newsfirstkannada.com

3 ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳು ಕಣಕ್ಕೆ; ರಕ್ಷಾ ರಾಮಯ್ಯ, ಸುನೀಲ್ ಬೋಸ್‌ಗೆ ಲಕ್‌; ವಿ.ಎಸ್‌ ಉಗ್ರಪ್ಪಗೆ ಶಾಕ್‌!

Share :

Published March 29, 2024 at 9:50pm

Update March 29, 2024 at 10:04pm

    ಕರ್ನಾಟಕದ ಮೂರು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆ

    ಬಳ್ಳಾರಿ - ಇ. ತುಕಾರಾಮ್, ಚಾಮರಾಜನಗರ - ಸುನೀಲ್ ಬೋಸ್‌

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಕ್ಷಾರಾಮಯ್ಯ ಅವರಿಗೆ ಟಿಕೆಟ್

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಕರ್ನಾಟಕದ ಮೂರು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ.

3 ಕ್ಷೇತ್ರಕ್ಕೆ ಅಭ್ಯರ್ಥಿಗಳು ಯಾರು?
ಬಳ್ಳಾರಿ – ಇ. ತುಕಾರಾಮ್
ಚಾಮರಾಜನಗರ – ಸುನೀಲ್ ಬೋಸ್‌
ಚಿಕ್ಕಬಳ್ಳಾಪುರ – ರಕ್ಷಾರಾಮಯ್ಯ

ಇದನ್ನೂ ಓದಿ: ₹15 ಸಮೋಸಾ, ₹10 ಚಹಾ.. ಎಲೆಕ್ಷನ್‌ಗೆ ಅಭ್ಯರ್ಥಿಗಳು ಎಷ್ಟು ಖರ್ಚು ಮಾಡಬೇಕು; ಪ್ರತಿಯೊಂದಕ್ಕೂ ರೇಟ್‌ ಫಿಕ್ಸ್‌!

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಇ.ತುಕಾರಾಮ್‌ ಅವರಿಗೆ ಅವಕಾಶ ನೀಡಿದೆ. ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ನಾಯಕ ವಿ.ಎಸ್‌ ಉಗ್ರಪ್ಪನವರು ಸಾಕಷ್ಟು ಪ್ರಯತ್ನ ಮಾಡಿದ್ದರು. 2018ರ ಉಪಚುನಾವಣೆಯಲ್ಲಿ ವಿ.ಎಸ್. ಉಗ್ರಪ್ಪ ಗೆದ್ದಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಉಗ್ರಪ್ಪ ಸೋಲು ಅನುಭವಿಸಿದ್ದರು.

ಚಾಮರಾಜನಗರದಲ್ಲಿ ಸಚಿವ ಹೆಚ್‌.ಸಿ ಮಹದೇವಪ್ಪನವರು ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿ ಎಲ್ಲಾ ಸಚಿವರ ಮಕ್ಕಳಿಗೆ ಟಿಕೆಟ್ ಕೊಡುವಾಗ ನನ್ನ ಮಗನಿಗೆ ಯಾಕೆ ಕೊಡುವುದಿಲ್ಲ ಎಂದು ಮಹದೇವಪ್ಪನವರು ಆಕ್ರೋಶ ಹೊರಹಾಕಿದ್ದರು. ಮಹದೇವಪ್ಪನವರ ಮಗನಿಗೆ ಟಿಕೆಟ್ ನೀಡುವ ಮೂಲಕ ಚಾಮರಾಜನಗರದಲ್ಲಿ ಕಾಂಗ್ರೆಸ್ ಹೊಸ ಲೆಕ್ಕಾಚಾರಕ್ಕೆ ರೆಡಿಯಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಹೈಕಮಾಂಡ್ ರಕ್ಷಾ ರಾಮಯ್ಯ ಅವರಿಗೆ ಅವಕಾಶ ನೀಡಿದೆ. ವೀರಪ್ಪ ಮೊಯ್ಲಿ, ಶಿವಶಂಕರ್ ರೆಡ್ಡಿ ಸೇರಿದಂತೆ ಹಲವು ನಾಯಕರು ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಅಂತಿಮವಾಗಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಕ್ಷಾ ರಾಮಯ್ಯನವರು ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳು ಕಣಕ್ಕೆ; ರಕ್ಷಾ ರಾಮಯ್ಯ, ಸುನೀಲ್ ಬೋಸ್‌ಗೆ ಲಕ್‌; ವಿ.ಎಸ್‌ ಉಗ್ರಪ್ಪಗೆ ಶಾಕ್‌!

https://newsfirstlive.com/wp-content/uploads/2024/03/congres-1.jpg

Load More