newsfirstkannada.com

Breaking: ರಾಯ್ ಬರೇಲಿಯಿಂದ ರಾಹುಲ್ ಸ್ಪರ್ಧೆ.. ಅಮೇಥಿ ಕ್ಷೇತ್ರ ಬೇರೆಯವರಿಗೆ ಬಿಟ್ಟುಕೊಟ್ಟ ಗಾಂಧಿ ಕುಟುಂಬ!

Share :

Published May 3, 2024 at 8:22am

    ಚುನಾವಣಾ ಕಣದಿಂದ ದೂರ ಉಳಿದ ಪ್ರಿಯಾಂಕಾ ಗಾಂಧಿ ವಾದ್ರಾ

    ನಾಮಪತ್ರ ಸಲ್ಲಿಕೆಗೆ ಕೆಲವೇ ಗಂಟೆಗಳು ಬಾಕಿ, ಅಭ್ಯರ್ಥಿಗಳ ಹೆಸರು ಪ್ರಕಟ

    ಅಮೇಥಿ ಕ್ಷೇತ್ರದಿಂದ ಕಾಂಗ್ರೆಸ್ ಇಳಿಸುತ್ತಿರುವ ಅಭ್ಯರ್ಥಿ ಯಾರು?

ಕೊನೆಗೂ ಸಸ್ಪೆನ್ಸ್​ ಆಗಿಯೇ ಉಳಿದಿದ್ದ ಉತ್ತರ ಪ್ರದೇಶದ ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾದ ಹಿನ್ನೆಲೆಯಲ್ಲಿ ರಾಯ್ ಬರೇಲಿ ಹಾಗೂ ಅಮೇಥಿ ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಹಿರಂಗ ಮಾಡಿದೆ.

ಇದನ್ನೂ ಓದಿ:ನಾಮಪತ್ರ ಸಲ್ಲಿಕೆಗೆ ಇವತ್ತೇ ಕೊನೆ ದಿನ.. ಕಾಂಗ್ರೆಸ್​​ನಲ್ಲಿ ಇನ್ನೂ ಮೌನ! ಆ 2 ಕ್ಷೇತ್ರ ಸಸ್ಪೆನ್ಸ್​​.. ಸಸ್ಪೆನ್ಸ್​​.. ಸಸ್ಪೆನ್ಸ್​..!

ರಾಯ್ ​ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿದ್ದರೆ, ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾಗೆ ಟಿಕೆಟ್ ನೀಡಿದೆ. ಕೊನೆಗೂ ಅಮೇಥಿ ಲೋಕ ಸಭೆ ಕ್ಷೇತ್ರವನ್ನು ಗಾಂಧಿ ಕುಟುಂಬ ಬೇರೆಯವರಿಗೆ ಬಿಟ್ಟುಕೊಟ್ಟಿದೆ. ಈ ಬಾರಿಯೂ ಸ್ಪರ್ಧೆ ಮಾಡಿ ನೋಡೊಣ ಅಂತಾ ಸ್ಮೃತಿ ಇರಾನಿ ಚಾಲೇಂಜ್ ಹಾಕಿದ್ದರು. ಮಾತ್ರವಲ್ಲ ಅವರು ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧೆಗೆ ನಿಂತಿರೋದಕ್ಕೆ ರಾಹುಲ್‌ಗಾಂಧಿ ಪಲಾಯನ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ಆರೋಪ ಮಾಡಿದ್ದರು.

ಇದನ್ನೂ ಓದಿ:ಅಂತೂ ಇಂತೂ ಬೆಂಗಳೂರಿಗೆ ಕೃಪೆ ತೋರಿದ ಮಳೆರಾಯ.. ಇವತ್ತೂ ಕೂಡ ಮಳೆ ಬರುತ್ತಾ..?

ಇತ್ತ ರಾಯ್​ ಬರೇಲಿಯಿಂದ ಪ್ರಿಯಾಂಕ ಗಾಂಧಿ ಸ್ಪರ್ಧೆ ಮಾಡ್ತಾರೆ ಎಂಬ ಸುದ್ದಿ ಇತ್ತು. ಪಟ್ಟಿ ಪ್ರಕಟ ಬೆನ್ನಲ್ಲೇ ಚುನಾವಣಾ ಕಣದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ದೂರ ಇರೋದು ಸ್ಪಷ್ಟವಾಗಿದೆ. ಇನ್ನು ರಾಹುಲ್ ಗಾಂಧಿ, ಈ ಬಾರಿಯೂ ಎರಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ವಯನಾಡು ಲೋಕಸಭೆ ಕ್ಷೇತ್ರಕ್ಕೆ ಈಗಾಗಲೇ ಚುನಾವಣೆ ನಡೆದಿದೆ. ರಾಯ್ ಬರೇಲಿಯಲ್ಲಿ ಮೇ 20 ರಂದು ಮತದಾನ ನಡೆಯಲಿದೆ.

ಇದನ್ನೂ ಓದಿ:ಅಶ್ಲೀಲ ವಿಡಿಯೋ ಕೇಸ್​ನಲ್ಲಿ SIT ಸ್ಮಾರ್ಟ್​ ವರ್ಕ್​.. ಆ 4 ವಿಚಾರದ ಮೇಲೆಯೇ ಹೆಚ್ಚು ಫೋಕಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ರಾಯ್ ಬರೇಲಿಯಿಂದ ರಾಹುಲ್ ಸ್ಪರ್ಧೆ.. ಅಮೇಥಿ ಕ್ಷೇತ್ರ ಬೇರೆಯವರಿಗೆ ಬಿಟ್ಟುಕೊಟ್ಟ ಗಾಂಧಿ ಕುಟುಂಬ!

https://newsfirstlive.com/wp-content/uploads/2024/05/RAHUL-PRIYANKA-1.jpg

Load More