newsfirstkannada.com

BREAKING: ಕೊನೆಗೂ ಕೋಲಾರ ಟಿಕೆಟ್ ಘೋಷಣೆ; ಎರಡೂ ಬಣಗಳಿಗೆ ಸೆಡ್ಡು ಹೊಡೆದ ಕಾಂಗ್ರೆಸ್ ಹೈಕಮಾಂಡ್‌!

Share :

Published March 30, 2024 at 11:30am

Update March 30, 2024 at 11:44am

    ಕೊನೆಗೂ ಕೋಲಾರ ಟಿಕೆಟ್ ಘೋಷಣೆ ಮಾಡಿದ ಕಾಂಗ್ರೆಸ್ ಹೈಕಮಾಂಡ್‌

    ಕೋಲಾರದಿಂದ ಕೆ.ವಿ ಗೌತಮ್ ಅವರನ್ನು ಕಣಕ್ಕಿಳಿಸಲು ದಿಲ್ಲಿ ನಾಯಕರ ನಿರ್ಧಾರ

    ಕೆ.ಹೆಚ್‌ ಮುನಿಯಪ್ಪ, ರಮೇಶ್ ಕುಮಾರ್ ಎರಡೂ ಬಣಕ್ಕೆ ಹೈಕಮಾಂಡ್ ಸೆಡ್ಡು

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೊನೆಗೂ ಕೋಲಾರ ಟಿಕೆಟ್ ಘೋಷಣೆ ಮಾಡಿದೆ. ಕೋಲಾರದಿಂದ ಕೆ.ವಿ ಗೌತಮ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ.

ರಾಜ್ಯದ 27 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಕೋಲಾರ ಮಾತ್ರವೇ ಕಗ್ಗಂಟಾಗಿತ್ತು. ಕೋಲಾರದ ಟಿಕೆಟ್‌ಗಾಗಿ ಹಾಲಿ ಸಚಿವ ಕೆ.ಹೆಚ್‌ ಮುನಿಯಪ್ಪ ಹಾಗೂ ಮಾಜಿ ಸಚಿವ ರಮೇಶ್ ಕುಮಾರ್ ಬಣ ಪಟ್ಟು ಹಿಡಿದಿತ್ತು.

ಇದನ್ನೂ ಓದಿ: 3 ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳು ಕಣಕ್ಕೆ; ರಕ್ಷಾ ರಾಮಯ್ಯ, ಸುನೀಲ್ ಬೋಸ್‌ಗೆ ಲಕ್‌; ವಿ.ಎಸ್‌ ಉಗ್ರಪ್ಪಗೆ ಶಾಕ್‌!

ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಬೇಕು ಎಂದು ಮುನಿಯಪ್ಪನವರು ಸಾಕಷ್ಟು ಲಾಬಿ ಮಾಡಿದ್ದರು. ಮುನಿಯಪ್ಪನವರ ಒತ್ತಡಕ್ಕೆ ರಮೇಶ್ ಕುಮಾರ್‌ ಬೆಂಬಲಿಗ ಶಾಸಕರು, ಸಚಿವರು ಸೆಡ್ಡು ಹೊಡೆದು ರಾಜೀನಾಮೆ ನೀಡಲು ಮುಂದಾಗಿದ್ದರು. ಇದೀಗ ಉಭಯ ಬಣಗಳನ್ನ ಪರಿಗಣಿಸದ ಕಾಂಗ್ರೆಸ್‌ ಹೈಕಮಾಂಡ್ ಮೂರನೇಯವರಿಗೆ ಟಿಕೆಟ್ ನೀಡಿದೆ.

ರಮೇಶ್ ಕುಮಾರ್ ಹಾಗೂ ಮುನಿಯಪ್ಪ ಎರಡೂ ಬಣಗಳ ಅಭಿಪ್ರಾಯ ಪರಿಗಣಿಸದೆ ಕಾಂಗ್ರೆಸ್ ಹೈಕಮಾಂಡ್‌ 3ನೇ ಅಭ್ಯರ್ಥಿಯನ್ನೇ ಅಂತಿಮಗೊಳಿಸಿದೆ. ತಮ್ಮದೇ ಬಣದವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದ ಉಭಯ ಬಣಗಳಿಗೆ ಹೈಕಮಾಂಡ್ ನಿರ್ಧಾರದಿಂದ ಹಿನ್ನಡೆಯಾಗಿದೆ.

ತಮ್ಮ ಅಳಿಯನಿಗೆ ಟಿಕೆಟ್ ನೀಡುವಂತೆ ಮುನಿಯಪ್ಪ ಒತ್ತಾಯಿಸಿದ್ದು, ಮೂರನೇ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಸರಿಯಲ್ಲ ಎಂದು ಹೇಳಿದ್ದರು. ತಮ್ಮ ಬಣ ಜೊತೆಗೆ ದಲಿತ ಬಲ ಸಮುದಾಯಕ್ಕೆ ಟಿಕೆಟ್ ನೀಡುವಂತೆ ರಮೇಶ್ ಕುಮಾರ್ ಅವರು ಪಟ್ಟು ಹಿಡಿದಿದ್ದರು.

ಈ ಎರಡೂ ಬಣಗಳ ನಡುವೆ ಸಭೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಭೆ ನಡೆಸಿದ್ದರು. ಅಂತಿಮವಾಗಿ ಉಭಯ ಬಣಗಳ ಅಭಿಪ್ರಾಯ ಪಕ್ಕಕ್ಕಿಟ್ಟು ಕಾಂಗ್ರೆಸ್ ಹೈಕಮಾಂಡ್‌ ಟಿಕೆಟ್ ಅಂತಿಮಗೊಳಿಸಿದೆ. ಕಾಂಗ್ರೆಸ್ ನಾಯಕ ಕೆ.ವಿ ಗೌತಮ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಕೋಲಾರದ ಕಾಂಗ್ರೆಸ್‌ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಹೈಕಮಾಂಡ್ ಟಿಕೆಟ್ ಘೋಷಣೆಯ ಬಳಿಕ ಎರಡು ಬಣದ ನಾಯಕರ ಮುಂದಿನ ರಾಜಕೀಯ ನಡೆ ಕುತೂಹಲ ಕೆರಳಿಸಿದೆ. ಈ ಅಸಮಾಧಾನದ ಮಧ್ಯೆ ಕೆ.ವಿ ಗೌತಮ್ ಅವರು ಜೆಡಿಎಸ್‌, ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಎದುರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಕೊನೆಗೂ ಕೋಲಾರ ಟಿಕೆಟ್ ಘೋಷಣೆ; ಎರಡೂ ಬಣಗಳಿಗೆ ಸೆಡ್ಡು ಹೊಡೆದ ಕಾಂಗ್ರೆಸ್ ಹೈಕಮಾಂಡ್‌!

https://newsfirstlive.com/wp-content/uploads/2024/03/KLR_GOWTHAM_MUNIYAPPA.jpg

Load More