newsfirstkannada.com

ಡಿ.ಕೆ ಸುರೇಶ್‌ಗೆ ಹೀನಾಯ ಸೋಲು.. ಎದುರಾಳಿಗೆ ಧನ್ಯವಾದ ತಿಳಿಸಿದ ಕಾಂಗ್ರೆಸ್ ನಾಯಕ; ಸೋತಿದ್ದೇಕೆ?

Share :

Published June 4, 2024 at 2:19pm

Update June 4, 2024 at 2:20pm

    2 ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗೆದ್ದಿದ್ದ ಡಿ.ಕೆ ಸುರೇಶ್‌ಗೆ ಸೋಲು

    ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಿಗೆ ಬಿಗ್‌ ಶಾಕ್‌!

    ಗೆದ್ದ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಡಿ.ಕೆ ಸುರೇಶ್ ಹೇಳಿದ್ದೇನು?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಲಿಗೆ ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಲೀಡ್‌ನಿಂದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರು ಸಂಸದ ಡಿ.ಕೆ ಸುರೇಶ್ ಅವರನ್ನು ಸೋಲಿಸಿದ್ದಾರೆ. ಸತತ ಎರಡು ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಡಿ.ಕೆ ಸುರೇಶ್ ಅವರು ಹೀನಾಯ ಸೋಲು ಅನುಭವಿಸಿದ್ದಾರೆ.

ಮೊದಲ ಹಂತದ ಮತಎಣಿಕೆಯಿಂದಲೂ ಡಾ.ಸಿ.ಎನ್ ಮಂಜುನಾಥ್ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಅಂತಿಮ ಹಂತದ ಮತಎಣಿಕೆಯಲ್ಲಿ ಡಿ.ಕೆ ಸುರೇಶ್ ವಿರುದ್ಧ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: VIDEO: ಡಿ.ಕೆ ಸುರೇಶ್ ವಿರುದ್ಧ ಗೆಲುವಿನ ಗುಟ್ಟು ಬಿಚ್ಚಿಟ್ಟ ಡಾ.C.N ಮಂಜುನಾಥ್; ಹೇಳಿದ್ದೇನು? 

ಯಾರಿಗೆ ಎಷ್ಟು ಮತ?
ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ – 8 ಲಕ್ಷ 99 ಸಾವಿರ 481
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ – 6 ಲಕ್ಷ 98 ಸಾವಿರ 032
ಬಿಜೆಪಿ ಗೆಲುವಿನ ಅಂತರ – 2 ಲಕ್ಷ 01 ಸಾವಿರ 449

ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶದ ಬಳಿಕ ಮಾತನಾಡಿರುವ ಡಿ.ಕೆ ಸುರೇಶ್ ಅವರು ಚುನಾವಣೆಯಲ್ಲಿ ಶ್ರಮವಹಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ 2 ಬಾರಿ ಆಯ್ಕೆ ಮಾಡಿದ್ದಕ್ಕೆ ಕ್ಷೇತ್ರದ ಮತದಾರರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಡಿ.ಕೆ ಸುರೇಶ್ ಅವರು ತಮ್ಮ ಶುಭಾಶಯ ತಿಳಿಸಿದ್ದಾರೆ.

ಡಿಕೆ ಬ್ರದರ್ಸ್‌ಗೆ ಬಿಗ್ ಶಾಕ್!
ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಿಗೆ ಈ ಫಲಿತಾಂಶ ಶಾಕಿಂಗ್ ನ್ಯೂಸ್ ಆಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 8ರ ಪೈಕಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಭರ್ಜರಿ ಲೀಡ್ ಸಿಕ್ಕಿದೆ. ಕನಕಪುರ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್ ಅವರು 20 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಡಿ.ಕೆ ಸುರೇಶ್‌ಗೆ ಹೀನಾಯ ಸೋಲು.. ಎದುರಾಳಿಗೆ ಧನ್ಯವಾದ ತಿಳಿಸಿದ ಕಾಂಗ್ರೆಸ್ ನಾಯಕ; ಸೋತಿದ್ದೇಕೆ?

https://newsfirstlive.com/wp-content/uploads/2024/06/dk-suresh1.jpg

Load More