newsfirstkannada.com

ಇನ್​ಸ್ಟಾದಲ್ಲಿ ಅರಳಿದ ಒಂದು ಪ್ರೀತಿ..! ಯಾಕೆ ಹೀಗೆ ಆಯಿತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.. ಏನಂತೀರಾ?

Share :

Published May 1, 2024 at 1:43pm

Update May 1, 2024 at 1:44pm

    ಪ್ರೀತಿ ಯಾಕೆ..? ಕನಸು ಯಾಕೆ..? ಏನಂತೀರಾ..?

    ಗೊತ್ತಿಲ್ಲದೇ ಪ್ರೀತಿಯಲ್ಲಿ ಬಿದ್ದಿದ್ದೀರಾ.. ಈ ಸ್ಟೋರಿ ಓದಿ..!

    ಇಲ್ಲಿ ಪ್ರೀತಿಗೆ ಇನ್​​ಸ್ಟಾ ಸೇತುವೆ.. ಬ್ರೇಕ್​​​ ಅಪ್​​ಗೆ ಆ ಭೇಟಿ..!

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತೊಂದು ಇದೆ. ಸೋಶಿಯಲ್ ಮೀಡಿಯಾ ಬಳಸುವ ಯುವಕರು, ಯುವತಿಯರು ಈ ಸ್ಟೋರಿಯನ್ನು ಮುದ್ದಾಮು ಓದಲೇಬೇಕು. ಯಾಕೆಂದರೆ ನೀವು ಕೂಡ ಯಾಮಾರಿ ಅಡ್ಡದಾರಿ ಹಿಡಿದರೆ ಅಚ್ಚರಿ ಇಲ್ಲ. ಅದಕ್ಕೆ ಸ್ವಲ್ಪ ಹುಷಾರಾಗಿರಿ..!

ವಿಷಯ ಏನಂದ್ರೆ.. ಉತ್ತರ ಪ್ರದೇಶ ರಾಜ್ಯದ ಕಾನ್ಪುರ ಮೂಲದ 20 ವರ್ಷದ ಯುವಕನಿಗೆ ಸೋಶಿಯಲ್ ಮೀಡಿಯಾ ಹುಚ್ಚು. ಇನ್​ಸ್ಟಾಗ್ರಾಮ್, ಫೇಸ್​ಬುಕ್, ಟಿಲಿಗ್ರಾಮ್, ವಾಟ್ಸ್​ಆ್ಯಪ್​ ಸೇರಿದಂತೆ ಎಲ್ಲಾ ಪ್ಲಾಟ್​ಫಾರ್ಮ್​ನಲ್ಲೂ ಸಕ್ರಿಯ ಹುಡುಗ. ಆಗಷ್ಟೇ 18 ವರ್ಷ ಪೂರೈಸಿ ಯೌವನಕ್ಕೆ ಕಾಲಿಡ್ತಿದ್ದಂತೆಯೇ ಹೆಣ್ಮಕ್ಕಳ ಮೇಲೆ ಆಕರ್ಷಣೆ ಜಾಸ್ತಿ ಆಗುತ್ತ ಹೋಯಿತು.

ಇದನ್ನೂ ಓದಿ:ಆರ್​ಸಿಬಿ ಫ್ಯಾನ್ಸ್​ಗೆ ವಿಲ್​ ಜಾಕ್ಸ್ ರಿಚಾರ್ಜ್​.. ಹೀಗೂ ಇದೆ ಪ್ಲೇ ಆಫ್​ ಲೆಕ್ಕಾಚಾರ..!

ಎಲ್ಲರಂತೆ ತಾನೂ ಪ್ರೀತಿಯಲ್ಲಿ ಬೀಳಬೇಕು. ಜೋಡಿ ಹಕ್ಕಿಯಾಗಿ ಹಾರಾಡಬೇಕು ಅಂದ್ಕೊಂಡು ಕನಸು ಕಂಡಿದ್ದ. ಒಂದು ದಿನ ಏನಾಯ್ತು ಅಂದರೆ.. ಕೈಯಲ್ಲಿದ್ದ ಮೊಬೈಲ್​​​ ತೆಗೆದುಕೊಂಡು ಇನ್​ಸ್ಟಾ ಗ್ರಾಮ್ ಸ್ಕ್ರಾಲ್ ಮಾಡ್ತಿದ್ದಾಗ ತರುಣಿಯೊಬ್ಬಳ ಪ್ರೊಫೈಲ್ ಕಾಣಿಸಿದೆ. ಇಂಪ್ರೆಸ್ ಆದ ಯುವಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಆ ಕಡೆಯಿಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಲ್ಪಿಟ್ಟಿದೆ. ಕನಸುಗಳ ಕೈಗೆ ರೆಕ್ಕೆ ಅಂದೇ ಬಂದು ಬಿಡ್ತು. ಅದಕ್ಕೆ ಸೇತುವೆ ಆಗಿದ್ದು ಇನ್​ಸ್ಟಾಗ್ರಾಮ್.

