/newsfirstlive-kannada/media/post_attachments/wp-content/uploads/2024/05/SUCHARITA-1.jpg)
ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಒಡಿಶಾ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿ (Sucharita Mohanty) ಅವರು ಕಾಂಗ್ರೆಸ್ಗೆ ಬಿಗ್ ಶಾಕ್ ನೀಡಿದ್ದಾರೆ. ಚುನಾವಣಾ ಸ್ಪರ್ಧಾ ಅಖಾಡದಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ಹಣ ಇಲ್ಲ. ಪಕ್ಷ ನನಗೆ ದುಡ್ಡು ಕೊಟ್ಟಿಲ್ಲ. ಹೀಗಾಗಿ ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸುಚರಿತಾ ಮೊಹಂತಿ ಅವರು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ವಿರುದ್ಧ ಸ್ಪರ್ಧಿಸಿದ್ದರು. ಪುರಿ ಲೋಕಸಭೆ ಕ್ಷೇತ್ರಕ್ಕೆ ಆರನೇ ಹಂತದ ಮತದಾನ ಅಂದರೆ ಮೇ 25 ರಂದು ಚುನಾವಣೆ ನಡೆಯಲಿದೆ. ಈ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮೇ 6 ಕೊನೆಯ ದಿನವಾಗಿದೆ. ಬಿಜೆಡಿಯ ಅರೂಪ್ ಪಟ್ನಾಯಕ್ ಮತ್ತು ಬಿಜೆಪಿಯ ಸಂಬಿತ್ ಪಾತ್ರಾ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಮೊಹಂತಿ ಅವರು ಇದುವರೆಗೂ ನಾಮಪತ್ರವನ್ನೇ ಸಲ್ಲಿಕೆ ಮಾಡಿಲ್ಲ.
ಇದನ್ನೂ ಓದಿ:ಆರ್ಸಿಬಿಯಲ್ಲಿ ಹೊಸ ಗ್ಯಾಂಗ್..! KGF ಫ್ಲಾಪ್ ಬೆನ್ನಲ್ಲೇ KJP ಬ್ಲಾಕ್ಬಸ್ಟರ್ ಹಿಟ್..!
ಪತ್ರದಲ್ಲಿ ಏನಿದೆ..?
ವರದಿಗಳ ಪ್ರಕಾರ.. ಕೆಸಿ ವೇಣುಗೋಪಾಲ್ ಅವರಿಗೆ ಬರೆದ ಪತ್ರದಲ್ಲಿ ಸುಚರಿತಾ, ಹಣ ಸಿಗದೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಪಕ್ಷ ನನಗೆ ಹಣ ನೀಡಲು ನಿರಾಕರಿಸಿದ ಕಾರಣ ಪ್ರಚಾರದ ಮೇಲೆ ಪರಿಣಾಮ ಬೀರಿದೆ. ಎಐಸಿಸಿ ಒಡಿಶಾ ಉಸ್ತುವಾರಿ ಡಾ.ಅಜೋಯ್ ಕುಮಾರ್ ಅವರು ಪ್ರಚಾರದ ಜವಾಬ್ದಾರಿಯನ್ನು ನಾನೇ (ಮೊಹಂತಿ) ವಹಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾನು 10 ವರ್ಷಗಳ ಹಿಂದೆ ರಾಜಕೀಯ ಪ್ರವೇಶ ಮಾಡಿದೆ. ಅಂದು ನಾನು ಸಂಬಳ ಪಡೆಯುತ್ತಿದ್ದ ಪತ್ರಕರ್ತೆ. ಪುರಿಯಲ್ಲಿ ನನ್ನ ಪ್ರಚಾರಕ್ಕೆ ನಾನು ಗಳಿಸಿದ ಎಲ್ಲಾ ಹಣವನ್ನೂ ಬಳಸಿಕೊಂಡಿದ್ದೆ. ನನ್ನ ಚುನಾವಣಾ ಪ್ರಚಾರವನ್ನು ಬೆಂಬಲಿಸಲು ಸಾರ್ವಜನಿಕರಿಂದ ದೇಣಿಗೆ ಕೂಡ ಸಂಗ್ರಹಿಸಿದ್ದೆ. ಆದರೆ ಇಲ್ಲಿಯವರೆಗೆ ನಾನು ಹೆಚ್ಚಿನ ಯಶಸ್ಸನ್ನು ಸಾಧಿಸಲು ಆಗಲಿಲ್ಲ. ನಾನು ಚುನಾವಣಾ ಪ್ರಚಾರದ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೇನೆ. ಪಕ್ಷದ ನಿಧಿಯಿಲ್ಲದೇ ಪುರಿಯಲ್ಲಿ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದು ವಿಷಾದಿಸುತ್ತೇನೆ. ಹೀಗಾಗಿ ಪುರಿ ಸಂಸದೀಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಸುಚರಿತಾ ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು ಆರೋಪ.. ಈ ಸಾವು ನ್ಯಾಯವೇ..?
ಗುಜರಾತ್ನ ಸೂರತ್‌ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ನಾಮಪತ್ರ ರದ್ದಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಗೆದ್ದಿದ್ದಾರೆ. ಇದನ್ನು ಅರಿತಿರುವ ಮೊಹಂತಿ ಅವರು ತಮ್ಮ ಟಿಕೆಟ್ ಅನ್ನು ಪಕ್ಷಕ್ಕೆ ಹಿಂತಿರುಗಿಸಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಮೊಹಂತಿ ಅವರು ಪಿನಕಿ ಮಿಶ್ರಾ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಬಿಜೆಡಿಯ ಮಿಶ್ರಾಗೆ 5,23,161 ಮತಗಳು ಬಂದಿದ್ದವು. ಮೊಹಂತಿ ಅವರು 2,89,800 ಮತಗಳ ಅಂತರದಿಂದ ಸೋಲನ್ನು ಕಂಡಿದ್ದರು.
ಇದನ್ನೂ ಓದಿ:ಆರ್ಸಿಬಿಗೆ ಇವತ್ತು ಬಿಗ್ ಡೇ.. ಪ್ಲೇಯಿಂಗ್-11ನಲ್ಲಿ ಆಗುತ್ತಾ ಭಾರೀ ಬದಲಾವಣೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