newsfirstkannada.com

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ಗೆ ಮತ್ತೊಂದು ಟ್ವಿಸ್ಟ್​​​.. ಡಿಕೆಶಿ ಬಗ್ಗೆ ದೇವರಾಜೇಗೌಡ ಸ್ಫೋಟಕ ಸುಳಿವು

Share :

Published May 6, 2024 at 8:01pm

Update May 6, 2024 at 8:03pm

    ಆಡಿಯೋವನ್ನು ಈಗಲೇ ರಿಲೀಸ್ ಮಾಡಿದರೆ ಗ್ಯಾರಂಟಿ ತಿರುಚುತ್ತಾರೆ

    ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್​ ವಿರುದ್ಧ ಗಂಭೀರ ಆರೋಪ

    2 ಗಂಟೆ 31 ನಿಮಿಷದ ಆಡಿಯೋದಲ್ಲಿ ಯಾರು, ಯಾರು ಮಾತಾಡಿದ್ದಾರೆ?

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಸಂಬಂಧಿಸಿದಂತೆ ಇಡೀ ಪೆನ್​ಡ್ರೈವ್ ಪ್ರಕರಣದ ರೂವಾರಿ ಡಿಸಿಎಂ ಡಿ.ಕೆ ಶಿವಕುಮಾರ್ ಎಂದು ವಕೀಲ ದೇವರಾಜೇಗೌಡ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಪ್ರೆಸ್​ ಕ್ಲಬ್​ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ವಕೀಲ ದೇವರಾಜೇಗೌಡ, ನನ್ನ ಜೊತೆ ಕೈ ಜೋಡಿಸಿ, ರಾಷ್ಟ್ರ ಮಟ್ಟದಲ್ಲಿ ಈ ಪ್ರಕರಣ ಚರ್ಚೆಯಾಗಬೇಕು. ಮೋದಿಯವರಿಗೆ ಕಪ್ಪು ಮಸಿ ಬಳಿಬೇಕು. ನಮ್ಮ ಜೊತೆ ಕೈ ಜೋಡಿಸಿ ಎಂದು ಬಿಗ್ ಆಫರ್ ಕೊಟ್ಟಿದ್ದಾರೆ. 2 ಗಂಟೆ 31 ನಿಮಿಷ ನನ್ನ ಜೊತೆ ಮಾತಾಡಿರುವ ಆಡಿಯೋ ಇದೆ. ಇದನ್ನ ಈಗಲೇ ಬಿಡುಗಡೆ ಮಾಡಿದರೆ ಆಡಿಯೋವನ್ನು ತಿರುಚುತ್ತಾರೆ. ಹೀಗಾಗಿ ಇದನ್ನು ಈಗಲೇ ಬಿಡುಗಡೆ ಮಾಡಲ್ಲ. ಸಿಬಿಐ ತನಿಖೆಗೆ ಎಲ್ಲ ದಾಖಲೆ ಕೊಡ್ತೀವಿ ಎಂದು ದೇವರಾಜೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ನಟಿ ಅಮೂಲ್ಯಗೆ ಚಾನ್ಸ್​ ಕೊಡಿಸ್ತೀನಿ ಅಂತ ಮಂಚಕ್ಕೆ ಕರೆದ ಯುವಕ.. ಆಮೇಲೇನಾಯ್ತು?

ಇದನ್ನೂ ಓದಿ: ಭವಾನಿ ರೇವಣ್ಣಗೂ ಕಾದಿದೆಯಾ ಸಂಕಷ್ಟ.. JDS ಮುಖಂಡರ ಜೊತೆ​ ಮಹತ್ವದ ಚರ್ಚೆ

2 ಗಂಟೆ 31 ನಿಮಿಷದ ಆಡಿಯೋದಲ್ಲಿ ಒಂದೊಂದು ಸಮಯದಲ್ಲಿ, ಒಂದೊಂದು ರೀತಿ ಮಾತಾಡಿದ್ದಾರೆ. ಅವರು ಯಾರನ್ನ ಕೇಸಲ್ಲಿ ಸಿಗಾಕಿಸಬೇಕು ಅಂತಿದ್ದಾರೆ. ನನ್ನಲ್ಲಿರುವ ಸಾಕ್ಷಿಯನ್ನ SITಗೆ ಕೊಟ್ರೆ ಉಳಿಯಲ್ಲ. ಹಾಗಾಗಿ ನಾನು CBIಗೆ ಮಾತ್ರ ಕೊಡುತ್ತೇನೆ. ಪೆನ್​ಡ್ರೈವ್ ಹಂಚಿದವರ ಹೆಸರು, ಫೋನ್ ನಂಬರ್, ಅಡ್ರೆಸ್ ಕೊಟ್ಟಿದ್ದೀನಿ. ಆದರೆ ಈ ಬಗ್ಗೆ ಹುಡುಕಾಟ ನಡೆಯಲಿಲ್ಲ. ಸರ್ಕಾರ ಹೇಗೆ ತನಿಖೆ ನಡೆಸುತ್ತಿದೆ ಅನ್ನೋದಕ್ಕೆ ಇದೇ ಸಾಕ್ಷಿ. ನಿನ್ನೆ ಸಂಜೆಯಿಂದ ಸಂಧಾನ ಆಯಿತು. ಆದರೆ ನಾನು ಸಂಧಾನಕ್ಕೆ ಒಪ್ಪಲಿಲ್ಲ. ಆಗ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ, ಡಿಸಿಎಂ ಸಭೆ ಮಾಡಿದರು. ಮಧ್ಯವರ್ತಿ ಎಲ್.ಆರ್ ಶಿವರಾಮೇಗೌಡ ಪೆನ್ ಡ್ರೈವ್ ವಿಚಾರವಾಗಿ ನನ್ನ ಜೊತೆ ಮಾತನಾಡಿದರು ಎಂದು ಗಂಭೀರ ಆರೋಪವನ್ನ ದೇವರಾಜೇಗೌಡ ಮಾಡಿದ್ದಾರೆ.