ದಿನಗಳು ಕಳೆದ ಮೇಲೆ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ಸ್ನೇಹ ಆತ್ಮೀಯತೆಗೆ ತಿರುಗಿತು. ಆತ್ಮೀಯತೆ ಪ್ರೀತಿ ಆಯಿತು. ಆ ಪ್ರೀತಿ ಇಬ್ಬರಲ್ಲೂ ಹೊಸ ಕನಸುಗಳನ್ನು ಕಟ್ಟಿಕೊಟ್ಟಿತು. ಕನಸುಗಳ ಸಾಕಾರಕ್ಕಾಗಿ ಇಬ್ಬರೂ ಪರಸ್ಪರ ಭೇಟಿ ಆಗಲು ನಿರ್ಧರಿಸಿದ್ದರು.

ಮುಂದೆ..?
ಅಂತೆಯೇ ಒಂದು ದಿನ ಕನಸಿನ ಹುಡುಗಿ ನೋಡಲು ಯುವಕ ಬಂದಿದ್ದಾನೆ. ಆತನ ಮನದರಸಿ, ಕಲ್ಪನೆಯ ಹುಡುಗಿ ಆ ಯುವಕನ ಎದುರುಗೊಳ್ಳುತ್ತಾಳೆ. ಆಕೆಯನ್ನು ನೋಡ್ತಿದ್ದಂತೆಯೇ ಆತನಿಗೆ ದಿಗಿಲು ಹುಟ್ಟಿದೆ. ಇದು ನಿಜಾನಾ? ಕನಸಾ? ಎಂದು ನಡುಕ ಶುರುವಾಗಿದೆ. ಜೊತೆಗೆ ಕೋಪ ಕೂಡ ಬಂದಿದೆ. ಸ್ವಲ್ಪ ಸುಧಾರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ, ಆಕೆ ಮಾಡಿದ ಕೆಲವು ವರ್ತನೆಗಳು, ಮಾತುಗಳು ಮತ್ತಷ್ಟು ಕೋಪ ತರಿಸಿದೆ.

ಇದನ್ನೂ ಓದಿ:ಆಯ್ಕೆ ಆಗೇ ಆಗ್ತೀನಿ ಅನ್ಕೊಂಡವ್ರಿಗೆ ಬಿಗ್ ಶಾಕ್.. ಯಾರಿಗೂ ಕಾಂಪ್ರಮೈಸ್ ಆಗದ ಬಿಸಿಸಿಐ

ಸಿಟ್ಟಿಗೆ ಬುದ್ಧಿಕೊಟ್ಟ ದೀಪೇಂದ್ರ ಸಿಂಗ್, ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ಎಳೆದಾಡಿದ್ದಾನೆ, ಜಗಳವಾಡಿದ್ದಾನೆ. ಕೊನೆಗೆ ಆಕೆಯ ಜೊತೆಗಿದ್ದ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಮದುವೆ ಆಗಬೇಕು ಅಂದ್ಕೊಂಡಿದ್ದ 20 ವರ್ಷದ ಯುವಕ, ಅಪರಾಧ ಮಾಡಿ, ಇದೇ ನನ್ನ ಕೊನೆಯ ಭೇಟಿ. ಕೊನೆಯ ಮಾತುಕತೆ, ಕೊನೆಯ ಇನ್ಸಿಡೆಂಟ್ ಎಂದು ಎಸ್ಕೇಪ್ ಆಗಿದ್ದಾನೆ.

ಇತ್ತ ನನಗೆ ಕೊನೆಗೂ ಸಂಗಾತಿ ಸಿಕ್ಕಬಿಟ್ಟ ಅಂದ್ಕೊಂಡಿದ್ದವಳು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಪ್ರೀತಿ ಮಾಡಿ ಹಿಂಗಾ ಮೋಸ ಮಾಡೋದು. ಪ್ರೀತಿಯೂ ಇಲ್ಲ, ಮೊಬೈಲೂ ಇಲ್ಲ. ಅಂಥ ತಪ್ಪು ನಾನೇನು ಮಾಡಿದೆ? ಎಂದು ಕಣ್ಣೀರು ಹಾಕುತ್ತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪೊಲೀಸರ ಮುಂದೆ ತಾನು ಪ್ರೀತಿಸಿದ ಹುಡುಗನ ಮೇಲೆ ದೂರುಗಳ ಸುರಿಮಳೆ ಇಟ್ಟಿದ್ದಾಳೆ.

