newsfirstkannada.com

ಕಾಂಗ್ರೆಸ್​ನ 4ನೇ ಪಟ್ಟಿಯಲ್ಲೂ ಆ 4 ಲೋಕಸಭಾ ಕ್ಷೇತ್ರಗಳು ಪೆಂಡಿಂಗ್.. ಕೋಲಾರಕ್ಕಾಗಿ ‘ಕೈ’ಯಲ್ಲಿ ಬಿಗ್ ಫೈಟ್

Share :

Published March 24, 2024 at 8:02am

Update March 24, 2024 at 7:45pm

    ಲೋಕ ಸಮರಕ್ಕೆ ಸಿದ್ದವಾಗಿರೋ ‘ಕೈ’​ಗೆ ಟಿಕೆಟ್ ಹಂಚಿಕೆ ಕಗ್ಗಂಟು

    ಡಿಸಿಎಂ ಡಿ.ಕೆ ಶಿವಕುಮಾರ್​​ನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ

    ‘ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಿದರೆ ಕೆಲಸವೇ ಮಾಡಲ್ಲ’

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯದ ಆ 4 ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ ಮಾಡಿಲ್ಲ. ಅದರಲ್ಲೂ ಕೋಲಾರ ಟಿಕೆಟ್​ ಆಯ್ಕೆ ಕಾಂಗ್ರೆಸ್​ ಹೈಕಮಾಂಡ್​ಗೆ ಕಗ್ಗಂಟಾಗಿದೆ.

ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಾಮರಾಜನಗರ ಪೆಂಡಿಂಗ್​

ಲೋಕಸಭೆ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಯಾಗಿದ್ದು, ಇನ್ನು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಬಾಕಿ ಇದೆ. ಕಳೆದ ರಾತ್ರಿ ಬಿಡುಗಡೆಯಾದ ಕಾಂಗ್ರೆಸ್​ನ 4ನೇ ಪಟ್ಟಿಯಲ್ಲೂ, ರಾಜ್ಯದ ಆ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಪ್ರಕಟಿಸಿಲಿಲ್ಲ.. ಅದರಲ್ಲೂ ಕೋಲಾರ ಟಿಕೆಟ್​ ಆಯ್ಕೆ ಕಾಂಗ್ರೆಸ್​ ಹೈಕಮಾಂಡ್​ಗೆ ಕಗ್ಗಂಟಾಗಿದೆ.

ಬಗೆಹರಿಯದ ಕೋಲಾರ ಲೋಕಸಭಾ ಟಿಕೆಟ್ ಗೊಂದಲ

ರಾಜ್ಯ ಕಾಂಗ್ರೆಸ್​ನಲ್ಲಿ ಕೋಲಾರ ಟಿಕೆಟ್​ ಹಂಚಿಕೆ ಗೊಂದಲ ಮುಂದುರಿದಿದೆ. ಕೋಲಾರಕ್ಕಾಗಿ ಸಚಿವ ಮುನಿಯಪ್ಪ-ರಮೇಶ್ ಬಣ ಬಿಗಿಪಟ್ಟು ಹಿಡಿದೆ. ಸಿಎಂ, ಡಿಸಿಎಂ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲೂ ಒಮ್ಮತ ನಿರ್ಧಾರಕ್ಕೆ ಬರಲಾಗಿಲ್ಲ ಹೀಗಾಗಿ, ಅಂತಿಮವಾಗಿ ಕೋಲಾರ ಕಗ್ಗಂಟು ಹೈಕಮಾಂಡ್​ಗೆ ಅಂಗಳಕ್ಕೆ ಹೋಗಿದೆ.

