newsfirstkannada.com

Breaking News: ‘ಕೊಠಡಿಯಲ್ಲಿ ಬಾಂಬ್ ಇಟ್ಟಿದ್ದೇವೆ’ ಬೆಂಗಳೂರಿನ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ..

Share :

Published March 30, 2024 at 8:05am

    ಇ-ಮೇಲ್​ ಮಾಡಿ ಬೆದರಿಕೆ ಹಾಕಿರುವ ದುಷ್ಟರು

    ಶಾಲಾ ಆಡಳಿತ ಮಂಡಳಿ ಗಾಬರಿ, ಸ್ಥಳಕ್ಕೆ ರಕ್ಷಣಾ ಪಡೆ ದೌಡು

    ಪರಿಶೀಲನೆ ಬಳಿಕ ನಿಟ್ಟುಸಿರು ಬಿಟ್ಟಿರುವ ಆಡಳಿತ ಮಂಡಳಿ

ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ಟ್ರೀಮಿಸ್ ವರ್ಲ್ಡ್ ಸ್ಕೂಲ್​​ಗೆ ಬೆದರಿಕೆ ಕರೆ ಬಂದಿದೆ.

ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿದ್ದು ಇ-ಮೇಲ್ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ನಿನ್ನೆ ಮಧ್ಯಾಹ್ನ (ಶುಕ್ರವಾರ 29 ಮಾರ್ಚ್) ಶಾಲಾ ಮೇಲ್​ಗೆ ಬೆದರಿಕೆ ಸಂದೇಶ ಬಂದಿದೆ. ಶಾಲಾ ಕೊಠಡಿಯ ಡೆಸ್ಕ್ ಕೆಳಗಡೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ.

ಇದನ್ನೂ ಓದಿ: ನೀರಿನ ಟ್ಯಾಂಕ್​ಗೆ ಜಿಗಿದು ವ್ಯಕ್ತಿ ಸಾವು; ಗೊತ್ತಿಲ್ಲದೇ ಅದೇ ನೀರು ಕುಡಿಯುತ್ತಿದ್ದ ಗ್ರಾಮದ ಜನ

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿದ್ದಾರೆ. ಶಾಲೆಯ ಇಡೀ ಏರಿಯಾವನ್ನು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಬಾಂಬ್ ಕರೆಗೆ ಬೆಚ್ಚಿ ಬಿದ್ದಿದ್ದ ಶಾಲೆ ಆಡಳಿತ ಮಂಡಳಿ ಸದ್ಯ ನಿಟ್ಟಿಸಿರು ಬಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ‘ಕೊಠಡಿಯಲ್ಲಿ ಬಾಂಬ್ ಇಟ್ಟಿದ್ದೇವೆ’ ಬೆಂಗಳೂರಿನ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ..

https://newsfirstlive.com/wp-content/uploads/2024/03/SCHOOL-1-1.jpg

Load More