newsfirstkannada.com

ನಾಮಪತ್ರ ಸಲ್ಲಿಕೆಗೆ ಇವತ್ತೇ ಕೊನೆ ದಿನ.. ಕಾಂಗ್ರೆಸ್​​ನಲ್ಲಿ ಇನ್ನೂ ಮೌನ! ಆ 2 ಕ್ಷೇತ್ರ ಸಸ್ಪೆನ್ಸ್​​.. ಸಸ್ಪೆನ್ಸ್​​.. ಸಸ್ಪೆನ್ಸ್​..!

Share :

Published May 3, 2024 at 6:20am

Update May 3, 2024 at 8:00am

    ಬೃಹತ್​ ರೋಡ್​ ಶೋಗೂ ಅನುಮತಿ ಪಡೆದಿದೆ ಸ್ಥಳೀಯ ಕಾಂಗ್ರೆಸ್​​!

    ಆದರೆ ಸ್ಪರ್ಧಾ ಕಣದ ಅಭ್ಯರ್ಥಿ ಯಾರು ಅನ್ನೋದು ಖಚಿತತೆ ಇಲ್ಲ

    ನೆಹರೂ ಗಾಂಧಿ ಕುಟುಂಬದ ಭದ್ರಕೋಟೆಗೆ ಅಭ್ಯರ್ಥಿ ಯಾರು?

ಸಿನಿಮಾ ಪೋಸ್ಟರ್​ಗಳೇ ಇರಲಿ.. ಅಥವಾ ರಾಜಕೀಯ ನಾಯಕರ ಪೋಸ್ಟರ್​ಗಳೇ ಇರಲಿ.. ಒಂದಂತು ಸ್ಪಷ್ಟ.. ಈ ಪೋಸ್ಟರ್​ಗಳು ತಮ್ಮ ಬರುವಿಕೆಯ ಸಂದೇಶವನ್ನ ನೀಡ್ತವೆ.. ಇತ್ತ, ಅಮೇಥಿ ಮತ್ತು ರಾಯ್​ಬರೇಲಿಯಲ್ಲೂ ಈ ಪೋಸ್ಟರ್​​​ಗಳು ಸಂದೇಶ ನೀಡ್ತಿವೆ.. ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಫೋಟೋಗಳು ರಾರಾಜಿಸ್ತಿವೆ.. ಆದ್ರೆ, ನಾಮಪತ್ರ ಸಲ್ಲಿಕೆಗೆ ಇವತ್ತೇ ಕೊನೇ ದಿನ ಆಗಿದ್ರೂ ಈವರೆಗೂ ಈ ಎರಡು ಕ್ಷೇತ್ರಕ್ಕೆ ಅಭ್ಯರ್ಥಿ ಫೈನಲ್​ ಆಗಿಲ್ಲ.

ಸಸ್ಪೆನ್ಸ್​​.. ಸಸ್ಪೆನ್ಸ್​​.. ಸಸ್ಪೆನ್ಸ್​.. ರಾತ್ರಿ ಕಳೆದು, ಬೆಳಕು ಹರಿದರು ಮುಗಿಯದ ಗೊಂದಲ.. ತಡರಾತ್ರಿ ತನಕ ಮೀಟಿಂಗ್​ ನಡೆದ್ರೂ ಸಸ್ಪೆನ್ಸ್​ಗೆ ತೆರೆ ಬೀಳಲೇ ಇಲ್ಲ.. ಅಷ್ಟಕ್ಕೂ ನಾವ್​ ಹೇಳ್ತಿರೋದು ಆ ಎರಡು ಕ್ಷೇತ್ರಗಳ ಬಗ್ಗೆ.. ದಶಕಗಳ ಕಾಲ ನೇಹರೂ ಗಾಂಧಿ ಕುಟುಂಬದ ಭದ್ರಕೋಟೆಗಳಾದ ರಾಯ್​ಬರೇಲಿ ಮತ್ತು ಅಮೇಥಿಗೆ ಕಾಂಗ್ರೆಸ್​​ ಅಭ್ಯರ್ಥಿ ಯಾರು ಅನ್ನೋದಕ್ಕೆ ತೆರೆಯೇ ಬಿದ್ದಿಲ್ಲ.

