‘ಭಾರತದ ಸೋಲಿಗೆ ಈ ಆಟಗಾರರೇ ಕಾರಣ’- ಅಸಮಾಧಾನ ಹೊರಹಾಕಿದ ಟೀಮ್​ ಇಂಡಿಯಾ ಕೋಚ್​

author-image
Ganesh Nachikethu
Updated On
ಇರೋದು ಒಂದೇ ಚಾನ್ಸ್​.. ಕ್ಯಾಪ್ಟನ್ ತಲೆಯಲ್ಲಿ ಹೊಸ ತಂತ್ರ.. ಆದರೂ ಕಾಡಿವೆ ಐದು ಪ್ರಶ್ನೆಗಳು..!
Advertisment
  • ಟೀಮ್​ ಇಂಡಿಯಾಗೆ ಶ್ರೀಲಂಕಾ ವಿರುದ್ಧ ಹೀನಾಯ ಸೋಲು!
  • ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಟೀಮ್​ ಇಂಡಿಯಾ ಕೋಚ್​
  • ಭಾರತ ತಂಡದ ಸೋಲಿಗೆ ಇವರೇ ಕಾರಣ ಎಂದ ಅಭಿಷೇಕ್​ ನಾಯರ್​​

ಶ್ರೀಲಂಕಾ, ಟೀಮ್​ ಇಂಡಿಯಾ ನಡುವಿನ ಮೊದಲ ಏಕದಿನ ಪಂದ್ಯ ಟೈ ಆಗಿತ್ತು. ಇದಾದ ಬೆನ್ನಲ್ಲೇ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಮುಖ್ಯ ಕೋಚ್​​ ಗಂಭೀರ್​ಗೆ ಭಾರೀ ಮುಖಭಂಗ ಆಗಿದೆ. ಹಾಗಾಗಿ ಭಾರತದ ಸೋಲು ಗಂಭೀರ್ ಕೋಚಿಂಗ್ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಈ ಬಗ್ಗೆ ಮಾತಾಡಿರೋ ಟೀಮ್​ ಇಂಡಿಯಾದ ಅಸಿಸ್ಟಂಟ್​ ಕೋಚ್​​ ಅಭಿಷೇಕ್​ ನಾಯರ್​​​ ತಂಡದ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ.

ಅಭಿಷೇಕ್​ ನಾಯರ್​​ ಹೇಳಿದ್ದೇನು..?

ನಾವು ಸುಧಾರಣೆಗೆ ಅಗತ್ಯವಿರೋ ವಿಷಯಗಳತ್ತ ಗಮನ ಹರಿಸಬೇಕು. ಸತತ 2ನೇ ಪಂದ್ಯಕ್ಕೆ ಯಾಕೆ ಹೀಗಾಯಿತು ಎಂದು ಯೋಚಿಸಬೇಕು. ಮೊದಲ ಪಂದ್ಯದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿ ಆಗಿದ್ದೆವು. 2ನೇ ಪಂದ್ಯದಲ್ಲಿ ಮಾತ್ರ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡೆವು. ಇದಕ್ಕೆ ಕಾರಣವೇನು ಎಂದು ಹುಡುಕಬೇಕಿದೆ ಎಂದರು ಅಭಿಷೇಕ್​ ನಾಯರ್​.

ಮಧ್ಯಮ ಓವರ್‌ಗಳಲ್ಲಿ ನಾವು ವಿಕೆಟ್ ಕಳೆದುಕೊಳ್ಳುತ್ತಿದ್ದೇವೆ. ಮಧ್ಯಮ ಕ್ರಮಾಂಕದ ಬ್ಯಾಟರ್ಸ್‌ ಕ್ರೀಸ್‌ನಲ್ಲಿದ್ದು ಸರಿಯಾಗಿ ಆಡಬೇಕು. ಇಲ್ಲದೆ ಹೋದಲ್ಲಿ ಬ್ಯಾಟಿಂಗ್ ಸ್ಥಾನ ಬದಲಾವಣೆ ಮಾಡುವ ನಿರ್ಧಾರ ಮಾಡುತ್ತೇವೆ ಎಂದರು. ಜತೆಗೆ ಒಂದಷ್ಟು ಆಟಗಾರರನ್ನು ಬೆಂಚ್​ ಕಾಯಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ದೊಡ್ಡ ತಪ್ಪು ಮಾಡಿದ ಗಂಭೀರ.. ಮುಖ್ಯ ಕೋಚ್ ಕೈಸುಟ್ಟುಕೊಂಡಿದ್ದು ಎಲ್ಲಿ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment