newsfirstkannada.com

ಹಾಸನ ಪೆನ್‌ಡ್ರೈವ್ ಪ್ರಕರಣ: ದೇವರಾಜೇಗೌಡ ಸ್ಫೋಟಕ ಆರೋಪಕ್ಕೆ ಶ್ರೇಯಸ್ ಪಟೇಲ್ ಕೌಂಟರ್‌; ಏನಂದ್ರು?

Share :

Published May 7, 2024 at 11:22am

Update May 7, 2024 at 11:32am

    ‘ವಕೀಲ ದೇವರಾಜೇಗೌಡರೇ ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಕಾರಣ’

    ಹೊಳನರಸೀಪುರದಲ್ಲಿ ದೇವರಾಜೇಗೌಡರಿಗೆ ಶ್ರೇಯಸ್ ಪಟೇಲ್ ಸವಾಲು

    ಭಗವಂತನ ಆಣೆ ನಾನು ಯಾವ ಸಂತ್ರಸ್ತೆಯರನ್ನು ಭೇಟಿ ಮಾಡಿಲ್ಲ

ಹಾಸನ: ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಅವರ ಆರೋಪದ ಬಳಿಕ ಹಾಸನದ ಪೆನ್‌ಡ್ರೈವ್ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ದೇವರಾಜೇಗೌಡ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ದೇವರಾಜೇಗೌಡ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲ ಸೃಷ್ಟಿಸಿದೆ.

ವಕೀಲ ದೇವರಾಜೇಗೌಡ ಅವರ ಆರೋಪಕ್ಕೆ ಹಾಸನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಶ್ರೇಯಸ್ ಪಟೇಲ್ ಸ್ಪಷ್ಟನೆ ನೀಡಿದ್ದಾರೆ. ಹೊಳೆನರಸೀಪುರದ‌ ತಮ್ಮ ನಿವಾಸದಲ್ಲಿ ಮಾತನಾಡಿದ ಶ್ರೇಯಸ್ ಪಟೇಲ್, ಬಿಜೆಪಿ ಮುಖಂಡರು ವಕೀಲ ದೇವರಾಜೇಗೌಡ್ರು ಸಿಎಂ, ಡಿಸಿಎಂ, ನನ್ನ ಮೇಲೆ ಆರೋಪ ಮಾಡಿದ್ದಾರೆ. ಇದೆಲ್ಲಾ ಶುದ್ಧ ಸುಳ್ಳಿನ ಕಂತೆ ಎಂದಿದ್ದಾರೆ.

ನಾನು ಖಾಸಗಿ ಹೋಟೆಲ್‌ನಲ್ಲಿ ಸಂತ್ರಸ್ಥೆಯೊಂದಿಗೆ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ. ನಾನು ಖಾಸಗಿ ಹೋಟೆಲ್‌ಗೆ ಹೋಗಿದ್ದೆ ಅನ್ನೋದಕ್ಕೆ ಸಾಕ್ಷಿ ನೀಡಲಿ. ದೇವರಾಜೇಗೌಡ ನೇರವಾಗಿ ಬಹಿರಂಗ ಚರ್ಚೆಗೆ ಬರಲಿ. ನನ್ನ ವಿರುದ್ಧ ಆರೋಪ ಸಾಬೀತಾದ್ರೆ‌ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶ್ರೇಯಸ್ ಪಟೇಲ್ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ಗೆ ಮತ್ತೊಂದು ಟ್ವಿಸ್ಟ್​​​.. ಡಿಕೆಶಿ ಬಗ್ಗೆ ದೇವರಾಜೇಗೌಡ ಸ್ಫೋಟಕ ಸುಳಿವು 

ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಅದನ್ನ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ನಾನು‌ ಪೆನ್‌ಡ್ರೈವ್ ವಿಚಾರ ಮಾತನಾಡುವುದಿಲ್ಲ. ನಾನು ಕೂಡ ಸಹೋದರಿಯರ ಜೊತೆ ಬೆಳೆದಿದ್ದೇನೆ. ಕಾರು ಡ್ರೈವರ್‌ ಕಾರ್ತಿಕ್ ಜಮೀನು ವಿಚಾರವಾಗಿ ಮಾತ್ರ ನನ್ನನ್ನು ಭೇಟಿ ಮಾಡಿದ್ದ. ನನಗೆ ಪೆನ್‌ಡ್ರೈವ್ ವಿಚಾರವಾಗಿ ಯಾವುದೇ ಚರ್ಚೆ ಆಗಿಲ್ಲ. ದೇವರಾಜೇಗೌಡರೇ ಇದಕ್ಕೆಲ್ಲಾ ಕಾರಣ ಅವರೇ ವೀಡಿಯೋ ಇದೆ ಎಂದು ಹೇಳಿದ್ದರು. ದೇವರಾಜೇಗೌಡ ಆರು ತಿಂಗಳ‌ ಮುಂಚೆ ಏನು ಮಾಡುತ್ತಿದ್ದರು. ಅವರು ಯಾವ ಪಕ್ಷದಲ್ಲಿ ಇದ್ದಾರೆ ಅನ್ನೋದೇ ಗೊತ್ತಾಗಲ್ಲ ಎಂದು ಪ್ರಶ್ನಿಸಿದ್ದಾರೆ.

ದೇವರಾಜೇಗೌಡ ತಾನು ತಿಂದು ಬೇರೆಯವರ ಬಾಯಿಗೆ ಒರೆಸುತ್ತಿದ್ದಾರೆ. ಭಗವಂತನ ಆಣೆ ನಾನು ಯಾವ ಸಂತ್ರಸ್ತೆಯರನ್ನು ಭೇಟಿ ಮಾಡಿಲ್ಲ. ದೇವರಾಜೇಗೌಡ ಹೇಳುತ್ತಿರುವುದು ಹಸಿ ಸುಳ್ಳು. ಇದೆಲ್ಲಾ ರಾಜಕೀಯ ಷಡ್ಯಂತ್ರ. ಯಾವ ತ‌ನಿಖೆಗಾದರೂ ನಾನು ಸಿದ್ಧ. ನನ್ನ ಹೆಸರು ಏಕೆ ತೆಗೆದುಕೊಂಡಿದ್ದಾರೆ ಗೊತ್ತಿಲ್ಲ. ನಾನು ಚರ್ಚೆಗೆ ಸಿದ್ದನಿದ್ದೇನೆ, ನನ್ನ ಮುಂದೆ ದಾಖಲೆ ತೋರಿಸಲಿ ಅಂತ ಶ್ರೇಯಸ್ ಪಟೇಲ್ ನೇರ ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಪೆನ್‌ಡ್ರೈವ್ ಪ್ರಕರಣ: ದೇವರಾಜೇಗೌಡ ಸ್ಫೋಟಕ ಆರೋಪಕ್ಕೆ ಶ್ರೇಯಸ್ ಪಟೇಲ್ ಕೌಂಟರ್‌; ಏನಂದ್ರು?

https://newsfirstlive.com/wp-content/uploads/2024/05/Hassan-Devarajegowda-Shreyas-Patel.jpg

Load More