newsfirstkannada.com

ಆಯ್ಕೆ ಆಗೇ ಆಗ್ತೀನಿ ಅನ್ಕೊಂಡವ್ರಿಗೆ ಬಿಗ್ ಶಾಕ್.. ಯಾರಿಗೂ ಕಾಂಪ್ರಮೈಸ್ ಆಗದ ಬಿಸಿಸಿಐ

Share :

Published May 1, 2024 at 9:42am

    ಟಿ-20 ವಿಶ್ವಕಪ್​​ಗೆ ಟೀಮ್ ಇಂಡಿಯಾ ಅನೌನ್ಸ್​

    ವಿಶ್ವಕಪ್ ಮಹಾಸಮರಕ್ಕೆ 15 ವೀರ ಕಲಿಗಳು ಸನ್ನದ್ಧ

    ಯಂಗ್​ ಇಂಡಿಯಾ ಕಟ್ಟಿದ ಬಿಸಿಸಿಐ, ಯಾರಿಗೆ ಜಾಕ್​ಪಾಟ್?

ಕೊನೆಗೂ ಎಲ್ಲಾ ಕಾಯುವಿಕೆಗೆ ತೆರೆ ಬಿದ್ದಿದೆ. ತಡವಾದ್ರು ಮುಂಬರೋ ಟಿ20 ವಿಶ್ವಕಪ್​ ಟೂರ್ನಿಗೆ ಬಿಸಿಸಿಐ ಬಲಿಷ್ಠ ಟೀಮ್ ಇಂಡಿಯಾವನ್ನ ಪ್ರಕಟಿಸಿದೆ. ಆಯ್ಕೆ ಆಗೇ ಆಗ್ತೀನಿ ಅನ್ನುವ ನಿರೀಕ್ಷೆಯಲ್ಲಿದ್ದವರಿಗೆ ಸೆಲೆಕ್ಟರ್ಸ್​​ ಶಾಕ್ ನೀಡಿದ್ದಾರೆ. ಕೆಲವರಿಗೆ ಬಂಪರ್​ ಲಾಟರಿ ಹೊಡೆದಿದೆ.

T20 ವಿಶ್ವಕಪ್​​ಗೆ ಟೀಮ್ ಇಂಡಿಯಾ ಅನೌನ್ಸ್​​
ಸೆಲೆಕ್ಟರ್ಸ್​ ಟಿ20 ವಿಶ್ವಕಪ್​​​​​​​​ಗೆ ಸಂಬಂಧಿಸಿದಂತೆ ಎಲ್ಲಾ ಅಂತೆ ಕಂತೆಗಳಿಗೆ ಫುಲ್​​​ಸ್ಟಾಪ್ ಹಾಕಿದ್ದಾರೆ. ಪಕ್ಕಾ ಲೆಕ್ಕಾಚಾರ ಹಾಕಿ ಟೀಮ್ ಅನೌನ್ಸ್ ಮಾಡಿದ್ದಾರೆ. ಐಪಿಎಲ್ ಪ್ರದರ್ಶನ ಪರಿಗಣಿಸದೇ, ಯಾರಿಗೂ ಕಾಂಪ್ರಮೈಸ್​ ಆಗದೇ ಬಲಿಷ್ಠ ತಂಡವನ್ನ ಪ್ರಕಟಿಸಿದ್ದಾರೆ. ಯಾರ ಮುಲಾಜಿಲ್ಲದೇ, ಸ್ಟಾರ್​​​ಗಿರಿ ಬದಿಗೊತ್ತಿ 15 ಅತಿರಥ ಮಹಾರಥರ ಯಂಗ್ ಇಂಡಿಯಾವನ್ನ ವೆಸ್ಟ್​ಇಂಡೀಸ್ ಹಾಗೂ ಅಮೆರಿಕಾಗೆ ಕಳುಹಿಸಲಿದೆ. ಅಳೆದು ತೂಗಿ ತಂಡವನ್ನ ಪ್ರಕಟಿಸಿರೋ ಸೆಲೆಕ್ಟರ್ಸ್​ ಬಲಾಢ್ಯ ಟಾಪ್ ಆರ್ಡರ್​​​​​​​​​​​​​​​ ಕಟ್ಟಿದೆ. ಇವರು ಸಿಡಿದೆದ್ರೆ ಎದುರಾಳಿ ತಂಡದ ಕಥೆ ಖತಂ ಆಗೋದು ಗ್ಯಾರಂಟಿ.

