newsfirstkannada.com

ಇಂದು ದೇಶದಾದ್ಯಂತ ಪ್ರತಿಭಟನೆಗೆ ಕರೆಕೊಟ್ಟ ಕಾಂಗ್ರೆಸ್; ಕಾರಣ..?

Share :

Published March 30, 2024 at 9:23am

    ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ

    ಹೈಕಮಾಂಡ್ ಸೂಚನೆಯಂತೆ ಬೀದಿಗಿಳಿದು ಪ್ರತಿಭಟನೆ

    ಲೋಕಸಭೆ ಚುನಾವಣೆಯ ಕಾವಿನ ಮಧ್ಯೆಯೂ ಪ್ರೊಟೆಸ್ಟ್

ಆದಾಯ ತೆರಿಗೆ ಇಲಾಖೆಯಿಂದ ರಾಷ್ಟ್ರೀಯ ಕಾಂಗ್ರೆಸ್​​ಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಇಂದು ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್​ ಹೈಕಮಾಂಡ್ ಪ್ರತಿಭಟನೆಗೆ ಕರೆ ನೀಡಿದ್ದು, ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್​ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ.

ಕಾಂಗ್ರೆಸ್ ನಾಯಕರಿಂದ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ. ಲೋಕಸಭೆಯ ಮೊದಲ‌ ಹಂತದ ಮತದಾನ ಮೂರುವಾರ ಬಾಕಿಯಿರುವಾಗ ಕಾಂಗ್ರೆಸ್​ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ‘ಆದಾಯ’ಕ್ಕೆ ಅತಿದೊಡ್ಡ ಪೆಟ್ಟು.. IT ಇಲಾಖೆಯಿಂದ ಹೊಸ ಡಿಮ್ಯಾಂಡ್‌ ನೋಟಿಸ್!

ಒಟ್ಟು ಐದು ವರ್ಷಗಳ ಆದಾಯ ತೆರಿಗೆ ಬಗ್ಗೆ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ. 1994-95, 2017-18 to 2020-21ರ ಆದಾಯ ತೆರಿಗೆಯ ಬಗ್ಗೆ ಉಲ್ಲೇಖಿಸಲಾಗಿದೆ. ನೋಟಿಸ್ ಪ್ರಕಾರ, ಒಟ್ಟು 1,823 ಕೋಟಿ ಬಾಕಿ ಹಣವನ್ನು ಉಳಿಸಿ ಕೊಂಡಿದೆ ಎಂದು ಐಟಿ ಇಲಾಖೆ ಹೇಳಿದೆ.

ಈ ಮುಂಚೆ ಕಾಂಗ್ರೆಸ್​ನ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದರಲ್ಲಿ ಒಟ್ಟು 135 ಕೋಟಿ ಹಣ ಇತ್ತು. ಕೇಂದ್ರ ಸರ್ಕಾರದ ಈ ನಡೆಯಿಂದ ಚುನಾವಣೆ ಮಾಡಲು ಸಾದ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ದೇಶದಾದ್ಯಂತ ಪ್ರತಿಭಟನೆಗೆ ಕರೆಕೊಟ್ಟ ಕಾಂಗ್ರೆಸ್; ಕಾರಣ..?

https://newsfirstlive.com/wp-content/uploads/2024/03/CONGRESS-1.jpg

Load More