newsfirstkannada.com

KAS ಪರೀಕ್ಷೆ ಬೆನ್ನಲ್ಲೇ ಕೆಪಿಎಸ್​ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭವ್ಯ ನರಸಿಂಹಮೂರ್ತಿ..!

Share :

Published August 31, 2024 at 10:24am

Update August 31, 2024 at 1:17pm

    ಕೆಪಿಎಸ್​ಸಿ ಯಡವಟ್ಟಿಗೆ ಭವ್ಯ ನರಸಿಂಹಮೂರ್ತಿ ಕಿಡಿ

    KPSC ಪರೀಕ್ಷೆ ಮುಂದೂಡಿ ಎಂದಾಗ ಭವ್ಯ ಖಂಡಿಸಿದ್ದರು

    ಆಗಸ್ಟ್ 27 ರಂದು KAS ಪರೀಕ್ಷೆ ನಡೆಸಲಾಗಿತ್ತು

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ವಿರುದ್ಧ ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿ ರೆಬೆಲ್ ಆಗಿದ್ದಾರೆ. ಆಗಸ್ಟ್ 27 ರಂದು ಕೆಎಎಸ್ ಪರೀಕ್ಷೆ ನಡೆದಿತ್ತು. ಈ ವೇಳೆ ಪ್ರಶ್ನೆ ಪತ್ರಿಕೆಯಲ್ಲಿ ಉಂಟಾಗಿರುವ ಗೊಂದಲ ವಿವಾದಕ್ಕೆ ಕಾರಣವಾಗಿದೆ.
ಕನ್ನಡ‌ ಪ್ರಶ್ನೆಗಳಲ್ಲಿನ ತಪ್ಪುಗಳು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಇಂಗ್ಲಿಷ್​ನಿಂದ ಕನ್ನಡ ಅನುವಾದದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಕೆಪಿಎಸ್ಸಿ ಹಾಗೂ ಸರ್ಕಾರದ ವಿರುದ್ಧ ಪರೀಕ್ಷಾರ್ಥಿಗಳು ಕೆಂಡಕಾರುತ್ತಿದ್ದಾರೆ. ಇದೀಗ ಪರೀಕ್ಷೆ ಬರೆದ ಆಕಾಂಕ್ಷಿಗಳ ಪರ ಭವ್ಯ ನರಸಿಂಹಮೂರ್ತಿ ನಿಂತಿದ್ದಾರೆ.

ಇದನ್ನೂ ಓದಿ:ತುಂಬಾ ವರ್ಷಗಳ ನಂತರ.. ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ RCB ಮೂವರು ಹಳೇ ಆಟಗಾರರು..!

ಸೋಶಿಯಲ್ ಮೀಡಿಯಾದಲ್ಲಿ ಕೆಪಿಎಸ್​ಸಿ ವಿರುದ್ಧ ಕಿಡಿಕಾರಿರುವ ಅವರು.. ಕನ್ನಡ ಪ್ರಶ್ನೆಪತ್ರಿಕೆಯ ಲೋಪದೋಷಕ್ಕೆ ಆಕ್ಷೇಪ ಎತ್ತಿದ್ದಾರೆ. ಕೆಎಎಸ್ ಪರೀಕ್ಷೆಯನ್ನು ಕೆಪಿಎಸ್​​ಸಿ ಗಂಭೀರವಾಗಿ ಪರಿಗಣಿಸದೇ ಇರೋದು ನಾಚಿಕೆಗೇಡಿನ ಸಂಗತಿ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಗ್ರಾಮೀಣ ಭಾಗದ, ಸಮಾಜದ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ತೊಂದರೆ ಆಗಿದೆ. ಪರೀಕ್ಷಾರ್ಥಿಗಳ ಜೀವನದಲ್ಲಿ ಆಟ ಆಡಬೇಡಿ. ಈ ತಪ್ಪಿಗೆ ಜವಾಬ್ದಾರಿ ಯಾರು? ಪರಿಹಾರ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಕೆಎಎಸ್ ಪರೀಕ್ಷೆಯನ್ನು ಮುಂದೂಡುವಂತೆ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ಸರ್ಕಾರದ ಪರ ಬ್ಯಾಟ್ ಬೀಸಿದ್ದ ಭವ್ಯ, ಎಕ್ಸಾಂ ಮಾಡಲೇಬೇಕು. ಯಾರೋ ನೂರು ಜನ ಓದದೇ ಇರೋರು ಸ್ವಾರ್ಥಕ್ಕಾಗಿ ದಿಕ್ಕು ತಪ್ಪಿಸುತ್ತಿದ್ದಾರೆ. ಕೆಪಿಎಸ್ಸಿ ಸರಿಯಾದ ನಿರ್ಧಾರದಿಂದಲೇ ಪರೀಕ್ಷೆ ಮಾಡ್ತಿದೆ ಎಂದಿದ್ದರು. ಈಗ ಕೆಪಿಎಸ್ಸಿಯ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ.

ಇದನ್ನೂ ಓದಿ:KAS ಪರೀಕ್ಷೆ ಬಗ್ಗೆ ಬಗೆಹರಿಯದ ಗೊಂದಲ; ಇವತ್ತು ಬೆಳಗ್ಗೆ ಮತ್ತೊಂದು ಬೆಳವಣಿಗೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KAS ಪರೀಕ್ಷೆ ಬೆನ್ನಲ್ಲೇ ಕೆಪಿಎಸ್​ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭವ್ಯ ನರಸಿಂಹಮೂರ್ತಿ..!

https://newsfirstlive.com/wp-content/uploads/2024/08/BHAVYA.jpg

Load More