newsfirstkannada.com

ಅಪ್ಪು ನೆಚ್ಚಿನ ಹೊಸಪೇಟೆಯಲ್ಲಿ ಪ್ರೀ ರಿಲೀಸ್ ಇವೆಂಟ್.. ‘ಯುವ’ ರಾಜ್​ಕುಮಾರ್ ಭಾವುಕ, ಫ್ಯಾನ್ಸ್​ಗೆ ಹೇಳಿದ್ದೇನು?

Share :

Published March 24, 2024 at 7:38am

Update March 24, 2024 at 7:42am

    ಸಾವಿರಾರು ಅಭಿಮಾನಿಗಳು ಅಪ್ಪು ಭಾವಚಿತ್ರ ಹಿಡಿದು ಅಭಿಮಾನ ಮೆರೆದರು

    ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿ ಚಿತ್ರತಂಡ ಭಾಗಿಯಾಗಿತ್ತು

    ಎಲ್ಲಿಗೆ ಕರೆದುಕೊಂಡು ಹೋಗ್ತಿರಾ ಎನ್ನುವುದು ನಿಮಗೆ ಬಿಟ್ಟಿದ್ದು- ಯುವರಾಜ್

ನಗು ಮುಖದ ಸರದಾರ ಅಪ್ಪು ಅವರ ನೆಚ್ಚಿನ ಪ್ಲೇಸ್ ಹೊಸಪೇಟೆಯಲ್ಲಿ ಯುವ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯಿತು. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ಯುವ ಸಂಭ್ರಮದಲ್ಲಿ ಅಪ್ಪು.. ಅಪ್ಪು.. ಎಂಬ ಜಯಘೋಷ ಹೊಸಪೇಟೆಯಲ್ಲಿ ಮೊಳಗಿತ್ತು. ಹಾಗಾದ್ರೆ ಯುವ ಸಂಭ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ರು, ಏನೆಲ್ಲ ಸಂಭ್ರಮವಿತ್ತು?.

ದೊಡ್ಮನೆ ಅಭಿಮಾನಿಗಳ ‘ರಾಜ’ಧಾನಿಯಲ್ಲಿ ಯುವ ಸಂಭ್ರಮ

ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಯುವ ರಾಜ್ ಕುಮಾರ್ ನಟನೆಯ ಯುವ ಚಿತ್ರದ ಪ್ರೀ ರಿಲೀಸ್ ಇವೆಂಟ್​ ಅದ್ಧೂರಿಯಾಗಿ ನಡೆಯಿತು. ಅಪ್ಪು ಜಯಘೋಷದೊಂದಿಗೆ ಸಾವಿರಾರು ಅಭಿಮಾನಿಗಳು ಅಪ್ಪು ಭಾವಚಿತ್ರ ಹಿಡಿದು ಅಭಿಮಾನ ಮೆರೆದರು.

ಹೊಸಪೇಟೆಯ ಪುನೀತ್​ ರಾಜ್​ಕುಮಾರ್​ ಕ್ರೀಡಾಂಗಣ, ಸಂಪೂರ್ಣ ಅಪ್ಪು ಮಯವಾಗಿತ್ತು. ಪುನೀತ್​ ರಾಜ್​ಕುಮಾರ್​ ಅವರ ನೆಚ್ಚಿನ ತಾಣವಾದ ಹೊಸಪೇಟೆಯಲ್ಲಿ ಯುವ ಚಿತ್ರದ ಪ್ರೀ ರಿಲೀಸ್​ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್, ರಾಘವೇಂದ್ರ ರಾಜ್ ಕುಮಾರ್ ದಂಪತಿ ಹಾಗೂ ಯುವ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಚಿತ್ರತಂಡ ಸಂಭ್ರಮದಲ್ಲಿ ಭಾಗಿಯಾಗಿತ್ತು.

