ಮುಡಾ ಪ್ರಕರಣದಲ್ಲಿ ಇಡಿ ಎಂಟ್ರಿ ಬಹುತೇಕ ಫಿಕ್ಸ್!
ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ಎಂಟ್ರಿಗೆ ಸಜ್ಜು
ಭೂ ಚಕ್ರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಲಾಕ್?
ಮೈಸೂರು: ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು? ತನಿಖೆ ನಡೆಯುತ್ತಿರುವಾಗ ಸೈಟ್ ವಾಪಸ್ ಕೊಟ್ರೇನು? ಈಗಾಗಲೇ ಸಿದ್ದರಾಮಯ್ಯ ಕುಟುಂಬಕ್ಕೆ ತ್ರಿಸಂಕಟ ಎದುರಾಗಿದೆ. ಲೋಕಾಯುಕ್ತ ತನಿಖೆ ಅಖಾಡಕ್ಕೆ ಇಳಿದಿದೆ. ಸಿಬಿಐ ಎಂಟ್ರಿ ವಿಚಾರ ಹೈಕೋರ್ಟ್‌ನಲ್ಲಿದೆ. ಈ ಮಧ್ಯೆ ಮುಡಾ ಭೂ ಚಕ್ರವ್ಯೂಹದೊಳಗೆ ಇಡಿ ಇಣಿಕಿದೆ. ಸದ್ಯಕ್ಕಂತೂ ಸಿದ್ದರಾಮಯ್ಯಗೆ ಸಂಕಷ್ಟ ಫಿಕ್ಸ್ ಆಗಿದೆ. ಆದ್ರೂ ಭೂ ಅಕ್ರಮ ಕೇಸ್‌ನಲ್ಲಿ ಇಡಿ ಹೇಗೆ ಎಂಟ್ರಿ ಕೊಡುತ್ತೆ ಎಂಬ ಪ್ರಶ್ನೆಯನ್ನ ಕೈ ನಾಯಕರು ಕೇಳ್ತಿದ್ದಾರೆ.

ಸಿದ್ದರಾಮಯ್ಯ ಪತ್ನಿಯೇನೋ 14 ಸೈಟ್‌ನ ವಾಪಸ್ ಕೊಡ್ತೀವಿ. ಕೋಟಿ ಕೋಟಿ ಬೆಲೆಬಾಳೋ ಸೈಟ್ ತೃಣಕ್ಕೆ ಸಮಾನ ಅಂತಿದ್ದಾರೆ. ಆದ್ರೆ, ಇಡಿ ಅಧಿಕಾರಿಗಳು ಇದನ್ನೆಲ್ಲಾ ಕೇಳ್ತಾರಾ? ಈಗಾಗಲೇ ECIR ದಾಖಲಿಸಿ ಪ್ರಕರಣದ ಪರಿಶೀಲನೆ ನಡೆಸ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ತನಿಖೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇದ್ರಿಂದ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಒಂದ್ವೇಳೆ ಇಡಿ ತನಿಖೆ ನಡೆಸಲು ಮುಂದಾದ್ರೆ ಸಿದ್ದರಾಮಯ್ಯ ಬಂಧನ ಆಗುವ ಸಾಧ್ಯತೆಯೂ ಇದೆ.
ಮನಿ ಲಾಂಡರಿಂಗ್ ಹೇಗೆ ಅಂತ ಸಿದ್ದು ಪ್ರಶ್ನೆ
ಮುಡಾದಲ್ಲಿ ಭೂ ಅಕ್ರಮ ಆಗಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದ್ರೆ, ಈ ಕೇಸ್‌ನಲ್ಲಿ ಅಕ್ರಮ ಹಣದ ವಹಿವಾಟು ನಡೆದಿದ್ಯಾ ಅನ್ನೋದು ಎಲ್ಲರಿಗೂ ಕಾಡ್ತಿರೋ ಪ್ರಶ್ನೆ. ಸದ್ಯ ಇದೇ ಅನುಮಾನ ಸಿಎಂಗೂ ಬಂದಿದೆ. ಆದ್ರೂ ಕಾನೂನು ಪ್ರಕಾರ ಏನು ಮಾಡ್ತಾರೋ ಮಾಡಲಿ ಅಂತ ಸಿದ್ದರಾಮಯ್ಯ ತನಿಖೆಗೆ ಸಿದ್ಧ ಎಂಬ ಸಂದೇಶ ಕೊಟ್ಟಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆಗಿಲ್ಲ ಎಂದ ಸಿಂಘ್ವಿ
ಮುಡಾ ಪ್ರಕರಣದಲ್ಲಿ ನಡೆದಿರೋದು ಭೂ ಅಕ್ರಮ. ಇದರಲ್ಲಿ ಇಡಿಗೇನು ಕೆಲಸ ಅನ್ನೋದು ಕಾಂಗ್ರೆಸ್‌ನ ಪ್ರಶ್ನೆ. ಇದೇ ವಿಚಾರಕ್ಕೆ ಟ್ವೀಟ್ ಮಾಡಿರೋ ಕಾಂಗ್ರೆಸ್, ರಾಜ್ಯಪಾಲರನ್ನ ಮುಂದೆ ಬಿಟ್ಟಾಯ್ತು, ಸಿಬಿಐಗೆ ಅವಕಾಶ ಇಲ್ಲದಾಯ್ತು, ಈಗ ED ಛೂಬಿಟ್ಟಿದ್ದಾರೆ ಅಂತ ಕಿಡಿಕಾರಿದೆ. ಮತ್ತೊಂದೆಡೆ ಈ ಕೇಸ್‌ನಲ್ಲಿ ಅಕ್ರಮ ಹಣ ವರ್ಗಾವಣೆಯೇ ಆಗಿಲ್ಲ ಅಂತ ಕೈ ನಾಯಕ ಅಭಿಷೇಕ್ ಮನು ಸಿಂಘ್ವಿ ಗುಡುಗಿದ್ದಾರೆ.
ಮುಡಾ ಅಕ್ರಮ ಈಗಾಗಲೇ ತನಿಖೆಯ ಹಾದಿ ಹಿಡಿದಿದೆ. ಈ ಹೊತ್ತಲ್ಲಿ ಎಲ್ಲಾ ತನಿಖಾ ಸಂಸ್ಥೆಗಳು ಸಿದ್ದರಾಮಯ್ಯ ಬೆನ್ನುಬಿದ್ದಿವೆ. ಪ್ರಕರಣ ಸಿಎಂಗೆ ಮತ್ತಷ್ಟು ಉರುಳಾಗುತ್ತಾ ಸಾಗಿದೆ. ಮುಂದೇನಾಗುತ್ತೋ? ಏನೋ ಕಾದು ನೋಡಬೇಕಿದೆ.
ಇದನ್ನೂ ಓದಿ: ಮೆಗಾ ಹರಾಜಿಗೆ ಮುನ್ನವೇ ಆರ್ಸಿಬಿಗೆ ಬಿಗ್ ಆಫರ್ ಕೊಟ್ಟ ಪಂತ್; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