ಇದನ್ನೂ ಓದಿ: ಗ್ರಾಹಕರಿಗೆ ಗುಡ್​ ನ್ಯೂಸ್.. ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ಟಾಪ್ ಆರ್ಡರ್
ಕ್ಯಾಪ್ಟನ್ ರೋಹಿತ್​ ಶರ್ಮಾ, ಯಶಸ್ವಿ ಜೈಸ್ವಾಲ್​​​​​​​ ಓಪನರ್​​ಗಾಗಿ ಆಡಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಡೇಂಜರಸ್ ಸೂರ್ಯಕುಮಾರ್ ಯಾದವ್ ಕೂಡ ಟಾಪ್​ ಆರ್ಡರ್​ನಲ್ಲಿದ್ದಾರೆ. 15 ಸದಸ್ಯರ ತಂಡದಲ್ಲಿ ಇಬ್ಬರು ವಿಕೆಟ್​ ಕೀಪರ್​ಗಳಿಗೆ ಸೆಲೆಕ್ಟರ್ಸ್​ ಮಣೆ ಹಾಕಿದ್ದಾರೆ. ಈ ಇಬ್ಬರಿಗೂ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ತಾಕತ್ತು ಹೊಂದಿದ್ದಾರೆ.

ವಿಕೆಟ್ ಕೀಪರ್ಸ್​
ವಿಕೆಟ್ ಕೀಪರ್​​ಗಳಾಗಿ ರಿಷಬ್​ ಪಂತ್ ಹಾಗೂ ಬಿಗ್​​ ಹಿಟ್ಟರ್​ ಸಂಜು ಸ್ಯಾಮ್ಸನ್​​ ಆಯ್ಕೆಯಾಗಿದ್ದಾರೆ. ಪಂತ್​ ಲಾಂಗ್​ ಗ್ಯಾಪ್​​ನ ಬಳಿಕ ಕಮ್​ಬ್ಯಾಕ್​ ಮಾಡಿದ್ರೆ, ಸಂಜುಗೆ ಅದೃಷ್ಟ ಖುಲಾಯಿಸಿದೆ. ವಿಶ್ವಕಪ್​ನಂತ ಗ್ಲೋಬಲ್ ಈವೆಂಟ್ ಗೆಲ್ಲಬೇಕಾದ್ರೆ ಆಲ್​ರೌಂಡರ್ಸ್​ ಬಹುಮುಖ್ಯ. ಅದನ್ನ ಪರಿಗಣಿಸಿಯೇ ಸೆಲೆಕ್ಟರ್ಸ್​ ಇಬ್ಬರು ಪೇಸ್​​​ ಆಲ್​ರೌಂಡರ್​ಗಳಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.

ಇದನ್ನೂ ಓದಿ:ಭೀಕರ ಅಪಘಾತ.. ಕಂದಕಕ್ಕೆ ಉರುಳಿದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​

ಪೇಸ್​ ಆಲ್​ರೌಂಡರ್ಸ್
ನಿರೀಕ್ಷೆಯಂತೆ ಹಾರ್ದಿಕ್​ ಪಾಂಡ್ಯ ಆಲ್​ರೌಂಡರ್​ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪಾಂಡ್ಯಾಗೆ ಉಪನಾಯಕನ ಪಟ್ಟವನ್ನೂ ಕಟ್ಟಲಾಗಿದೆ. ಇವರ ಜೊತೆ ಯಂಗ್ ಸೆನ್ಷೆಷನ್​​ ಶಿವಂ ದುಬೆಗೂ ಜಾಕ್​ಪಾಟ್​ ಹೊಡೆದಿದೆ. ಸ್ಪಿನ್ನರ್ಸ್​ ಆಯ್ಕೆಯಲ್ಲೂ ಸೆಲೆಕ್ಟರ್ಸ್​ ಸಮರ್ಥರಿಗೆ ಮಣೆ ಹಾಕಿದ್ದಾರೆ. ಇವರ ಅಪಾರ ಅನುಭವ ಹಾಗೂ ಪ್ರಸೆಂಟ್​ ಫಾರ್ಮ್​ ಡೆಫಿನೆಟ್ಲಿ ವಿಶ್ವಕಪ್​ನಲ್ಲಿ ತಂಡಕ್ಕೆ ನೆರವಾಗಲಿದೆ.