ಇದನ್ನೂ ಓದಿ:ಅಶ್ಲೀಲ ವಿಡಿಯೋ ಕೇಸ್​ನಲ್ಲಿ SIT ಸ್ಮಾರ್ಟ್​ ವರ್ಕ್​.. ಆ 4 ವಿಚಾರದ ಮೇಲೆಯೇ ಹೆಚ್ಚು ಫೋಕಸ್​..!

ಅಮೇಥಿ, ರಾಯ್​ಬರೇಲಿ.. ಗಾಂಧಿ-ನೆಹರೂ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆಗಳು.. 7 ಹಂತಗಳ ಪೈಕಿ 5ನೇ ಹಂತದಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್​ಬರೇಲಿಗೆ ಮೇ 20ಕ್ಕೆ ಮತದಾನ ನಡೆಯಲಿದೆ. ಈ ಎರಡು ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಇವತ್ತೇ ಕೊನೇ ದಿನ.. ನಾಮಪತ್ರ ಸಲ್ಲಿಕೆಗೆ ಉಳಿದಿದ್ದು ಕೇವಲ 8 ಗಂಟೆ ಮಾತ್ರ.. ಕಾಂಗ್ರೆಸ್‌ನ ಪ್ರಮುಖ ಮುಖಗಳಾದ ರಾಹುಲ್, ಪ್ರಿಯಾಂಕಾ ಇಲ್ಲಿಂದ ಸ್ಪರ್ಧಿಸ್ತಾರೋ? ಇಲ್ವೋ? ಅನ್ನೋ ನಿರ್ಧಾರವಾಗಿಲ್ಲ..

ಅಮೇಥಿ, ರಾಯ್​ಬರೇಲಿಯಲ್ಲಿ ರಾಹುಲ್​, ಪ್ರಿಯಾಂಕಾ ಪೋಸ್ಟರ್​!
ಮತ್ತೊಮ್ಮೆ ಅಮೇಥಿಯಲ್ಲಿ ರಾಹುಲ್​ ಗಾಂಧಿ ಕಣಕ್ಕಿಳಿಯುತ್ತಾರೋ ಇಲ್ವೋ ಗೊತ್ತಿಲ್ಲ.. ಅಮೇಥಿಯ ಕಾಂಗ್ರೆಸ್​​​ ಕಚೇರಿ ಸೇರಿ ಇಡೀ ಸಿಟಿಯಲ್ಲಿ ಹೊಸ ಪೋಸ್ಟರ್​​​ಗಳು ಕಾಣಿಸಿವೆ.. ಇತ್ತ, ರಾಯ್​ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಬೆಂಬಲಿಗರು ಪೋಸ್ಟರ್​ಗಳ ಅಂಟಿಸಿದ್ದಾರೆ.. ಇಂಟ್ರಸ್ಟಿಂಗ್​​​ ಅಂದ್ರೆ ಈ ಎರಡೂ ಕ್ಷೇತ್ರದಲ್ಲಿ ಇವತ್ತಿನ ಬೃಹತ್​ ರೋಡ್​ಶೋಗೆ ಪರವಾನಿಗೆ ಪಡೆಯಲಾಗಿದೆ. 100 ಬೈಕ್​​, 51 ವಾಹನಗಳಿಗೆ ಅನುಮತಿ ಸಿಕ್ಕಿದೆ. ಅಮೇಥಿ ಮತ್ತು ರಾಯ್​ಬರೇಲಿ ಜನರಲ್ಲಿ ಈ ಱಲಿ ಯಾರಿಗಾಗಿ ಅನ್ನೋದು ತಿಳಿದೇ ಇಲ್ಲ.
ಅಮೇಥಿಯಿಂದ ಬಿಜೆಪಿ ಮತ್ತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನ ಕಣಕ್ಕಿಳಿಸಿದೆ.. 2014ರಲ್ಲಿ ಸೋತಿದ್ದ ಸ್ಮೃತಿ, 2019ರಲ್ಲಿ ರಾಹುಲ್​ಗೆ 55 ಸಾವಿರ ಮತಗಳ ಸೋಲಿನ ರುಚಿ ತೋರಿಸಿದ್ರು.. ಸ್ಮೃತಿ ಇರಾನಿ ಈಗಾಲಲೇ ಏಪ್ರಿಲ್ 29 ರಂದು ನಾಮಪತ್ರ ಸಲ್ಲಿಸಿದ್ದಾರೆ.. ಈಗ 3ನೇ ಬಾರಿಗೆ ರಾಹುಲ್​-ಸ್ಮೃತಿ ಇಬ್ಬರು ಎದುರು ಬದುರಾಗ್ತಾರಾ ಗೊತ್ತಿಲ್ಲ..

