newsfirstkannada.com

ಕೇವಲ 5 ವರ್ಷದಲ್ಲಿ ಬರೋಬ್ಬರಿ ₹255 ಕೋಟಿ ಹೆಚ್ಚಳ; ಡಿಕೆ ಸುರೇಶ್​​ ಆಸ್ತಿ ಎಷ್ಟು ಗೊತ್ತಾ?

Share :

Published March 28, 2024 at 4:32pm

Update March 28, 2024 at 4:51pm

    ಬರೋಬ್ಬರಿ 593.04 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಡಿಕೆ ಬ್ರದರ್

    106.71 ಕೋಟಿ ರೂಪಾಯಿ ಚರಾಸ್ತಿ, 486.33 ಕೋಟಿ ರೂಪಾಯಿ ಸ್ಥಿರಾಸ್ತಿ

    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಸಂಸದ ಡಿ.ಕೆ ಸುರೇಶ್ ಅವರು ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಇಂದು ಕನಕಪುರದಲ್ಲಿ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದ ಡಿ.ಕೆ ಸುರೇಶ್ ಅವರು ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರು ಬರೋಬ್ಬರಿ 593.04 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. 106.71 ಕೋಟಿ ರೂಪಾಯಿ ಚರಾಸ್ತಿ, 486.33 ಕೋಟಿ ರೂಪಾಯಿ ಸ್ಥಿರಾಸ್ತಿಯಲ್ಲಿ ಸಂಸದರು ಹೊಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ ಸುರೇಶ್ ಅವರು 338 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರು. ಕೇವಲ 5 ವರ್ಷದಲ್ಲಿ ಡಿ.ಕೆ ಸುರೇಶ್ ಅವರ ಆಸ್ತಿ ಮೌಲ್ಯ ಬರೋಬ್ಬರಿ 255 ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಇದನ್ನೂ ಓದಿ: ಗಳಸ್ಯ ಗಂಟಸ್ಯ ಮೋದಿ, ದೇವೇಗೌಡ ಸುಳ್ಳುಗಾರರು.. ಕನಕಪುರದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

ಅಣ್ಣನಿಗೆ ಡಿ.ಕೆ ಸುರೇಶ್ ಕೋಟಿ, ಕೋಟಿ ಸಾಲ!

ಸಂಸದ ಡಿ.ಕೆ ಸುರೇಶ್ ಅವರ ಬಳಿ 21 ಕೃಷಿ ಭೂಮಿ, 27 ಕೃಷಿಯೇತರ ಭೂಮಿ ಇದೆ. ಕೃಷಿಕ, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಂಸದರು ಅಫಿಡವಿಟ್‌ನಲ್ಲಿ ಹೇಳಲಾಗಿದೆ. ಅಣ್ಣ ಡಿ.ಕೆ ಶಿವಕುಮಾರ್‌ಗೆ ಡಿ.ಕೆ ಸುರೇಶ್ ಅವರು 30.08 ಕೋಟಿ ರೂ. ಸಾಲ, ಡಿಕೆಶಿ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂಪಾಯಿ, ಡಿಕೆಶಿ ಪುತ್ರ ಆಕಾಶ್‌ಗೆ 1.06 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಕುಣಿಗಲ್‌ ಶಾಸಕ ರಂಗನಾಥ್‌ ಪತ್ನಿ ಡಾ. ಸುಮಾ ರಂಗನಾಥ್‌ಗೆ 30 ಲಕ್ಷ ರೂ. ಸಾಲ ಕೊಟ್ಟಿದ್ದಾರೆ ಎನ್ನಲಾಗಿದೆ.

ಸಂಸದ ಡಿ.ಕೆ ಸುರೇಶ್‌ ಕೈಯಲ್ಲಿ 4.77 ಲಕ್ಷ ರೂ. ಹಣವಿದ್ದರೆ, ಒಟ್ಟು 106.71 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಬ್ಯಾಂಕ್‌ ಖಾತೆಯಲ್ಲಿ 16.61 ಕೋಟಿ ರೂಪಾಯಿ ಹಾಗೂ ವಿವಿಧ ಹೂಡಿಕೆಗಳಲ್ಲಿ 2.14 ಕೋಟಿ ರೂಪಾಯಿ ಎನ್ನಲಾಗಿದೆ.

