅಮ್ಮ ಸೋನು ಅಕ್ಕ ನಿನ್ನನ್ನ ಚೆನ್ನಾಗಿ ನೋಡಿಕೊಳ್ತಾರೆ. ಇಂಗ್ಲಿಷ್ ಕಲಿಸ್ತಾರೆ ಅಂತ ಹೇಳಿ ಕರೆ ತಂದರು ಎಂದಿದ್ದಾರೆ.

ವಿಚಾರಣೆ ವೇಳೆ CWC ಅಧಿಕಾರಿಗಳಿಗೆ ಸೋನು ಶ್ರೀನಿವಾಸ ಗೌಡ ಅವರು ಇಂಗ್ಲಿಷ್ ಮೀಡಿಯಂಗೆ ಸೇರಿಸುತ್ತೇನೆ ಎಂದು ಮಗುವನ್ನು ಕರೆ ತಂದಿದ್ದಾರೆ ಅನ್ನೋದು ಗೊತ್ತಾಗಿದೆ. ಅದಕ್ಕೆ ನಿಮ್ಮ ಊರಲ್ಲೇ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇದೆಯಲ್ಲ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಕ್ಕೆ ಅಲ್ಲಿ ಕನ್ನಡ ಮೀಡಿಯಂ ಇದೆ ಇಂಗ್ಲಿಷ್ ಮೀಡಿಯಂ ಇಲ್ಲ ಎಂದು ಮಗು ಉತ್ತರಿಸಿದೆ.

ಇದನ್ನೂ ಓದಿ: ಮಗು ದತ್ತು ಪಡೆದ ಕೇಸ್​; ಸೋನುಗೌಡ ವಿರುದ್ಧ ದಾಖಲಾದ ದೂರಿನಲ್ಲಿ ಯಾವ್ಯಾವ ಅಂಶಗಳಿವೆ?

ಅಧಿಕಾರಿಗಳು ಮಗುವಿಗೆ ಅಪ್ಪ, ಅಮ್ಮನ್ನ ನೋಡಬೇಕು ಅನ್ಸಲ್ವಾ ಎಂದು ಕೇಳಿದ್ದಾರೆ. ಆಗ ಉತ್ತರಿಸಿರೋ ಮಗು, ಅಕ್ಕ ವಿಡಿಯೋ ಕಾಲ್ ಮಾಡಿಕೊಡ್ತಾರೆ ಮಾತನಾಡ್ತೇನೆ. ಅಪ್ಪ, ಅಮ್ಮ ಜೊತೆ ಹೋಗ್ತೀಯಾ ಇಂಗ್ಲಿಷ್ ಮೀಡಿಯಂಗೆ ಕಳಿಸ್ತಾರೆ ಅಂತ ಕೇಳಿದ್ದಕ್ಕೆ ಸರಿ ಹೋಗ್ತೀನಿ ಎಂದು ಮಗು ಹೇಳಿದೆ.

ವಿಚಾರಣೆ ಬಳಿಕ ಸೋನು ಗೌಡ ಅವರ ಬಳಿಯಿದ್ದ ಮಗುವನ್ನ CWC ಅಧಿಕಾರಿಗಳು ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆಗ ಆ ಮಗು ಅಕ್ಕಾ ಅಂತಾ ಒಂದೇ ಸಮನೆ ಅತ್ತಿದೆ. ಅಧಿಕಾರಿಗಳ ಜೊತೆ ಹೋಗಲು ಹಠ ಹಿಡಿದು ಒಂದೇ ಸಮನೆ ಮಗು ಅತ್ತಿದೆ. ಸದ್ಯ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಧಿಕಾರಿಗಳು ಮಗುವನ್ನ ಕರೆದುಕೊಂಡು ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಗ್ಲೀಷ್​​ ಮೀಡಿಯಂಗೆ ಸೇರಿಸುತ್ತೇನೆ ಅಂತ ಕರೆ ತಂದ ಸೋನುಗೌಡ; ವಿಚಾರಣೆಯಲ್ಲಿ ಮಗು ಕಣ್ಣೀರು

https://newsfirstlive.com/wp-content/uploads/2024/03/Sonu-Srinivas-gowda.jpg

Load More