newsfirstkannada.com

ಅಣ್ಣ ಡಿ.ಕೆ ಶಿವಕುಮಾರ್‌ಗೆ ₹30 ಕೋಟಿ, ಮಗಳು ಐಶ್ವರ್ಯಾಗೂ ಸಾಲ ಕೊಟ್ಟ ಡಿ.ಕೆ ಸುರೇಶ್‌!

Share :

Published March 28, 2024 at 6:09pm

  ಬರೋಬ್ಬರಿ 593.04 ಕೋಟಿ ರೂಪಾಯಿಗೆ ಡಿ.ಕೆ ಸುರೇಶ್‌ ಒಡೆಯ

  ಡಿಕೆಶಿ ಪುತ್ರಿ ಐಶ್ವರ್ಯಾ, ಪುತ್ರ ಆಕಾಶ್, ತಾಯಿ ಗೌರಮ್ಮಗೂ ಸಾಲ

  ಆಸ್ತಿ ವಿವರದಲ್ಲಿ 150.06 ಕೋಟಿ ರೂ. ಸಾಲ ಇರುವುದಾಗಿ ಘೋಷಣೆ

ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಸೃಷ್ಟಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸಿರುವ ಡಿ.ಕೆ ಸುರೇಶ್ ಅವರು ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ.

ಸಂಸದ ಡಿ.ಕೆ ಸುರೇಶ್‌ ಅವರು ಬರೋಬ್ಬರಿ 593.04 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ತಮ್ಮ ಆಸ್ತಿ ವಿವರದಲ್ಲಿ 150.06 ಕೋಟಿ ರೂ. ಸಾಲ ಇರುವುದಾಗಿ ಹೇಳಿಕೊಂಡಿದ್ದಾರೆ. 57.27 ಕೋಟಿ ರೂ. ಮೊತ್ತದ ಸಾಲಕ್ಕೆ ಸಂಬಂಧಿಸಿದಂತೆ ವಿವಾದವೂ ಜಾರಿಯಲ್ಲಿದೆ ಎಂದಿದ್ದಾರೆ. ಬ್ಯಾಂಕ್‌ನಿಂದ ಅವರು 20.04 ಕೋಟಿ ರೂ. ಸಾಲ ಪಡೆದಿದ್ದಾರೆ. ಈ ಆಸ್ತಿಯಲ್ಲಿ ಅಣ್ಣ ಡಿ.ಕೆ ಶಿವಕುಮಾರ್‌ ಅವರಿಗೆ 30.08 ಕೋಟಿ ರೂಪಾಯಿ ಸಾಲ ನೀಡಿದ್ದಾರೆ.

ಇದನ್ನೂ ಓದಿ: ಕೇವಲ 5 ವರ್ಷದಲ್ಲಿ ಬರೋಬ್ಬರಿ ₹255 ಕೋಟಿ ಹೆಚ್ಚಳ; ಡಿಕೆ ಸುರೇಶ್​​ ಆಸ್ತಿ ಎಷ್ಟು ಗೊತ್ತಾ?

ಅಣ್ಣ ಡಿ.ಕೆ ಶಿವಕುಮಾರ್ ಅವರಿಗೆ ಅಷ್ಟೇ ಅಲ್ಲ ಡಿಕೆಶಿ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂಪಾಯಿ ಹಾಗೂ ಡಿಕೆಶಿ ಪುತ್ರ ಆಕಾಶ್‌ಗೂ ಡಿ.ಕೆ ಸುರೇಶ್ ಅವರಿಗೆ 1.06 ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ಡಿ.ಕೆ ಸುರೇಶ್ ಅವರ ತಾಯಿ ಗೌರಮ್ಮಗೆ 4.75 ಕೋಟಿ ರೂಪಾಯಿ, ಕುಣಿಗಲ್‌ ಶಾಸಕ ರಂಗನಾಥ್‌ ಪತ್ನಿ ಡಾ. ಸುಮಾ ರಂಗನಾಥ್‌ಗೆ 30 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ ಎನ್ನಲಾಗಿದೆ.

ಡಿ.ಕೆ ಸುರೇಶ್ ಅವರು ಶೋಭಾ ಡೆವಲಪರ್ಸ್‌ಗೆ 99.19 ಕೋಟಿ ರೂ., ಸಿಎಂಆರ್‌ ಟ್ರಸ್ಟ್‌ಗೆ 15 ಕೋಟಿ ರೂ. ಲುಲು ಮಾಲ್‌ಗೆ 3 ಕೋಟಿ ರೂ.ಗಳನ್ನು ನೀಡಬೇಕಿದೆ. 23.45 ಲಕ್ಷ ರೂಪಾಯಿ ಮೌಲ್ಯದ 4.8 ಕೆಜಿ ಬೆಳ್ಳಿ, 1.26 ಕೆಜಿ ಚಿನ್ನವನ್ನು ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಣ್ಣ ಡಿ.ಕೆ ಶಿವಕುಮಾರ್‌ಗೆ ₹30 ಕೋಟಿ, ಮಗಳು ಐಶ್ವರ್ಯಾಗೂ ಸಾಲ ಕೊಟ್ಟ ಡಿ.ಕೆ ಸುರೇಶ್‌!

https://newsfirstlive.com/wp-content/uploads/2024/03/dk-suresh-4-1.jpg

Load More