newsfirstkannada.com

ರಾಜ್ಯಸಭಾ ನಂಬರ್‌ ಗೇಮ್‌ನಲ್ಲಿ ಗೆಲ್ಲೋದು ಯಾರು? ಚುನಾವಣೆಯ ಪ್ರಕ್ರಿಯೆ ಹೇಗಿರುತ್ತೆ?

Share :

Published February 26, 2024 at 6:24pm

Update February 26, 2024 at 6:37pm

  ರಾಜ್ಯಸಭೆಗೆ ಆಯ್ಕೆಯಾಗುವ ಪ್ರತಿಯೊಬ್ಬ ಸದಸ್ಯರಿಗೆ 45 ಮತ ಬೇಕು

  ಕಾಂಗ್ರೆಸ್‌ ಪಕ್ಷದಿಂದ ಮೂವರು ಅಭ್ಯರ್ಥಿಗಳು ಗೆಲ್ಲುವು ಹಾದಿ ಸುಗಮ

  ಬಿಜೆಪಿ ಮೊದಲ ಅಭ್ಯರ್ಥಿಗೆ 45 ಮತಗಳನ್ನ ಹಾಕಿಸಿದ್ರೆ ಉಳಿಯೋದು 21

ಬೆಂಗಳೂರು: ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಳೆ ಬೆಳಗ್ಗೆ 9 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದೆ. ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ನಾಳೆ ಸಂಜೆ 5.30ಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳಲ್ಲಿ ಯಾರ್ ಯಾರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಅನ್ನೋದು ಖಚಿತವಾಗಿಲಿದೆ.

ರಾಜ್ಯದ ವಿಧಾನಸಭೆಯಿಂದ 4 ರಾಜ್ಯಸಭಾ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 3, ಬಿಜೆಪಿ- ಜೆಡಿಎಸ್‌ನಿಂದ 2 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಳೆ ಮತದಾನ ಮಾಡಲು ಅರ್ಹರಾಗಿರುವ ಶಾಸಕರ ಸಂಖ್ಯೆ 223 ಆಗಿದೆ.

ಒಟ್ಟು 223
ಕಾಂಗ್ರೆಸ್​ 134
ಬಿಜೆಪಿ 66
ಜೆಡಿಎಸ್ 19
ಪಕ್ಷೇತರರು 4

ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗುವ ಪ್ರತಿಯೊಬ್ಬ ಸದಸ್ಯರಿಗೆ 45 ಶಾಸಕರ ಸಂಖ್ಯಾ ಬಲಾಬಲ ಬೇಕು. ಈ ನಂಬರ್‌ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಕಾಂಗ್ರೆಸ್‌ ಪರ ಕಣದಲ್ಲಿರುವ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಬಹುದು. ಗಂಗಾವತಿ – ಗಾಲಿ ಜನಾರ್ದನ ರೆಡ್ಡಿ, ಗೌರಿಬಿದನೂರು – ಪುಟ್ಟಸ್ವಾಮಿಗೌಡ, ಮೇಲುಕೋಟೆ – ದರ್ಶನ್ ಪುಟ್ಟಣ್ಣಯ್ಯ, ಹರಪನಹಳ್ಳಿ – ಲತಾ ಮಲ್ಲಿಕಾರ್ಜುನ್ ಪಕ್ಷೇತರರು ಸಹ ಕಾಂಗ್ರೆಸ್‌ಗೆ ಬೆಂಬಲಿಸುವ ಸಾಧ್ಯತೆ ಇದೆ. ಕೊನೆ ಕ್ಷಣದಲ್ಲಿ ಯಾವುದಾದ್ರೂ ಬೆಳವಣಿಗೆಗಳಾದ್ರೆ, ಬಿಜೆಪಿ- ಜೆಡಿಎಸ್‌ನ ಎರಡನೇ ಅಭ್ಯರ್ಥಿಗೆ ಅದೃಷ್ಟ ಒಲಿದು ಬರಲಿದೆ.

ಬಿಜೆಪಿ ನಾಯಕರು ತನ್ನ ಮೊದಲ ಅಭ್ಯರ್ಥಿಗೆ 45 ಮತಗಳನ್ನ ಹಾಕಿಸಿದ್ರೆ 21 ಹೆಚ್ಚುವರಿ ಮತಗಳು ಉಳಿಯಲಿದೆ. ಬಿಜೆಪಿಯ 21 ಹಾಗೂ ಜೆಡಿಎಸ್‌ನ 19 ಮತಗಳು ವ್ಯತ್ಯಾಸವಾಗದಿದ್ರೆ 40 ಮತಗಳಾಗುತ್ತವೆ. ಮೈತ್ರಿ ಅಭ್ಯರ್ಥಿ ಗೆಲ್ಲಲು ಇನ್ನೂ 5 ಮತಗಳು ಕೊರತೆಯಲ್ಲಿದೆ.

ಇದನ್ನೂ ಓದಿ: ಕ್ಲೈಮ್ಯಾಕ್ಸ್‌ನಲ್ಲಿ ರಂಗೇರಿದ ರಾಜ್ಯಸಭಾ ಎಲೆಕ್ಷನ್.. JDS ಇಬ್ಬರು ಶಾಸಕರು ನಾಟ್ ರೀಚೆಬಲ್‌!

ರಾಜ್ಯಸಭಾ ಚುನಾವಣೆಗೆ ಮತದಾನ ಮುಗಿದ ಬಳಿಕ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ರವಾನೆ ಮಾಡುತ್ತಾರೆ. ಯಾವುದೇ ಗೊಂದಲವಿಲ್ಲದೆ ಮತದಾನ ಮುಕ್ತಾಯವಾದ್ರೆ ಆಗ ಮತ ಎಣಿಕೆಗೆ ಕೇಂದ್ರ ಚುನಾವಣಾ ಆಯೋಗ ಅವಕಾಶ ನೀಡಲಿದೆ. ಯಾವುದಾದ್ರೂ ಸಮಸ್ಯೆ ಎದುರಾದ್ರೆ, ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡುತ್ತದೆ.

ಕೇಂದ್ರ ಚುನಾವಣಾ ಆಯೋಗದ ಸಂದೇಶದ ಬಳಿಕ ಮತ ಎಣಿಕೆಯ ಪ್ರಕ್ರಿಯೆ ಆರಂಭವಾಗುತ್ತದೆ. ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರೇ ಮತ ಎಣಿಕೆ ಮಾಡಲಿದ್ದಾರೆ. ನಾಳೆ ಸಂಜೆ 4 ಗಂಟೆಯವರೆಗೂ ಮತದಾನ ಮುಗಿದರೆ ಸಂಜೆ 5:30ರ ವೇಳೆಗೆ ರಾಜ್ಯಸಭೆಗೆ ಆಯ್ಕೆಯಾಗುವ 4 ಸದಸ್ಯರ ಹೆಸರು ಘೋಷಣೆಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಸಭಾ ನಂಬರ್‌ ಗೇಮ್‌ನಲ್ಲಿ ಗೆಲ್ಲೋದು ಯಾರು? ಚುನಾವಣೆಯ ಪ್ರಕ್ರಿಯೆ ಹೇಗಿರುತ್ತೆ?

https://newsfirstlive.com/wp-content/uploads/2024/02/dk-hdd-vije.jpg

Load More