ಇದನ್ನೂ ಓದಿ:ಅಂತೂ ಇಂತೂ ಬೆಂಗಳೂರಿಗೆ ಕೃಪೆ ತೋರಿದ ಮಳೆರಾಯ.. ಇವತ್ತೂ ಕೂಡ ಮಳೆ ಬರುತ್ತಾ..?

ಅಮೇಥಿ ಬದಲಿಗೆ ರಾಯ್​ಬರೇಲಿಯಲ್ಲಿ ಸ್ಪರ್ಧಿಸ್ತಾರಾ ರಾಹುಲ್​?
ಕಾಂಗ್ರೆಸ್​ನ ಉನ್ನತ ಮೂಲಗಳ ಪ್ರಕಾರ ರಾಹುಲ್​ ಅಮೇಥಿ ಬದಲು, ರಾಯ್​ಬರೇಲಿಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.. ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಸೀಮಿತರಾಗಲು ನಿರ್ಧರಿಸಿದ್ದು, ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ ಅಂತ ಗೊತ್ತಾಗಿದೆ.. ಸದ್ಯ ರಾಹುಲ್ ಕೇರಳದ ವಯನಾಡಿನಿಂದಲೇ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ.. ರಾಹುಲ್​​​​ ದಕ್ಷಿಣಕ್ಕೆ ವಲಸೆ ಅಂತ ಬಿಜೆಪಿ ಆರೋಪಿಸ್ತಿದ್ದು, ಇದರಿಂದ ಬಚಾವ್​ ಆಗಲು ರಾಯ್​ಬರೇಲಿ ಆಯ್ಕೆ ಮಾಡ್ಕೊಂಡಿದ್ದಾರೆ.. ಆದ್ರೆ, ಅಮೇಥಿಯಿಂದ ಗಾಂಧಿ ಪರಿವಾರದ ಅತ್ಯಂತ ನಿಷ್ಠ ಕೆ.ಎಲ್​​ ಶರ್ಮಾ ಕಣಕ್ಕಿಳಿಯುವ ಸಾಧ್ಯತೆ ಇದೆ..

ಒಟ್ಟಾರೆ, ಎರಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಸಸ್ಪೆನ್ಸ್ ಇಂದು ಕೊನೆಗೊಳ್ಳಲಿದೆ.. ನಾಮಪತ್ರ ಸಲ್ಲಿಕೆಗೆ ಇವತ್ತೇ ಕೊನೆ ದಿನವಾಗಿದ್ದು ಕೆಲವೇ ಕ್ಷಣಗಳಲ್ಲಿ ಅಭ್ಯರ್ಥಿಗಳ ಘೋಷಣೆ ಆಗುವ ಸಾಧ್ಯತೆ ಇದೆ.. ಅಷ್ಟಕ್ಕೂ ಈ ಎರಡು ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಆಗ್ತಾರೆ ಅನ್ನೋದೇ ಕುತೂಹಲ.

ಇದನ್ನೂ ಓದಿ:ಇನ್​ಸ್ಟಾದಲ್ಲಿ ಅರಳಿದ ಒಂದು ಪ್ರೀತಿ..! ಯಾಕೆ ಹೀಗೆ ಆಯಿತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.. ಏನಂತೀರಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಮಪತ್ರ ಸಲ್ಲಿಕೆಗೆ ಇವತ್ತೇ ಕೊನೆ ದಿನ.. ಕಾಂಗ್ರೆಸ್​​ನಲ್ಲಿ ಇನ್ನೂ ಮೌನ! ಆ 2 ಕ್ಷೇತ್ರ ಸಸ್ಪೆನ್ಸ್​​.. ಸಸ್ಪೆನ್ಸ್​​.. ಸಸ್ಪೆನ್ಸ್​..!

https://newsfirstlive.com/wp-content/uploads/2024/05/RAHUL-PRIYANKA.jpg

Load More