newsfirstkannada.com

VIDEO: ‘ಹುಳಿ ಹಿಂಡೋದೆ ಇವ್ರ ಕೆಲಸ’- ಸದನದಲ್ಲಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ನರೇಂದ್ರ ಸ್ವಾಮಿ

Share :

Published February 13, 2024 at 4:16pm

  ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲೇ ಕಾಲ ಕಳೆದು ಹೋದ್ರು

  ಉಪ್ಪು ಹುಳಿ ಖಾರ ಇಲ್ಲ ಅಂತ ಹೇಳ್ತಾರೆ.. ಮನೆಯಲ್ಲಿ ಸಪ್ಪೆಯಾಗಿರಬಹುದೇನೋ?

  ಶಾಸಕ ನರೇಂದ್ರಸ್ವಾಮಿ ಅವರಿಗೆ ಮಾತಿಗೆ ಬಿಜೆಪಿ ನಾಯಕರಿಂದ ಆಕ್ಷೇಪ

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಅವರು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾದ ಮಾತನಾಡಿದ್ದಾರೆ.

ಪರೋಕ್ಷವಾಗಿ ಹೆಚ್‌ಡಿಕೆ ಅವರ ಬಗ್ಗೆ ಚರ್ಚೆ ನಡೆಸಿದ ನರೇಂದ್ರ ಸ್ವಾಮಿ, ಅವ್ರು ಮುಖ್ಯಮಂತ್ರಿಯಾಗಿದ್ದಾಗ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲೇ ಕಾಲ ಕಳೆದು ಹೋದ್ರು. ಈಗ ರಾಜ್ಯಪಾಲರ ಭಾಷಣದ ಬಗ್ಗೆ ಮಾತನಾಡ್ತಾರೆ. ಉಪ್ಪು ಹುಳಿ ಖಾರ ಇಲ್ಲ ಅಂತ ಹೇಳ್ತಾರೆ. ಪಾಪ ಮನೆಯಲ್ಲಿ ಸ್ವಲ್ಪ ಸಪ್ಪೆಯಾಗಿರಬಹುದೇನೋ? ಎಂದು ಪರೋಕ್ಷವಾಗಿ ಹೆಚ್‌ಡಿಕೆಗೆ ಶಾಸಕ ನರೇಂದ್ರ ಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಸದನದಲ್ಲಿ ಕೇಂದ್ರ ಸರ್ಕಾರದ ಭಾರತ್ ರೈಸ್‌ಗೂ ನರೇಂದ್ರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ನಾವು ಕೇಂದ್ರಕ್ಕೆ ಅಕ್ಕಿ ‌ಕೊಡಿ ಅಂದ್ರೆ ಕೊಡ್ತಿಲ್ಲ. ಕೆಜಿಗೆ 34ರೂ ಕೊಡ್ತೀವಿ ಅಂದ್ರೂ ಕೇಂದ್ರ ಸರ್ಕಾರ ಕೊಡಲಿಲ್ಲ. ಈಗ ಕೆಜಿಗೆ 29ರೂ.ಗೆ ಕೇಂದ್ರ ಸರ್ಕಾರ ಭಾರತ್ ರೈಸ್ ಹೆಸರಿನಲ್ಲಿ ಕೊಡ್ತಿದೆ ಇದು ಸರೀನಾ ಅಂದ ನರೇಂದ್ರಸ್ವಾಮಿ ಪ್ರಶ್ನಿಸಿದರು.

ಇದನ್ನೂ ಓದಿ: D.K.ಬ್ರದರ್ಸ್​ಗೆ ಟಕ್ಕರ್ ಕೊಡಲು ಸೈನಿಕ ಮಾಸ್ಟರ್ ಪ್ಲಾನ್.. ದೇವೇಗೌಡರ ಬಳಿ ಮಾತಾಡಿದ್ದು ಭಾರೀ ರಹಸ್ಯ

ಶಾಸಕ ನರೇಂದ್ರಸ್ವಾಮಿ ಅವರ ಈ ಮಾತಿಗೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೀವು ಕೇಂದ್ರದ ಅಕ್ಕಿ ನಿಮ್ದು ಅಂತ ಸುಳ್ಳು ಹೇಳಿ ಪಡಿತರದಲ್ಲಿ ಹಂಚುತ್ತಿದ್ದೀರಿ. 10 ಕೆಜಿ ಕೊಡ್ತೀವಿ ಅಂತ ಹೇಳಿ 5 ಕೆಜಿ ಕೊಡ್ತಿದ್ದೀರಿ. ನಿಮಗೆ ನಾಚಿಕೆ ಆಗಬೇಕು ಅಂತ ಬಿಜೆಪಿ ಸದಸ್ಯರು ತಿವಿದಾಗ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೀತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಹುಳಿ ಹಿಂಡೋದೆ ಇವ್ರ ಕೆಲಸ’- ಸದನದಲ್ಲಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ನರೇಂದ್ರ ಸ್ವಾಮಿ

https://newsfirstlive.com/wp-content/uploads/2024/02/Narendra-swamy-On-HDK.jpg

Load More