ಯುವ ಸಂಭ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್, ಮಾತಿನ ಆರಂಭದಲ್ಲಿಯೇ ಅಪ್ಪು ಜಯಘೋಷ ಕೇಳಿ ಮೌನರಾದರು. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಮಾತು ಮುಗಿಸಿದರು.

ಇದೇ ಮಾರ್ಚ್​ 29ರಂದು ಬೆಳ್ಳಿ ತೆರೆಗೆ ಕಾಲಿಡಲು ರೆಡಿಯಾಗಿರುವ ಡಾ. ರಾಜ್ ಕುಟುಂಬ ಕುಡಿ ಯುವರಾಜ್​​ಕುಮಾರ್ ಭಾವುಕ ನುಡಿಗಳನ್ನಾಡಿದ್ರು.

ಇದನ್ನೂ ಓದಿ: ಕಾಂಗ್ರೆಸ್​ನ​ 4ನೇ ಪಟ್ಟಿ ಔಟ್.. ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ ಮಾಡೋ ಅಭ್ಯರ್ಥಿ ಇವರೇ

ಅಪ್ಪ-ಅಮ್ಮ ಇಲ್ಲಿ ತನಕ ಸಾಕಿ ಬೆಳೆಸಿದ್ದಾರೆ. ಅವರೇ ನನಗೆಲ್ಲ. ಆದರೆ ಇವತ್ತು ಅವರು ನನ್ನನ್ನು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಇನ್ಮುಂದೆ ನೀವೆ ನನ್ನ ತಂದೆ, ತಾಯಿಯಂದಿರು. ನೀವೇ ಕರೆದುಕೊಂಡು ಹೋಗಬೇಕು. ನೀವು ಎಲ್ಲಿ ಕರೆದುಕೊಂಡು ಹೋಗ್ತಿರಾ ಎನ್ನುವುದು ನಿಮಗೆ ಬಿಟ್ಟಿರುವುದು.

ಯುವ ರಾಜ್​ಕುಮಾರ್, ನಟ

ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಾನು ಇರುವವರೆಗೆ ನಾನು ಮಾಡಿರುವ ನನ್ನ ಪ್ರತಿ ಸಿನಿಮಾ ಅಪ್ಪು ಸರ್​ಗೆ ಅರ್ಪಣೆ. ಇದು ದೊಡ್ಮನೆಯ ಹೊಸ ಅಧ್ಯಾಯ. ಮುಂದೆ ಹೊಸಪೇಟೆ-ವಿಜಯನಗರದಿಂದ ಅಪ್ಪು ನಗರ ಆಗಬಹುದು. ಸಿನಿಮಾ ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಪ್ತಮಿಗೌಡ ಕಾಂತರ ಆದ ಮೇಲೆ ಬೇರೆ ಲುಕ್​ನಲ್ಲಿ ಕಾಣಿಸ್ತಾರೆ. ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಕನ್ನಡ ಚಿತ್ರರಂಗವನ್ನ 70 ವರ್ಷದಿಂದ ಕಟ್ಟಿದಂತ ಒಂದು ಮನೆ.

ಸಂತೋಷ್ ಆನಂದ್ ರಾಮ್, ನಿರ್ದೇಶಕ

ಚಂದನವನದ ದೊಡ್ಮೆನೆಯ ಹೊಸ ಕುಡಿ ಬೆಳ್ಳೆ ತೆರೆ ಮೇಲೆ ಗ್ರ್ಯಾಂಡ್​ ಎಂಟ್ರಿಕೊಡಲು ರೆಡಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪು ನೆಚ್ಚಿನ ಹೊಸಪೇಟೆಯಲ್ಲಿ ಪ್ರೀ ರಿಲೀಸ್ ಇವೆಂಟ್.. ‘ಯುವ’ ರಾಜ್​ಕುಮಾರ್ ಭಾವುಕ, ಫ್ಯಾನ್ಸ್​ಗೆ ಹೇಳಿದ್ದೇನು?

https://newsfirstlive.com/wp-content/uploads/2024/03/YUVARAJUKUMAR_1.jpg

Load More