newsfirstkannada.com

×

ಕುಮಾರಸ್ವಾಮಿಗೆ ಹಾರ್ಟ್​ ಆಪರೇಷನ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್​ ಶಾಸಕ

Share :

Published March 30, 2024 at 10:14am

Update March 30, 2024 at 10:31am

    ಮಾಜಿ ಸಿಎಂ ಕುಮಾರಸ್ವಾಮಿಯ ಕಾಲೆಳೆದ ಶಾಸಕ ಬಂಡಿಸಿದ್ದೇಗೌಡ

    3 ದಿನದಲ್ಲಿ ಹಾರ್ಟ್​ ಆಪರೇಷನ್, 4ನೇ ದಿನಕ್ಕೆ ಇಡೀ ರಾಜ್ಯ ಸುತ್ತೋದಾ?

    ಹಾರ್ಟ್​ ಆಪರೇಷನ್ ಆದವ್ರು ತಿಂಗಳಾನುಗಟ್ಟಲೇ ಹೊರ ಬರಲ್ಲ

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅವರು ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದನ್ನು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ವ್ಯಂಗ್ಯವಾಡಿದ್ದಾರೆ. ಚುನಾವಣೆ ಬಂದರೆ ಸಾಕು ಆಸ್ಪತ್ರೆ ಸೇರಿ 3 ದಿನದಲ್ಲಿ ಹಾರ್ಟ್​ ಆಪರೇಷನ್ ಮಾಡಿಕೊಂಡು 4ನೇ ದಿನಕ್ಕೆ ಇಡೀ ರಾಜ್ಯ ಸುತ್ತುತ್ತಾರೆ. ಅದು ಹೇಗೆ ಸಾಧ್ಯ ಎಂದು ಶಾಸಕರು ಪ್ರಶ್ನೆ ಮಾಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ದಯಮಾಡಿ ಯಾರದರೂ ಬಂದು ನನಗೆ ಆ ತೊಂದರೆ ಆಗಿದೆ, ಈ ತೊಂದರೆ ಆಗಿದೆ ಎಂದು ಹೇಳಿದರೆ ಯಾರು ನಂಬಬೇಡಿ. ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂಬುದನ್ನು ಜನ ಕೇಳಬೇಕು. ಚುನಾವಣೆ ಬಂದ್ರೆ ಸಾಕು ಕುಮಾರಸ್ವಾಮಿ ಆಸ್ಪತ್ರೆ ಸೇರ್ತಾರೆ. 3 ದಿನಕ್ಕೆ ಆಸ್ಪತ್ರೆಯಿಂದ ಹೊರಗೆ ಬರ್ತಾರೆ. 4ನೇ ದಿನಕ್ಕೆ ಇಡೀ ರಾಜ್ಯವನ್ನು ಸುತ್ತುತ್ತಾರೆ. ಇದು ಹೇಗೆ ಸಾಧ್ಯ ಎನ್ನುವುದು ನನಗೆ ಅರ್ಥ ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Breaking News: ‘ಕೊಠಡಿಯಲ್ಲಿ ಬಾಂಬ್ ಇಟ್ಟಿದ್ದೇವೆ’ ಬೆಂಗಳೂರಿನ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ..

ಸಚಿವ ಚಲುವರಾಯಸ್ವಾಮಿ ಅವರಿಗೆ ಇದ್ದಂತಹ ಹಾರ್ಟ್​ ಸಮಸ್ಯೆ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಇದೆ. ನಮ್ಮ ಚಲುವರಾಯಸ್ವಾಮಿ ಆಸ್ಪತ್ರೆಗೆ ಹೋದರೆ 1 ತಿಂಗಳು ರೆಸ್ಟ್ ತೆಗೆದುಕೊಳ್ತಾರೆ. ಹಾರ್ಟ್​ ಆಪರೇಷನ್ ಆದವರು ತಿಂಗಳಾದ್ರೂ ಹೊರಗೆ ಬರಲ್ಲ. ಆದ್ರೆ ಅದ್ಹೆಂಗೆ ಕೇವಲ 2 ದಿನಕ್ಕೆ ಕುಮಾರಸ್ವಾಮಿ ಹೊರಗೆ ಬಂದರು ಎನ್ನುವುದು ಗೊತ್ತಾಗುತ್ತಿಲ್ಲ. ದಯಮಾಡಿ ಅಂತಹದ್ದೇನಾದರು ಹೊಸ ಟೆಕ್ನಿಕ್​ ಇದ್ದರೆ ನನಗೆ ಹೇಳಿಕೊಡಿ ಎಂದು ಕಿಚಾಯಿಸಿದ್ದಾರೆ.

ನಮ್ಮ ಸರ್ಕಾರ ಜನರಿಗೆ ಎಲ್ಲ ಕೊಡುತ್ತಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇರಬಾರದು ಎಂದು ತಾಯಂದಿರಿಗೆ ನೇರ ಅಕೌಂಟ್​ಗೆ ಹಣ ಹಾಕಲಾಗುತ್ತಿದೆ. ಕರೆಂಟ್​, ಅಕ್ಕಿ, ಶಕ್ತಿ ಯೋಜನೆ ಸೇರಿ ಎಲ್ಲ ಕೊಡುತ್ತಿದ್ದೇವೆ. ಹೀಗಾಗಿ ಸ್ಟಾರ್ ಚಂದ್ರು ಅವರನ್ನು 50 ಸಾವಿರ ಅಂತರದಿಂದ ಗೆಲ್ಲಿಸಿಕೊಡಬೇಕು. ಸ್ಟಾರ್ ಚಂದ್ರುಗೆ ಕೋಪ ಇದೆ. ಕೆಲಸ ಮಾಡಿದವನಿಗೆ ಕೋಪ ಇರುತ್ತದೆ. ಅದು ಸಾಮಾನ್ಯ. ಚಂದ್ರು ಕೆಲಸಗಾರ ಎಂದು ಶಾಸಕರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಮಾರಸ್ವಾಮಿಗೆ ಹಾರ್ಟ್​ ಆಪರೇಷನ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್​ ಶಾಸಕ

https://newsfirstlive.com/wp-content/uploads/2024/03/BANDISIDDE_GOWDA_HDK.jpg

Load More