ಬಾತ್ ರೂಮ್ನಲ್ಲಿ ಹೆಡೆ ಎತ್ತಿದ ನಾಗರ ಹಾವು
ಬುಸ್ ಎಂದ ನಾಗಪ್ಪನನ್ನು ಕಂಡು ಭಯಗೊಂಡ ಮನೆಯವರು
ಹಾವು ಹಿಡಿಯಲು ಉರಗ ತಜ್ಞ ಸಿಗದೆ ಪರದಾಡಿದ ಮನೆ ಮಾಲೀಕ
ದಾವಣಗೆರೆ: ಬೃಹತ್ ನಾಗರ ಹಾವೊಂದು ಸದ್ದಿಲ್ಲದೆ ಮನೆಯ ಬಾತ್ ರೂಮ್ ಸೇರಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ಬೆಳಕಿಗೆ ಬಂದಿದೆ. ಅಲ್ಲಿನ ಮುರುಗೇಶ್ ಎಂಬುವರ ಮನೆಯ ಬಾತ್ ರೂಮ್ ಕಿಟಕಿಯಲ್ಲಿ ಹೆಡೆ ಎತ್ತಿದ ರೂಪದಲ್ಲಿ ಕಂಡಿದೆ.
ಸುಮಾರು 8 ಅಡಿ ಉದ್ದದ ನಾಗರ ಹಾವನ್ನು ಕಂಡು ಮನೆಯವರು ಭಯ ಬಿದ್ದಿದ್ದಾರೆ. ಕೊನೆಗೆ ನಾಗರ ಹಾವನ್ನು ಹಿಡಿಯಲು ಕುಟುಂಬಸ್ಥರು ಉರಗ ತಜ್ಞರ ಮೊರೆ ಹೋಗಿದ್ದಾರೆ. ಆದರೆ ಕಿಟಕಿಯಲ್ಲಿ ಹೆಡೆ ಎತ್ತಿ ನಿಂತಿರುವ ನಾಗರ ಹಾವನ್ನು ರಕ್ಷಣೆ ಮಾಡಲು ಮತ್ತು ಹೊರ ಬಿಡಲು ಉರಗ ತಜ್ಞ ಸಿಗದೆ ಮನೆಯವರು ಪರದಾಡಿದ್ದಾರೆ.
ಮನೆಯ ಬಾತ್ರೂಮ್ನಲ್ಲಿ 8 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ. ಕಿಟಕಿಯ ಬಳಿ ನಾಗರಹಾವು ಹೆಡೆ ಎತ್ತಿ ಕೂತಿದ್ದು ಎಲ್ಲರೂ ಭಯಭೀತರಾಗಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದಲ್ಲಿ ಮುರುಗೇಶ್ ಎಂಬುವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ. #NewsFirstKannada #Snake #davangere #viral pic.twitter.com/kJbc90fWb0
— NewsFirst Kannada (@NewsFirstKan) July 31, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