newsfirstkannada.com

ಕಾಂಗ್ರೆಸ್​ನ​ 4ನೇ ಪಟ್ಟಿ ಔಟ್.. ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ ಮಾಡೋ ಅಭ್ಯರ್ಥಿ ಇವರೇ

Share :

Published March 24, 2024 at 7:01am

  ವಾರಣಾಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ 2 ಬಾರಿ ಸೋತಿದ್ದ ಅಭ್ಯರ್ಥಿ

  ಹಿಂದಿ ಹಾರ್ಟ್​ ಲ್ಯಾಂಡ್ ರಾಜ್ಯಗಳನ್ನ​ ಗೆಲ್ಲಲು ಕಾಂಗ್ರೆಸ್​ ರಣತಂತ್ರ

  4ನೇ ಪಟ್ಟಿಯಲ್ಲಿ ಕರ್ನಾಟಕದ ಬಾಕಿ ಇರುವ 4 ಕ್ಷೇತ್ರಗಳ ಅಭ್ಯರ್ಥಿ?

ಕಾಂಗ್ರೆಸ್​ನ 4ನೇ ಪಟ್ಟಿ ಬಿಡುಗಡೆಯಾಗಿದ್ದು ವಾರಣಾಸಿ ಕ್ಷೇತ್ರದಿಂದ ಮೋದಿ ವಿರುದ್ಧ ಅಜಯ್​ ರೈ ಅವರು ಕಣಕ್ಕೆ ಇಳಿಯಲಿದ್ದಾರೆ. ದಿಗ್ವಿಜಯ್​ ಸಿಂಗ್ ಅವರು 31 ವರ್ಷಗಳ ಬಳಿಕ ಲೋಕಸಭಾ ಅಖಾಡಕ್ಕೆ ಇಳಿದಿದ್ದು ಮಧ್ಯಪ್ರದೇಶದ ರಾಜ್​ಘಡ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಮಾಜಿ ಐಎಎಸ್​ ಅಧಿಕಾರಿ ಶಶಿಕಾಂತ್​ ಸೇಂಥಿಲ್​ಗೆ ಕಾಂಗ್ರೆಸ್​ ಟಿಕೆಟ್ ನೀಡಿದೆ. ಇನ್ನು ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಿದವರು ಈಗ ತಮಿಳುನಾಡಿನಲ್ಲಿ ರಾಜಕಾರಣಿಗಳು ಆಗಿದ್ದಾರೆ. ಈ ಪಟ್ಟಿಯಲ್ಲಿ ಕಾರ್ತಿ ಚಿದಂಬರಂಗೆ ಟಿಕೆಟ್ ನೀಡಲಾಗಿದೆ.

46 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅನೌನ್ಸ್​

ಲೋಕಸಭೆ ಚುನಾವಣೆಗೆ ಭರ್ಜರಿಯಾಗಿಯೇ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌, 4ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 4ನೇ ಪಟ್ಟಿಯಲ್ಲಿ 46 ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದು, ಲೋಕ ಕದನದ ಕುತೂಹಲ ಹೆಚ್ಚಿಸಿದೆ.

ಮೋದಿ ಎದುರು ಮತ್ತೆ ಕಣಕ್ಕಿಳಿದ ಅಜಯ್​ ರಾಯ್​

ಪ್ರಕಟವಾದ 4ನೇ ಪಟ್ಟಿಯಲ್ಲಿ ಕೆಲ ಪ್ರಮುಖ ನಾಯಕರ ಕ್ಷೇತ್ರಗಳನ್ನು ಅಂತಿಮಗೊಳಿಸಿದ್ದಾರೆ. ಉತ್ತರ ಪ್ರದೇದಲ್ಲಿ ಎಸ್​ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್​ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸಿರುವ ವಾರಣಾಸಿ ಕ್ಷೇತ್ರಕ್ಕೆ ಅಭ್ಯರ್ಥಿ ಪರಕಟಿಸಿದೆ. ಕಾಂಗ್ರೆಸ್​ನ ಹಿರಿಯ ನಾಯಕ ಅಜಯ್​ ರಾಯ್​ ಮೋದಿ ವಿರುದ್ಧ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ. ಈ ಹಿಂದೆಯೂ ವಾರಣಾಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ 2 ಬಾರಿ ಸ್ಪರ್ಧೆ ಮಾಡಿ, ಪರಾಭಾವಗೊಂಡಿದ್ರು. ಈ ಬಾರಿ ಅಜಯ್​ ರಾಯ್​ಗೆ ಕಾಂಗ್ರೆಸ್​ ಮಗದೊಮ್ಮೆ ಮಣೆ ಹಾಕಿದೆ.

33 ವರ್ಷಗಳ ಬಳಿಕ ಭದ್ರಕೋಟೆಗೆ ಮರಳಿದ ದಿಗ್ವಿಜಯ್​ ಸಿಂಗ್​

ಹಿಂದಿಹಾರ್ಟ್​ ಲ್ಯಾಂಡ್​ ರಾಜ್ಯಗಳನ್ನೇ ಗಮನದಲ್ಲಿಟ್ಟುಕೊಂಡು ದೊಡ್ಡ ದೊಡ್ಡ ಹಿರಿ ತಲೆಗಳಿಗೆ ಕಾಂಗ್ರೆಸ್​ ಟಿಕೆಟ್​ ನೀಡಿದೆ. ಬರೋಬ್ಬರಿ 33 ವರ್ಷಗಳ ಬಳಿಕ ದಿಗ್ವಿಜಯ್​ ಸಿಂಗ್​ ತಮ್ಮ ಭದ್ರಕೋಟೆಯಾದ ಹಳೆಯ ಕ್ಷೇತ್ರ, ರಾಜ್ ಘರ್ ​ನಿಂದ ಅಖಾಡಕ್ಕೆ ಇಳಿದಿದ್ದಾರೆ.

