newsfirstkannada.com

ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಂಗಾರಗೊಂಡ ಅಬುಧಾಬಿಯ ಸಿಟಿ ಸ್ಟೇಡಿಯಂ; ಇಲ್ಲಿವೆ ಕಲರ್‌ಫುಲ್‌ ಫೋಟೋಗಳು

Share :

Published February 13, 2024 at 6:45pm

  ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ ಸ್ಟೇಡಿಯಂ ವಿಡಿಯೋ

  ಮಹಾರಾಷ್ಟ್ರದ ನಾರಿ ಮಣಿಗಳ ಮಸ್ತ್​​ ಡ್ಯಾನ್ಸ್

  ಸಿಟಿ ಸ್ಟೇಡಿಯಂನಲ್ಲಿ ಮೊಳಗಿದ ಮೋದಿ ಹೆಸರು

ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಿರ್ಮಾಣಗೊಂಡಿರೋ ದೇಶದ ಮೊದಲ ಹಿಂದೂ ದೇವಸ್ಥಾನವನ್ನು ಪ್ರಧಾನಿ ಮೋದಿ ಫೆ.14ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.13 ಮತ್ತು 14ರಂದು ಎರಡು ದಿನಗಳ ಕಾಲ ಮೋದಿ ಯುಎಇ ಪ್ರವಾಸ ಕೈಗೊಂಡಿದ್ದಾರೆ.

ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಅಬುಧಾಬಿಗೆ ತಲುಪಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅಬುಧಾಬಿಯಲ್ಲಿರೋ 65 ಸಾವಿರ ಅನಿವಾಸಿ ಭಾರತೀಯರು ಕಾತುರದಿಂದ ಕಾಯುತ್ತಿದ್ದಾರೆ. ಅಬುಧಾಬಿಯ ಜಯೇದಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

ಇದನ್ನು ಓದಿ: VIDEO: ಅರಬ್ ರಾಷ್ಟ್ರದಲ್ಲಿ ‘ನಮೋ’ ಮೇನಿಯಾ; UAE ಅಧ್ಯಕ್ಷರ ಸ್ವಾಗತಕ್ಕೆ ಮನಸೋತ ಪ್ರಧಾನಿ ಮೋದಿ

ಹೀಗಾಗಿ ಈ ಕಾರ್ಯಕ್ರಮಕ್ಕೆ ದುಬೈ ಸರ್ಕಾರ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. 65 ಸಾವಿರಕ್ಕೂ ಹೆಚ್ಚು ಭಾರತೀಯರು ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ನೊಂದಾಯಿಸಿಕೊಂಡಿದ್ದಾರೆ. ಸದ್ಯ ಮೋದಿ ಅವರನ್ನು ಬರಮಾಡಿಕೊಳ್ಳಲು ಅಬುಧಾಬಿಯ ಜಯೇದಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಗುಜರಾತಿ ಉಡುಪನ್ನು ಧರಿಸಿಕೊಂಡು ನೃತ್ಯ ಮಾಡುತ್ತಿದ್ದಾರೆ.

ಇದರ ಜೊತೆಗೆ ಬೇರೆ ಬೇರೆ ರಾಜ್ಯದ ಅನಿವಾಸಿಗಳು ಬಗೆ ಬಗೆಯ ಕಲರ್​​ಫುಲ್​​ ಉಡುಪುಗಳನ್ನು ಧರಿಸಿಕೊಂಡು ಮಿಂಚುತ್ತಿದ್ದಾರೆ. ಜೊತೆಗೆ ಅಬುಧಾಬಿಯ ಜಯೇದಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂ ಸಖತ್​ ಕಲರ್​​ಫುಲ್​ನಿಂದ ಎದ್ದು ಕಾಣುತ್ತಿದೆ. ಮಹಾರಾಷ್ಟ್ರದ ನಾರಿ ಮಣಿಗಳು ಡ್ಯಾನ್ಸ್ ಮಾಡುತ್ತಾ ಮೋದಿ ಮೋದಿ ಎಂದು ಘೋಷವಾಕ್ಯ ಕೂಗುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಿರ್ಮಾಣವಾಗಿರೋ ಮೊದಲ ಹಿಂದೂ ದೇವಾಲದ ಇದಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮೋದಿ ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಿದ್ದು ಮಹತ್ವದ ಚರ್ಚೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಂಗಾರಗೊಂಡ ಅಬುಧಾಬಿಯ ಸಿಟಿ ಸ್ಟೇಡಿಯಂ; ಇಲ್ಲಿವೆ ಕಲರ್‌ಫುಲ್‌ ಫೋಟೋಗಳು

https://newsfirstlive.com/wp-content/uploads/2024/02/pm-modi-95.jpg

Load More