newsfirstkannada.com

ಕೋಲಾರ ಟಿಕೆಟ್ ಕಿತ್ತಾಟ; ಕೆ.ಹೆಚ್ ಮುನಿಯಪ್ಪ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಶಾಸಕರು; ಹೈಡ್ರಾಮಾ!

Share :

Published March 27, 2024 at 1:48pm

Update March 27, 2024 at 1:59pm

  ಕೋಲಾರ ಲೋಕಸಭಾ ಕಣದಲ್ಲಿ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಸಂಚಲನ

  ಕೆ.ಹೆಚ್‌ ಮುನಿಯಪ್ಪ ಅಳಿಯನಿಗೆ ಟಿಕೆಟ್​ ನೀಡದಂತೆ ಭಾರೀ ವಿರೋಧ

  ಸಚಿವ ಎಂ.ಸಿ ಸುಧಾಕರ್​ರಿಂದಲೂ ರಾಜೀನಾಮೆ ಅಸ್ತ್ರ ಪ್ರಯೋಗ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲ ಸೃಷ್ಟಿಸಿದೆ. ಸಚಿವ ಕೆ.ಹೆಚ್ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ ನಾಯಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕೋಲಾರ ಭಾಗದ ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ರಾಜೀನಾಮೆಯ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಹೈಡ್ರಾಮಾ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್​ನ 4ನೇ ಪಟ್ಟಿಯಲ್ಲೂ ಆ 4 ಲೋಕಸಭಾ ಕ್ಷೇತ್ರಗಳು ಪೆಂಡಿಂಗ್.. ಕೋಲಾರಕ್ಕಾಗಿ ‘ಕೈ’ಯಲ್ಲಿ ಬಿಗ್ ಫೈಟ್

ಕೆ.ಹೆಚ್‌. ಮುನಿಯಪ್ಪ ಅಳಿಯನಿಗೆ ಟಿಕೆಟ್​ ನೀಡವುದನ್ನು ವಿರೋಧಿಸಿ ಸಚಿವ ಎಂ.ಸಿ ಸುಧಾಕರ್, ಎಂಎಲ್​ಸಿ​ ನಸೀರ್ ಅಹ್ಮದ್, ಶಾಸಕರಾದ ಮಂಜುನಾಥ್, ನಂಜೇಗೌಡ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಭೇಟಿಯಾಗಲು ಸಚಿವ ಸುಧಾಕರ್​ ಮುಂದಾಗಿದ್ದು, ಎಂಎಲ್​ಸಿ​ ನಸೀರ್ ಅಹ್ಮದ್ ಅವರು ಸಭಾಧ್ಯಕ್ಷ ಬಸವರಾಜ್ ಹೊರಟ್ಟಿ ಅವರ ಭೇಟಿಗೆ ಸಮಯ ಕೋರಿದ್ದಾರೆ.

ಕಾಂಗ್ರೆಸ್ ಶಾಸಕರು, ಸಚಿವರು ರಾಜೀನಾಮೆ ಅಸ್ತ್ರ ಪ್ರಯೋಗಿಸುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್‌ ಅಭ್ಯರ್ಥಿ ಘೋಷಣೆಗೆ ಬ್ರೇಕ್ ಹಾಕಿದೆ. ಸಚಿವ ಭೈರತಿ ಸುರೇಶ್ ಅವರಿಗೆ ಕೋಲಾರ ಜಿಲ್ಲೆಯ ಸಚಿವರು, ಶಾಸಕರ ಮನವೊಲಿಸಲು ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಶಾಸಕರು ಸ್ಪೀಕರ್ ಕೊಠಡಿ ಬಳಿ ತೆರಳಿದ್ದು ವಿಧಾನಸೌಧದಲ್ಲಿ ಹೈಡ್ರಾಮಾವೇ ನಡೆದಿದೆ. ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನಿಂದ ಮಂಗಳೂರಿಗೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಲಾರ ಟಿಕೆಟ್ ಕಿತ್ತಾಟ; ಕೆ.ಹೆಚ್ ಮುನಿಯಪ್ಪ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಶಾಸಕರು; ಹೈಡ್ರಾಮಾ!

https://newsfirstlive.com/wp-content/uploads/2024/03/Kolar-Congress-Ticket.jpg

Load More