ಯಾಕೆ ಹೀಗೆಲ್ಲ ಆಯ್ತು..?
ಕತೆಯ ಹೀರೋ ದೀಪೇಂದ್ರ ಸಿಂಗ್ ಎಂಬ ಯುವಕ. ಆತನ ವಯಸ್ಸು ಕೇವಲ 20. ಇನ್​ಸ್ಟಾಗ್ರಾಮ್ ಪ್ರೊಫೈಲ್ ನೋಡಿ ದೀಪೇಂದ್ರ ಸಿಂಗ್ ಯಾಮಾರಿದ್ದ, ಮೋಸ ಹೋಗಿದ್ದ. ಸುಂದರ ತರುಣಿ ಆ ಪ್ರೊಫೈಲ್​ನಲ್ಲಿದ್ದಳು. ಆದರೆ ಭೇಟಿಗೆ ಬಂದಾಗ ತಾನು ಕನಸು ಕಂಡಿದ್ದ, ಸೋಶಿಯಲ್ ಮೀಡಿಯಾದ ಪ್ರೊಫೈಲ್​ನಲ್ಲಿ ನೋಡಿದ್ದ ಹುಡುಗಿ ಅದಾಗಿರಲಿಲ್ಲ. ಆಕೆಯ ವಯಸ್ಸು ಹಾಗೂ ದೇಹವನ್ನು ನೋಡಿ ದೀಪೇಂದ್ರ ಸಿಂಗ್ ಹೌಹಾರಿ ಹೋಗಿದ್ದ. 45 ವರ್ಷದ ಮಹಿಳೆ ಅವಳಾಗಿದ್ದಳು. ಆಕೆಗೆ ವಯಸ್ಸು 45 ಎನ್ನುತ್ತಿದ್ದಂತೆಯೇ, ದೀಪೇಂದ್ರ ಸಿಂಗ್ ಸಿಟ್ಟು ನೆತ್ತಿಗೇರಿತ್ತು. ಅದಕ್ಕೆ ಆಕೆ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಓಡಿ ಹೋಗಿದ್ದಾನೆ.

ಇದನ್ನೂ ಓದಿ: ಗ್ರಾಹಕರಿಗೆ ಗುಡ್​ ನ್ಯೂಸ್.. ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ಕೇಸ್ ದಾಖಲಿಸಿಕೊಂಡ ಪೊಲೀಸರು ದೀಪೇಂದ್ರ ಸಿಂಗ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರ ಮಧ್ಯೆ ನಡೆದ ಪ್ರೀತಿಯ ಕತೆಯನ್ನು ಹೇಳಿದ್ದಾನೆ. ಸೋಶಿಯಲ್ ಮೀಡಿಯಾದಿಂದ ನಾನು ಯಾಮಾರಿ ತಪ್ಪು ಮಾಡಿ ಜೈಲು ಸೇರಿದೆ ಎಂದು ಪಶ್ಚಾತಾಪ ಪಟ್ಟುಕೊಳ್ತಿದ್ದಾನಂತೆ. ಇತ್ತ ಪ್ರೀತಿ ಹೆಸರಲ್ಲಿ ನನಗೆ ಮೋಸ ಆಗಿದೆ ನ್ಯಾಯ ಕೊಡಿಸಿ ಎಂದು ಮಹಿಳೆ ಕೂಡ ಪೊಲೀಸರ ಕಾಲು ಹಿಡಿದಿದ್ದಾಳೆ. ಇದರಿಂದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅದಕ್ಕೆ ಹೇಳೋದು ಹುಷಾರಾಗಿ ಅಂತಾ. ಏನಂತೀರಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್​ಸ್ಟಾದಲ್ಲಿ ಅರಳಿದ ಒಂದು ಪ್ರೀತಿ..! ಯಾಕೆ ಹೀಗೆ ಆಯಿತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.. ಏನಂತೀರಾ?

https://newsfirstlive.com/wp-content/uploads/2024/05/INSTA-LOVE-1.jpg

Load More