newsfirstkannada.com

Share :

05-06-2023

    ಏಕಾಏಕಿ ಗಲಿಬಿಲಿಗೊಂಡ ಸಿಎಂ ಸಿದ್ದರಾಮಯ್ಯ

    ಅಷ್ಟಕ್ಕೂ ಸಿಎಂಗೆ ಆಗಿದ್ದೇನು..?

    ಜ್ಞಾನಜ್ಯೋತಿ ಸಭಾಂಗಣದಲ್ಲಿ ಏನು ಮಾಡಿದ್ರು ಗೊತ್ತಾ?

ಬೆಂಗಳೂರು: ಇಂದು ವಿಶ್ವ ಪರಿಸರ ದಿನವಾಗಿದ್ದು, ಈ ಅಂಗವಾಗಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಕಾರ್ಯಕ್ರಮದ ವೇಳೆ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಗಲಿಬಿಲಿಗೊಂಡ ಘಟನೆ ನಡೆದಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನದ ಅಂಗವಾಗಿ ವಿಶೇಷ ರಾಜ್ಯ ಪ್ರಶಸ್ತಿ ನೀಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಕೆ.ಜೆ ಜಾರ್ಜ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು. ಈ ವೇಳೆ ಕಾರ್ಯಕ್ರಮ‌ದ ನಿರೂಪಕರು ಸಿದ್ದರಾಮಯ್ಯ ಹೆಸರು ಪಸ್ತಾಪಿಸಿ ಅವರಿಗೆ ಸ್ವಾಗತ ಕೋರಿದ್ದರು. ಆದರೆ ಈ ವೇಳೆ ಅವರು ಗಲಿಬಿಲಿಗೊಂಡಿದ್ದಾರೆ.

ಕೈಮುಗಿರಿ ಎಂದ ಸಚಿವ ಈಶ್ವರ್ ಖಂಡ್ರೆ

ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ವಿವರದ ಪ್ರತಿ ನೋಡುತ್ತಾ ತಲ್ಲೀನರಾಗಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕರು ಸ್ವಾಗತ ಕೋರಿರುವುದನ್ನು ಕೇಳಿಸಿಕೊಂಡಿರಲಿಲ್ಲ. ತಕ್ಷಣವೇ ಪಕ್ಕದಲ್ಲೇ ಆಸೀನರಾಗಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಎಂಗೆ ಮನವರಿಸಿದ್ದಾರೆ. ಆಗಲೂ ಗೊತ್ತಾಗದೆ ಏನು ಎಂದು ನಿಂತು ಗೊಂದಲಕ್ಕೆ ಒಳಗಾಗಿದ್ದಾರೆ. ಬಳಿಕ ಸ್ವಾಗತ ಭಾಷಣದಲ್ಲಿ ನಿಮ್ಮ ಹೆಸರು ಹೇಳಿದರು ಕೈಮುಗಿರಿ ಎಂದ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ನಂತರ ಸಿದ್ದರಾಮಯ್ಯ ಅವರು ಕೈಮುಗಿದು ಕುಳಿತುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More