newsfirstkannada.com

ರಾಜ್ಯಸಭಾದೊಳಗೆ​​ ಪ್ರಜ್ಞೆ ತಪ್ಪಿ ಬಿದ್ದ ಕಾಂಗ್ರೆಸ್​ ಸಂಸದೆ; ಆಸ್ಪತ್ರೆಗೆ ದಾಖಲು

Share :

Published June 29, 2024 at 2:10pm

    ನೀಟ್​ ಪರೀಕ್ಷೆಯ ಕುರಿತು ಪ್ರತಿಪಕ್ಷಗಳ ಪ್ರತಿಭಟನೆ

    ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಮಯದಲ್ಲಿ ಅವಘಡ

    ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಸಂಸದೆಗೆ ಚಿಕಿತ್ಸೆ

ಕಾಂಗ್ರೆಸ್​ ಸಂಸದೆ ಫುಲೋ ದೇವಿ ನೇತಮ್ ರಾಜ್ಯಸಭೆಯೊಳಗೆ​​ ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆದಿದೆ. ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ: Breaking: ಮಂಡ್ಯದಲ್ಲಿ ಹಳ್ಳಕ್ಕೆ ಬಿದ್ದ ಸರ್ಕಾರಿ ಬಸ್​.. ಪ್ರಯಾಣಿಕರಿಗೆ ಗಂಭೀರ ಗಾಯ

ನೀಟ್​ ಪರೀಕ್ಷೆಯ ಕುರಿತು ಸರ್ಕಾರ ಚರ್ಚೆ ನಡೆಸಲು ನಿರಾಕರಿಸಿದ್ದನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ಮಾಡಿದ್ದರು. ಈ ವೇಳೆ ಛತ್ತೀಸ್​ಗಢ ಸಂಸದೆ ಫುಲೋ ದೇವಿ ನೇತಮ್ ಕೂಡ ಭಾಗಿಯಾಗಿದ್ದರು. ರಾಜ್ಯಸಭಾದೊಳಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಮಯದಲ್ಲಿ ಸಂಸದೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಇದನ್ನೂ ಓದಿ: 38 ವರ್ಷ, 4 ಯಶಸ್ವಿ ಸಿನಿಮಾ.. ಕಲ್ಕಿ ನಿರ್ದೇಶಕನ ಸಿನಿಮಾ ಜರ್ನಿ ಬಲು ಡಿಫರೆಂಟ್​

ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಸಂಸದೆ ಫುಲೋ ದೇವಿ ನೇತಮ್ ಅವರನ್ನು ದಾಖಲಿಸಲಾಗಿದೆ. ಸಂಸದೆಯನ್ನು ಭೇಟಿ ಮಾಡಿದ ಬಳಿಕ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಂಸದರಿಗೆ ಗೌರವ ನಿಡುತ್ತಿಲ್ಲ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಸಭಾದೊಳಗೆ​​ ಪ್ರಜ್ಞೆ ತಪ್ಪಿ ಬಿದ್ದ ಕಾಂಗ್ರೆಸ್​ ಸಂಸದೆ; ಆಸ್ಪತ್ರೆಗೆ ದಾಖಲು

https://newsfirstlive.com/wp-content/uploads/2024/06/Pulo-Devi.jpg

Load More