ಡಿ.ಕೆ ಸುರೇಶ್ ಸಂಪತ್ತಿನ ವಿವರ

ಸದ್ಯ ಏಕಾಂಗಿಯಾಗಿರುವ ಡಿಕೆ ಸುರೇಶ್‌ ಬಳಿ ಯಾವುದೇ ವಾಹನಗಳಿಲ್ಲ
ತಮ್ಮ ಮೇಲೆ ಮೂರು ಕ್ರಿಮಿನಲ್‌ ಪ್ರಕರಣಗಳಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ
23.45 ಲಕ್ಷ ರೂಪಾಯಿ ಮೌಲ್ಯದ 4.8 ಕೆಜಿ ಬೆಳ್ಳಿ, 1.26 ಕೆಜಿ ಚಿನ್ನ
73.58 ಲಕ್ಷ ರೂ. ಮೊತ್ತದ ಪೀಠೋಪಕರಣಗಳಿವೆ
9.96 ಕೋಟಿ ರೂ. ಆಸ್ತಿ ಪಿತ್ರಾರ್ಜಿತ, 276.37 ಕೋಟಿ ರೂ. ನನ್ನ ಗಳಿಕೆ
ಖರೀದಿಸಿದ ಆಸ್ತಿಯ ಖರೀದಿ ಬೆಲೆ 56.06 ಕೋಟಿ ರೂ. ಸದ್ಯದ ಮಾರುಕಟ್ಟೆ ಮೌಲ್ಯ 276.37 ಕೋಟಿ ರೂ.
ಕೃಷಿ ಭೂಮಿಯ ಈಗಿನ ಮೌಲ್ಯ 32.75 ಕೋಟಿ ರೂ. ಕೃಷಿಯೇತರ ಭೂಮಿ ಮೌಲ್ಯ 210.47 ಕೋಟಿ ರೂ.
9 ವಾಣಿಜ್ಯ ಸಂಕೀರ್ಣ ಮೌಲ್ಯ 211.91 ಕೋಟಿ ರೂ. ಆಗಿದೆ
ಮೈಸೂರು ರಸ್ತೆಯಲ್ಲಿರುವ ಗ್ಲೋಬಲ್‌ ಮಾಲ್‌ ಇದರಲ್ಲಿ ಸೇರಿದೆ
ಸದಾಶಿವನಗರದಲ್ಲಿ 25.82 ಕೋಟಿ ರೂ. ಮೌಲ್ಯದ ಮನೆ ಸೇರಿ ಒಟ್ಟು ಮೂರು ಮನೆಗಳಿವೆ. ಇದರ ಒಟ್ಟು ಮೌಲ್ಯ 27.13 ಕೋಟಿ ರೂ.
150.06 ಕೋಟಿ ರೂ. ಸಾಲ ಇರುವುದಾಗಿಯೂ ಡಿಕೆ ಸುರೇಶ್‌ ಹೇಳಿಕೊಂಡಿದ್ದಾರೆ.
57.27 ಕೋಟಿ ರೂ. ಮೊತ್ತದ ಸಾಲಕ್ಕೆ ಸಂಬಂಧಿಸಿದಂತೆ ವಿವಾದವೂ ಜಾರಿಯಲ್ಲಿದೆ
ಬ್ಯಾಂಕ್‌ನಿಂದ ಅವರು 20.04 ಕೋಟಿ ರೂ. ಸಾಲ ಪಡೆದಿರುವ ಡಿಕೆ ಸುರೇಶ್
ಶೋಭಾ ಡೆವಲಪರ್ಸ್‌ಗೆ 99.19 ಕೋಟಿ ರೂ. ಸಿಎಂಆರ್‌ ಟ್ರಸ್ಟ್‌ಗೆ 15 ಕೋಟಿ ರೂ.
ಲುಲು ಮಾಲ್‌ಗೆ 3 ಕೋಟಿ ರೂ.ಗಳನ್ನು ನೀಡಬೇಕಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 5 ವರ್ಷದಲ್ಲಿ ಬರೋಬ್ಬರಿ ₹255 ಕೋಟಿ ಹೆಚ್ಚಳ; ಡಿಕೆ ಸುರೇಶ್​​ ಆಸ್ತಿ ಎಷ್ಟು ಗೊತ್ತಾ?

https://newsfirstlive.com/wp-content/uploads/2024/03/DK-Suresh-1-2.jpg

Load More