 • ದಿಗ್ವಿಜಯ್​ ಸಿಂಗ್​ಗೆ ರಾಜ್​ಘರ್ ಅದೃಷ್ಟದ ಕ್ಷೇತ್ರ
 • ರಾಜ್​ಘರ್ ಕ್ಷೇತ್ರದಿಂದ 2 ಬಾರಿ ಎಂಪಿ ಎಲೆಕ್ಷನ್​ ಗೆದ್ದಿದ್ದಾರೆ
 • ಕೊನೆಯದಾಗಿ 1991ರಲ್ಲಿ ರಾಜ್​ಘಡ್​ನಿಂದ ಸ್ಪರ್ಧೆ ಮಾಡಿದ್ರು
 • 1993ರಲ್ಲಿ ದಿಗ್ವಿಜಯ್​ ಸಿಂಗ್​ ಮಧ್ಯಪ್ರದೇಶದ ಸಿಎಂ ಆದ್ರು
 • 2019ರ ಚುನಾವಣೆಯಲ್ಲಿ ಭೋಪಾಲ್​ನಿಂದ ಸ್ಪರ್ಧೆ, ಸೋಲು
 • ಇದೀಗ 33ವರ್ಷಗಳ ಬಳಿಕ ಭದ್ರಕೋಟೆಯಿಂದ ಸ್ಪರ್ಧೆ

ಕರ್ನಾಟಕದಲ್ಲಿ ಅಧಿಕಾರಿಗಳು.. ತಮಿಳುನಾಡಲ್ಲಿ ರಾಜಕಾರಣಿಗಳು

ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದವರು, ಇದೀಗ ತಮಿಳುನಾಡಿನಲ್ಲಿ ರಾಜಕಾರಣಿಗಳಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ತಿದ್ದಾರೆ. ಈಗಾಗಲೇ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿ, ತಮಿಳುನಾಡಿನಲ್ಲಿ ಅಬ್ಬರಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್​ನಿಂದ ಸಸಿಕಾಂತ್​ ಸೈಂಥಿಲ್​ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ತಮಿಳುನಾಡಿನ ಚೆನ್ನೈನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಅವರಿಗೆ ಕಾಂಗ್ರೆಸ್​ ತಿರುವಳ್ಳೂರು ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್​ ನೀಡಿದೆ.

ಇದನ್ನೂ ಓದಿ: ಒಂದು ಸ್ಟೆಪ್​ ಹಾಕಲು ಒದ್ದಾಡಿದ ತಾಂಡವ್​​.. ಗಂಡನ ನೋಡಿ ಭ್ಯಾಗ ಫುಲ್ ಖುಷ್​; ಆಗಿದ್ದೇನು?

ಮಾಜಿ ಐಎಸ್​ಎ ಅಧಿಕಾರಿ ಸಸಿಕಾಂತ್​ ಸೆಂಥಿಲ್

ಕರ್ನಾಟಕ ಕಾಂಗ್ರೆಸ್​​ನ ಐಟಿ ಸೆಲ್​ನಲ್ಲಿದ್ದ ಸಸಿಕಾಂತ್ ಸೆಂಥಿಲ್

ಮಾಜಿ ಐಎಸ್​ಎ ಅಧಿಕಾರಿ ಸಸಿಕಾಂತ್​ ಸೆಂಥಿಲ್​ ಕಾಂಗ್ರೆಸ್​ ಸೇರಿದಾಗಿನಿಂದಲೂ ಕರ್ನಾಟಕ ಕಾಂಗ್ರೆಸ್​ನ ಐಟಿ ಸೆಲ್​ನಲ್ಲಿದ್ದರು. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ನೆರವಾಗಿದ್ದೇ 5 ಗ್ಯಾರಂಟಿ ಯೋಜನೆಗಳು. ಆ 5 ಗ್ಯಾರಂಟಿ ಯೋಜನೆಗಳ ಹಿಂದೆ ಸಸಿಕಾಂತ್ ಸೆಂಥಿಲ್​ ಪ್ರಮುಖ ಪಾತ್ರವಾಗಿತ್ತು.. ಇದೀಗ ಅವರಿಗೆ ಕಾಂಗ್ರೆಸ್​ ತಿರುವಳ್ಳೂರು ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್​ ನೀಡಿದೆ.

ಇನ್ನು 4ನೇ ಪಟ್ಟಿಯಲ್ಲಿ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಹೆಸರಿದ್ದು, ಅವರು ಶಿವಗಂಗಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಿಎಸ್‌ಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಪ್ತರೂ ಆದ ಡ್ಯಾನಿಶ್‌ ಅಲಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಡ್ಯಾನಿಶ್‌ ಅಲಿ ಅವರು ಉತ್ತರ ಪ್ರದೇಶ ಅಮ್ರೋಹದಿಂದ ಕಣಕ್ಕಿಳಿದಿದ್ದಾರೆ. ಆದ್ರೆ ಕಾಂಗ್ರೆಸ್‌ 4ನೇ ಪಟ್ಟಿಯಲ್ಲಿ ಕರ್ನಾಟಕದ ಬಾಕಿ ಇರುವ 4 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿಲ್ಲ.. ಲೋಕಸಭೆ ಸಮರಕ್ಕೆ ಇದುವರೆಗೆ 183 ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ನ​ 4ನೇ ಪಟ್ಟಿ ಔಟ್.. ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ ಮಾಡೋ ಅಭ್ಯರ್ಥಿ ಇವರೇ

https://newsfirstlive.com/wp-content/uploads/2024/03/PM_MODI_CONGRESS_RAI.jpg

Load More