ಇದನ್ನೂ ಓದಿ: 120-130 ವರ್ಷ ಜೀವಿಸಬಹುದು.. ವಯಸ್ಸು ಜಾಸ್ತಿ ಮಾಡೋ ಔಷಧ ಸಂಶೋಧನೆ; ವಿಜ್ಞಾನಿಗಳು ಹೇಳಿದ್ದೇನು?

ಇಡೀ ಪೆನ್​ಡ್ರೈವ್ ಪ್ರಕರಣದ ರೂವಾರಿ ಡಿಕೆ ಶಿವಕುಮಾರ್ ಎಂದು ಆರೋಪ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಅವರು ತನಿಖಾ ತಂಡ ರಚನೆ ಮಾಡಿದ್ದಾರೆ. ಪೆನ್​ಡ್ರೈವ್ ಕಾಂಗ್ರೆಸ್​ನವರೇ ಮಾಡಿರೋ ಪಕ್ಕಾ ಪ್ಲಾನ್ ಇದು. ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಇವೆಲ್ಲವನ್ನು ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವಾಗ ಮಾಡಿದ್ರು, ಇವಾಗ ಮಾಡಿದ್ರು ಅನ್ನೋದಲ್ಲ. ದೇಶಕ್ಕೆ ಕಪ್ಪು ಮಸಿ ಬಳಿಯುವ ಕೆಲಸ ಕರ್ನಾಟಕದಿಂದ ಆಗಿದೆ. ಕಾರ್ತಿಕ್ ಎಲ್ಲಿದ್ದಾನೆಂದು SIT ತಂಡ ಮೊದಲು ಹುಡುಕಬೇಕು. ಆರೋಪಿ ಎಂದು ಹೇಳಿದ ಮೇಲೆ ಅವರನ್ನ ಹುಡುಕಿ ಕರೆತರಬೇಕು. ಒಬ್ಬರನ್ನ ಮಾತ್ರ ಹುಡುಕುತ್ತಿರುವುದು ಅವರಿಗೆ ಬಿಟ್ಟದ್ದು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್‌ನ್ಯೂಸ್‌.. ವಾರವಿಡೀ ಮತ್ತೆ ಮಳೆರಾಯನ ಅಬ್ಬರ; ಎಲ್ಲಿ? ಯಾವಾಗ?

ಪ್ರಕರಣದಲ್ಲಿ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದು. ನನ್ನ ವಿಳಾಸ ಗೊತ್ತಿಲ್ಲ ಅಂದ್ರೆ ಕೊಡ್ತೀನಿ. ನಾನು ಡಿ.ಕೆ ಶಿವಕುಮಾರ್ ಗರಡಿಯಲ್ಲೇ ಬೆಳೆದವನು. ಕೋರ್ಟ್​ನಲ್ಲಿ ಎಲ್ಲ ನೋಡಿಕೊಳ್ಳುತ್ತೇನೆ. ಅಧಿಕಾರಿಗಳು, ರಾಜಕಾರಣಿಗಳಿಂದ ಫೋನ್ ಕಾಲ್ ಬರುತ್ತಿವೆ. ಇದನ್ನ ತನಿಖೆ ನಡೆಸಲಾಗದಿದ್ರೆ, CBI ತನಿಖೆಯನ್ನು ಮಾಡಿಸುತ್ತೇವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ಗೆ ಮತ್ತೊಂದು ಟ್ವಿಸ್ಟ್​​​.. ಡಿಕೆಶಿ ಬಗ್ಗೆ ದೇವರಾಜೇಗೌಡ ಸ್ಫೋಟಕ ಸುಳಿವು

https://newsfirstlive.com/wp-content/uploads/2024/05/DK_SHIVAKUMAR.jpg

Load More