ಸ್ಪಿನ್ನರ್ಸ್​
ಮ್ಯಾಚ್​ ವಿನ್ನರ್​​​ ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್ ಸ್ಪಿನ್​ ಆಲ್​ರೌಂಡರ್​ಗಳಾಗಿ ತಂಡದಲ್ಲಿದ್ದಾರೆ. ಸ್ಪೆಷಲಿಸ್ಟ್​ ಸ್ಪಿನ್ನರ್​ಗಳಾಗಿ ಕುಲ್​ದೀಪ್​ ಯಾದವ್ ಹಾಗೂ ಯುಜವೇಂದ್ರ ಚಹಲ್​ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫಾಸ್ಟ್​ ಬೌಲಿಂಗ್ ವಿಭಾಗ ತಂಡಕ್ಕೆ ದೊಡ್ಡ ಶಕ್ತಿ. ಅದನ್ನ ನಿಜವಾಗಿಸುವ ನಿಟ್ಟಿನಲ್ಲಿ ಮೂವರು ಸ್ಟಾರ್​​​ ವೇಗಿಗಳು ವಿಶ್ವಕಪ್​​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:ಭಾರೀ ಮಳೆಗೆ ಕುಸಿದ ಅಣೆಕಟ್ಟು.. ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ.. ಪ್ರವಾಹ ಹೋದಲೆಲ್ಲ ನರಕದರ್ಶನ..!

ಫಾಸ್ಟ್​ ಬೌಲರ್ಸ್
ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರಿತ್ ಬೂಮ್ರಾ ಮೊದಲ ಆಯ್ಕೆ ವೇಗಿಯಾಗಿದ್ದಾರೆ. ಬೂಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್ ಹಾಗೂ ಆರ್ಷ್​ದೀಪ್ ಸಿಂಗ್​​ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 15 ಆಟಗಾರರ ಪ್ರಮುಖ ತಂಡದ ಜೊತೆ ನಾಲ್ವರು ರಿಸರ್ವ್​ ಆಟಗಾರರನ್ನ ಕೂಡ ಆಯ್ಕೆ ಸಮಿತಿ ಅನೌನ್ಸ್ ಮಾಡಿದೆ.

ರಿಸರ್ವ್​ ಆಟಗಾರರು
ಬ್ಯಾಟ್ಸ್​ಮನ್​​ಗಳಾದ ಶುಭ್​​ಮನ್ ಗಿಲ್​​​, ರಿಂಕು ಸಿಂಗ್ ರಿಸರ್ವ್​ ಪ್ಲೇಯರ್ಸ್​ಗಳಾಗಿದ್ದಾರೆ. ವೇಗಿಗಳ ಕೋಟಾದಲ್ಲಿ ಆವೇಶ್ ಖಾನ್ ಹಾಗೂ ಖಲೀಲ್​ ಅಹ್ಮದ್​​ ಸ್ಥಾನ ಪಡೆದಿದ್ದಾರೆ. ಒಟ್ಟಿನಲ್ಲಿ, ಅಳೆದು ತೂಗಿ ಲೆಕ್ಕಾಚಾರ ಹಾಕಿ ಬಿಸಿಸಿಐ ಬಲಿಷ್ಠ ತಂಡವನ್ನು ಟಿ20 ವಿಶ್ವಕಪ್​ಗೆ ಅಣಿಗೊಳಿಸಿದೆ. ಈ 15 ಆಟಗಾರರು ವೀರ ಸೇನಾನಿಗಳಂತೆ ಹೋರಾಡಿ 2ನೇ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಡ್ತಾರಾ? ಕಾದುನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆಯ್ಕೆ ಆಗೇ ಆಗ್ತೀನಿ ಅನ್ಕೊಂಡವ್ರಿಗೆ ಬಿಗ್ ಶಾಕ್.. ಯಾರಿಗೂ ಕಾಂಪ್ರಮೈಸ್ ಆಗದ ಬಿಸಿಸಿಐ

https://newsfirstlive.com/wp-content/uploads/2024/05/BCCI-1.jpg

Load More