newsfirstkannada.com

38 ವರ್ಷ, 4 ಯಶಸ್ವಿ ಸಿನಿಮಾ.. ಕಲ್ಕಿ ನಿರ್ದೇಶಕನ ಸಿನಿಮಾ ಜರ್ನಿ ಬಲು ಡಿಫರೆಂಟ್​

Share :

Published June 29, 2024 at 1:19pm

    ‘ಮಹಾನಟಿ’ಯ ಕರ್ತೃ ನಾಗ್​ ಅಶ್ವಿನ್​ ಸಿನಿ ಜರ್ನಿ ಹೀಗಿದೆ

    ಸಹಾಯಕ ನಿರ್ದೇಶಕನಿಂದ ನಿರ್ದೇಶಕನಾಗಿ ಬಡ್ತಿ ಪಡೆದದ್ದು ಹೇಗೆ?

    ನಾಗ್​ ಅಶ್ವಿನ್​ರವರಿಗೆ ಹೆಣ್ಣು ಕೊಟ್ಟ ಮಾವನ ಹಿನ್ನೆಲೆ ಗೊತ್ತಾ?

ಕಲ್ಕಿ 2898 AD ಬಿಗ್​ ಬಜೆಟ್​ನಲ್ಲಿ ಮೂಡಿ ಬಂದ ಬಹುಭಾಷಾ​ ಸಿನಿಮಾ. ಸದ್ಯ ಬಿಡುಗಡೆಗೊಂಡು 2 ದಿನಗಳು ಕಳೆದಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್​ ಹಾಗೂ ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ಸಿನಿಮಾ ಇದಾಗಿದೆ. ನಾಗ್​ ಅಶ್ವಿನ್​ ಕಥೆ, ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಇದೀಗ ತೆರೆ ಮೇಲೆ ರಾರಾಜಿಸುತ್ತಿದೆ. ಆದರೆ ವಿಚಾರ ಅದಲ್ಲ, 38 ವರ್ಷದ ನಿರ್ದೇಶಕ ಈ ಸಿನಿಮಾದ ಕರ್ತೃ. ಈ ಹಿಂದೆಯೂ ಗಮನ ಸೆಳೆಯುವಂತ ಸಿನಿಮಾಗಳು ಭಾರತೀಯ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಇವರು. ಸದ್ಯ ನಾಗ್​ ಅಶ್ವಿನ್​ರವರ ಸಿನಿಮಾ ಜರ್ನಿಯನ್ನು ನೋಡುವುದಾದರೆ..

ನಾಗ್​ ಅಶ್ವಿನ್​ ಮೂಲತಃ ಹೈದರಾಬಾದ್​ನವರು. 23 ಏಪ್ರಿಲ್​ 1986ರಲ್ಲಿ ಜನಿಸಿದರು. ಸಿನಿಮಾ ಕುರಿತಾದ ವಿಶೇಷ ಆಸಕ್ತಿಯುಳ್ಳ ವ್ಯಕ್ತಿ 2008ರಲ್ಲಿ ‘ನೇನು ಮೀಕು ತೆಲುಸಾ?’ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಬಳಿಕ 2010ರಲ್ಲಿ ‘ಲೀಡರ್’ ಮತ್ತು ‘ಲೈಫ್​ ಈಸ್​​ ಬ್ಯೂಟಿಫುಲ್’​ (2012) ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಮಾತ್ರವಲ್ಲದೆ, ಈ ಮೂರು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದರು.