ಕೋಲಾರ ಕಗ್ಗಂಟು

  • ಮುನಿಯಪ್ಪ ಹಾಗೂ ರಮೇಶ್ ಬಣಗಳ ನಡುವೆ ಬಿಗಿಪಟ್ಟು
  • ಸಚಿವ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಲು ತೀವ್ರ ವಿರೋಧ
  • ತೀವ್ರ ವಿರೋಧ ವ್ಯಕ್ತಪಡಿಸಿರುವ ರಮೇಶ್ ಕುಮಾರ್ ಬಣ
  • ಯಾವುದಕ್ಕೂ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಬಾರದು
  • ಹಾಗೊಂದು ವೇಳೆ ಟಿಕೆಟ್ ನೀಡಿದರೆ ನಾವು ಕೆಲಸ ಮಾಡಲ್ಲ
  • ಮುನಿಯಪ್ಪ ಮುಂದೆಯೇ ಹೇಳಿದ ರಮೇಶ್ ಕುಮಾರ್ ಬಣ
  • ತಮ್ಮ ಬಣಗಳಿಗೆ ಟಿಕೆಟ್ ನೀಡಲು ಉಭಯ ಬಣ ಪಟ್ಟು ಹಿನ್ನೆಲೆ
  • ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡಿ- ಸಿಎಂ
  • ಉಭಯ ಕ್ಷೇತ್ರಗಳ ನಾಯಕರಿಗೂ ಸ್ಪಷ್ಟವಾಗಿ ಹೇಳಿರುವ ಸಿಎಂ
  • ಮುನಿಯಪ್ಪ ಕುಟುಂಬಕ್ಕೆ ಹೇಗೆ ಟಿಕೆಟ್ ಸಿಗಲಿದೆ ನೋಡೋಣ
  • ಕೋಪದಲ್ಲೇ ತೆರಳಿದ ರಮೇಶ್ ಕುಮಾರ್ & ಅವರ ಬಣ
  • ಸಂಧಾನ ಸಭೆಯಲ್ಲಿ ಅಭಿಪ್ರಾಯ ತಿಳಿಸಿ ಹೊರ ನಡೆದ ಬಣ

    ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ಎದುರು ನಿಲ್ಲೋದು ಯಾರು..? ಕುಮಾರಸ್ವಾಮಿ ಸ್ಪರ್ಧೆ ಪಕ್ಕಾನಾ..?

ಇದನ್ನೂ ಓದಿ: ಅಪ್ಪು ನೆಚ್ಚಿನ ಹೊಸಪೇಟೆಯಲ್ಲಿ ಪ್ರೀ ರಿಲೀಸ್ ಇವೆಂಟ್.. ‘ಯುವ’ ರಾಜ್​ಕುಮಾರ್ ಭಾವುಕ, ಫ್ಯಾನ್ಸ್​ಗೆ ಹೇಳಿದ್ದೇನು?

ಬಿಜೆಪಿ-ಜೆಡಿಎಸ್​ ಮೈತ್ರಿಗೂ ಕೋಲಾರ ಟಿಕೆಟ್​ ಕಗ್ಗಂಟು

ಕಾಂಗ್ರೆಸ್​ನಲ್ಲಿ ಮಾತ್ರವಲ್ಲ.. ಬಿಜೆಪಿ-ಜೆಡಿಎಸ್​ ಮೈತ್ರಿಗೂ ಕೋಲಾರ ಟಿಕೆಟ್​ ಕಗ್ಗಂಟಾಗಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್​ಗೆ ಮಂಡ್ಯ, ಹಾಸನದ ಜೊತೆಗೆ ಕೋಲಾರವನ್ನು ಕೊಡಲು ನಿರ್ಧರಿಸಿದೆ. ಆದ್ರೆ, ಹಾಲಿ ಸಂಸದ ಮುನಿಸ್ವಾಮಿ ಕೋಲಾರದ ಟಿಕೆಟ್​ ಬಿಜೆಪಿಗೆ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮೊನ್ನೆಯಷ್ಟೇ ಜೆ.ಪಿ,ನಡ್ಡಾರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ರು. ನಿನ್ನೆ ದೆಹಲಿಯಲ್ಲಿ ದೇವೇಗೌಡರನ್ನು ಮುನಿಸ್ವಾಮಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್​ ಮತ್ತು ಬಿಜೆಪಿ-ಜೆಡಿಎಸ್​ ಮೈತ್ರಿಗೂ ಕೋಲಾರ ಟಿಕೆಟ್​ ಹಂಚಿಕೆ ಬಗೆಹರಿಯದ ಸಮಸ್ಯೆಯಾಗಿದೆ. ಎರಡೂ ಪಕ್ಷಗಳು ಕೋಲಾರದ ಕಗ್ಗಂಟನ್ನು ಯಾವ ರೀತಿ ಬಗೆಹರಿಸಿಕೊಳ್ತಾವೆ ಅನ್ನೊದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ನ 4ನೇ ಪಟ್ಟಿಯಲ್ಲೂ ಆ 4 ಲೋಕಸಭಾ ಕ್ಷೇತ್ರಗಳು ಪೆಂಡಿಂಗ್.. ಕೋಲಾರಕ್ಕಾಗಿ ‘ಕೈ’ಯಲ್ಲಿ ಬಿಗ್ ಫೈಟ್

https://newsfirstlive.com/wp-content/uploads/2024/03/SIDDU_CONGRESS.jpg

Load More