newsfirstkannada.com

VIDEO: ಪಾಕ್ ಪರ ಘೋಷಣೆ ಆರೋಪ.. ಸದನದಲ್ಲಿ ಕೈ, ಕೈ ಮಿಲಾಯಿಸಲು ಹೋದ ನಾಯಕರು

Share :

Published February 28, 2024 at 12:48pm

    ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸದನದಲ್ಲಿ ಆಕ್ರೋಶ

    ಸದನದಲ್ಲಿ ಕೈ, ಕೈ ಮಿಲಾಯಿಸುವ ಹಂತಕ್ಕೆ ಹೋದ ಬಿಜೆಪಿ ನಾಯಕರು

    ಸದನದಲ್ಲಿ ಏಕವಚನ ಪ್ರಯೋಗ, ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡ ಘಟನೆ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ಕಲಾಪವನ್ನು ಮುಂದೂಡಿದರೂ ಸದನದ ಬಾವಿಗಿಳಿದ ನಾಯಕರು ಕೈ, ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದಾರೆ.

ವಿಧಾನಪರಿಷತ್‌ನಲ್ಲಿ ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರ ಅವರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪದ ವಿಚಾರವನ್ನು ಪ್ರಸ್ತಾಪ ಮಾಡಿದರು. ಈ ವೇಳೆ ಹಾಗೇ ಯಾರೂ ಘೋಷಣೆ ಕೂಗಿಲ್ಲ ಎಂದು ಸಲೀಂ ಅಹ್ಮದ್ ಉತ್ತರಿಸಿದರು. ಇದಕ್ಕೆ ಕೋಪಗೊಂಡ ಬಿಜೆಪಿ ಸದಸ್ಯ ರವಿಕುಮಾರ್ ಅವರು ಈ ಸರ್ಕಾರ ಆಡಳಿತ ನಡೆಸೋದಕ್ಕೆ ನಾಲಾಯಕ್ ಸರ್ಕಾರ, ಅಯೋಗ್ಯ ಸರ್ಕಾರ ಎಂದು ಹೇಳಿದರು.

ಸರ್ಕಾರದ ವಿರುದ್ಧ ಎನ್.ರವಿಕುಮಾರ್ ಅಬ್ಬರಿಸುವಾಗ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ವಾಗ್ದಾಳಿ ನಡೆಸಿದರು. ಆಗ ಅಬ್ದುಲ್ ಜಬ್ಬಾರ್ ವಿರುದ್ಧ ಬಿಜೆಪಿ ಸದಸ್ಯರು ಸಿಡಿದೆದ್ದು ಸದನದ ಬಾವಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪಾಕ್ ಪರ ಘೋಷಣೆ ವಿರುದ್ಧ ಕೇಸ್ ದಾಖಲಾಗಿದೆ, ಕೂಗಿದ್ರೆ ಕ್ರಮ- ಡಾ.ಜಿ.ಪರಮೇಶ್ವರ್ ಹೇಳಿಕೆ

ಸದಸ್ಯರು ಬಾವಿಗೆ ಬಂದ ತಕ್ಷಣವೇ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೂಡಲೇ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಿದರು. ಸದನ ಮುಂದೂಡಿಕೆ ಮಾಡಿದ್ರೂ ಬಿಜೆಪಿ ನಾಯಕರ ಅಬ್ಬರ ನಿಲ್ಲಲಿಲ್ಲ. ನಾನು ಈ ಸರ್ಕಾರವನ್ನು ದೇಶದ್ರೋಹದ ಸರ್ಕಾರ ಎನ್ನದೇ, ದೇಶಕ್ಕೆ ಒಳ್ಳೆಯದನ್ನು ಮಾಡುವ ಸರ್ಕಾರ ಎನ್ನಬೇಕೇ? ಇದು ನನಗೆ ನೋವಾಗುತ್ತದೆ ಎಂದ ರವಿಕುಮಾರ್ ಹೇಳಿದ್ದಾರೆ.

ಸದನದಲ್ಲಿ ಏಕವಚನ ಪ್ರಯೋಗ ಮಾಡಿದ್ದಕ್ಕೆ ಬಿಜೆಪಿಯ ಸದಸ್ಯ ತುಳಸಿ ಮುನಿರಾಜು ಗೌಡ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಸದನ ಬಾವಿಗೆ ಬಂದ ಮಾರ್ಷಲ್‌ಗಳು ಬಿಜೆಪಿ ಸದಸ್ಯರನ್ನು ಸಮಾಧಾನಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪಾಕ್ ಪರ ಘೋಷಣೆ ಆರೋಪ.. ಸದನದಲ್ಲಿ ಕೈ, ಕೈ ಮಿಲಾಯಿಸಲು ಹೋದ ನಾಯಕರು

https://newsfirstlive.com/wp-content/uploads/2024/02/Karnatka-Parishath.jpg

Load More