ಇದನ್ನೂ ಓದಿ: ಮದುವೆ ನಿರಾಕರಣೆ.. ವಾಟ್ಸಪ್​ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಸಹಾಯಕನಿಂದ ನಿರ್ದೇಶಕನಾಗಿ ಬಡ್ತಿ

2015ರಲ್ಲಿ ನಾಗ್​ ಅಶ್ವಿನ್​ ದಿಕ್ಕೇ ಬದಲಾಯಿಸಿದ ಸಿನಿಮಾವೆಂದರೆ ಅದು ‘ಯೆವಡೆ ಸುಬ್ರಮಣ್ಯಂ’. ಈ ಸಿನಿಮಾದ ಕಥೆ, ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ‘ಯೆವಡೆ ಸುಬ್ರಮಣ್ಯಂ’ ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತಲ್ಲದೆ, ಸಹಾಯಕ ನಿರ್ದೇಶಕನಿಂದ ನಿರ್ದೇಶಕನಾಗಿ ನಾಗ್​ ಅಶ್ವಿನ್​ ಬಡ್ತಿ ಪಡೆದರು. ಜೊತೆಗೆ ಅನೇಕ ಪ್ರಶಸ್ತಿ ಬಾಚಿಕೊಂಡರು.

‘ಮಹಾನಟಿ’ಯ ಕರ್ತೃ

2018ರಲ್ಲಿ ನಾಗ್​ ‘ಮಹಾನಟಿ’ ಸಿನಿಮಾ ಮಾಡಿದರು. ಈ ಸಿನಿಮಾ ಕೂಡ ಬಹುತೇಕ ಅಭಿಮಾನಿಗಳ ಮನ ಗೆದ್ದಿತ್ತು. ಕೀರ್ತಿ ಸುರೇಶ್​ ನಾಯಕಿಯನ್ನಾಗಿ ಇಟ್ಟುಕೊಂಡು ಕಥೆ ಹೆಣೆದಿದ್ದ ನಾಗ್​ 25 ಕೋಟಿ ಬಜೆಟ್​ನಲ್ಲಿ ಸಿನಿಮಾ ಮಾಡಿದ್ದರು. ಆದರೆ ಈ ಸಿನಿಮಾ ಅವರಿಗೆ ನೀಡಿದ್ದು ಬರೋಬ್ಬರಿ 83 ಕೋಟಿ!.

ಇದನ್ನೂ ಓದಿ: ನನ್ನ ಮದುವೆಯಾಗು..! ಗಂಡ ಮತ್ತು 3 ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ ಮಹಿಳೆ!

ನಿರ್ದೇಶಕನಿಂದ ನಿರ್ಮಾಣದತ್ತ

2021ರಲ್ಲಿ ನಾಗ್​ ಅಶ್ವಿನ್​ ‘ಪಿತ್ತ ಕಥಲು’ ಸಿನಿಮಾ ಬರೆದರು. ಜೊತೆಗೆ ನಿರ್ದೇಶನ ಮಾಡಿದರು. ಶೃತಿ ಹಾಸನ್​ ಅವರನ್ನು ನಾಯಕಿಯನ್ನಾಗಿಸಿಕೊಂಡು ಸಿನಿಮಾ ರಿಲೀಸ್​ ಮಾಡಿದರು. ಅದೇ ವರ್ಷ ‘ಜಾತಿ ರತ್ನಲು’ ಸಿನಿಮಾ ಕಥೆ ಆಲಿಸಿದ ನಾಗ್​ ಈ ಸಿನಿಮಾಗೆ ನಿರ್ಮಾಪಕರೂ ಆದರು. ಅಂದಹಾಗೆಯೇ ‘ಪಿತ್ತ ಕಥಲು’ ಅನುದೀಪ್​ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ 6 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿತ್ತು. ಆದರೆ 70 ಕೋಟಿ ಆದಾಯವನ್ನು ಈ ಸಿನಿಮಾ ನೀಡಿದೆ.

ಇದನ್ನೂ ಓದಿ: 2ನೇ ದಿನಕ್ಕೆ ಗಳಿಕೆಯಲ್ಲಿ ಶೇ.50ರಷ್ಟು ಕುಸಿದ ಕಲ್ಕಿ ಸಿನಿಮಾ! ಇಲ್ಲಿವರೆಗಿನ ಗಳಿಕೆಯೆಷ್ಟು? ಇಲ್ಲಿದೆ ಮಾಹಿತಿ

ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣದಲ್ಲಿ ಸೈ ಎನಿಸಿಕೊಂಡ ನಾಗ್​ ಅಶ್ವಿನ್​ ಬಿಗ್​ ಬಜೆಟ್​ನಲ್ಲಿ ಸಿನಿಮಾ ಮಾಡುವ ಯೋಚನೆ ಹೊಳೆದಿತ್ತು. ಅದರಂತೆ ಬಾಹುಬಲಿ ಪ್ರಭಾಸ್​, ದೀಪಿಕಾ ಪಡುಕೋಣೆ ಜೊತೆಗೆ ಬಿಗ್​ ಬಿ ಅಮಿತಾಭ್, ಕಮಲ್​ ಹಾಸನ್​ರಂತಹ ಮೇರುನಟರನ್ನು ಇಟ್ಟುಕೊಂಡು ಮಾರ್ಡನ್​ ಮಹಾಭಾರತ ಕಥೆಯನ್ನಾಧರಿಸಿ ಕಲ್ಕಿ 2898 AD ಸಿನಿಮಾ ಹೆಣೆದರು. ಸದ್ಯ ಈ ಬಹುಭಾಷಾ ಸಿನಿಮಾ ಥಿಯೇಟರ್​ಗಳಲ್ಲಿ ರಿಲೀಸ್​ಗೊಂಡು ರನ್ನಿಂಗ್​ನಲ್ಲಿದೆ.

ಅಂದಹಾಗೆಯೇ ನಾಗ್​ ಅಶ್ವಿನ್​ ಇಲ್ಲಿಯವರೆಗೆ 4 ಸಿನಿಮಾ ಮಾಡಿದ್ದಾರೆ. ಒಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ‘ಯೆವೆಡೆ ಸುಬ್ರಮಣ್ಯಂ’ ಮತ್ತು ‘ಮಹಾನಟಿ’ ನಾಗ್​ ದಿಕ್ಕನ್ನೇ ಬದಲಾಯಿಸಿದ ಸಿನಿಮಾವಾಗಿದೆ. ಈ ಎರಡು ಸಿನಿಮಾಗಳು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಇದಲ್ಲದೆ, ನಾನಿ, ಕೀರ್ತಿ ಸುರೇಶ್​, ಶೃತಿ ಹಾಸನ್​, ಪ್ರಭಾಸ್​, ದೀಪಿಕಾ ಅವರಿಗೆ ನಾಗ್​ ಈಗಾಗಲೇ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಅರೆಸ್ಟ್ ಆದ ದಿನ ನಾನೂ ಶೂಟಿಂಗ್​ ಸ್ಪಾಟ್​ನಲ್ಲಿದ್ದೆ.. ಬಿಗ್​ ಬಾಸ್​ ವಿನಯ್​ ಬಿಚ್ಚಿಟ್ರು ಘಟನೆಯ ಸತ್ಯಾಸತ್ಯತೆ

ವೈವಾಹಿಕ ಬದುಕು

ನಾಗ್​ ಅಶ್ವಿನ್​ ಮಡದಿ ಪ್ರಿಯಾಂಕ ದತ್​. 2015ರಲ್ಲಿ ಈ ಜೋಡಿ ವಿವಾಹವಾದರು. ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿರುವ ಪ್ರಿಯಾಂಕ ದತ್​ರವರು ಗಂಡನ ಎಲ್ಲಾ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಂದಹಾಗೆಯೇ ಪ್ರಿಯಾಂಕರವರು 600 ಕೋಟಿ ​ ಬಜೆಟ್​ನಲ್ಲಿ ನಿರ್ಮಾಣಗೊಂಡ ಕಲ್ಕಿ ಸಿನಿಮಾದ ನಿರ್ಮಾಪಕ ಅಶ್ವಿನಿ ದತ್​ ಅವರ ಮಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

38 ವರ್ಷ, 4 ಯಶಸ್ವಿ ಸಿನಿಮಾ.. ಕಲ್ಕಿ ನಿರ್ದೇಶಕನ ಸಿನಿಮಾ ಜರ್ನಿ ಬಲು ಡಿಫರೆಂಟ್​

https://newsfirstlive.com/wp-content/uploads/2024/06/Nag-Ashwin-1.jpg

Load More