newsfirstkannada.com

ಕಂಪ್ಲೇಂಟ್ ​ಕೊಟ್ಟ ಯುವತಿ ಮೇಲೆ ಸುಳ್ಳು ಚಾರ್ಜ್​ಶೀಟ್​.. ಕಾನ್ಸ್‌ಟೇಬಲ್​ ಕಳ್ಳಾಟಕ್ಕೆ ಬೆಚ್ಚಿ ಬಿದ್ದ ಪೊಲೀಸ್‌!

Share :

Published March 23, 2024 at 12:51pm

    ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದ ಕೇಸ್

    ತನಿಖಾಧಿಕಾರಿಗೆ ಗೊತ್ತಿಲ್ಲದಂತೆ ಚಾರ್ಜ್ ಶೀಟ್ ಹಾಕಿದ ಕಾನ್ಸ್‌ಟೇಬಲ್‌!

    ಪೊಲೀಸ್ ಐಟಿಯಲ್ಲಿ ಅಪ್ಲೋಡ್ ಮಾಡಿದ್ದ ಕಾನ್ಸ್‌ಟೇಬಲ್ ಯದುಕುಮಾರ್

ಬೆಂಗಳೂರು: ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ಹಾಗೇ ತಪ್ಪು ಮಾಡಿದ ಮೇಲೆ ಶಿಕ್ಷೆ ಆಗಲೇಬೇಕು. ಅದು ಕಾನೂನು ರಕ್ಷಕನಾಗಿದ್ರೂ ಅಷ್ಟೇ ಖದೀಮರಾಗಿದ್ರೂ ಅಷ್ಟೇ. ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಾನೂನಿನ ರಕ್ಷಣೆ ಮಾಡಬೇಕಾದವ್ರೆ ಇಲ್ಲಿ. ಅಡ್ಡ ದಾರಿ ಹಿಡಿದಿದ್ದಾರೆ. ಅದಕ್ಕೀಗ ತಲೆ ದಂಡವೂ ಆಗಿದೆ. ತನಿಖಾಧಿಕಾರಿಗೆ ಗೊತ್ತಿಲ್ಲದೇ ಚಾರ್ಜ್ ಶೀಟ್ ಫೈಲ್ ಮಾಡಿದ್ದ ಕಾನ್ಸ್‌ಟೇಬಲ್ ಒಬ್ಬರನ್ನ ಅಮಾನತು ಮಾಡಲಾಗಿದೆ.

ಯದುಕುಮಾರ್ ಎಂಬುವವರು ಆರ್.ಆರ್ ನಗರ ಠಾಣೆಯಲ್ಲಿ ರೈಟರ್​ ಆಗಿ ಕೆಲಸ ನಿರ್ವಹಿಸ್ತಿದ್ದ ಕಾನ್‌ಸ್ಟೇಬಲ್​. ಸುಳ್ಳು FIR ಮಾಡಿಸಿ ತನಿಖಾಧಿಕಾರಿಗೆ ಗೊತ್ತಿಲ್ಲದಂತೆ ಚಾರ್ಜ್ ಶೀಟ್ ಮಾಡಿದ್ದರು. ಇದೇ ಆರೋಪದ ಹಿನ್ನಲೆ ಇದೀಗ ಯದುಕುಮಾರ್​ರನ್ನ​ ಸಸ್ಪೆಂಡ್​ ಮಾಡಲಾಗಿದೆ.

ಅಸಲಿಗೆ ಈ ಕೇಸ್‌ನಲ್ಲಿ ಆಗಿದ್ದೇನು?
ತನ್ನ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದಾನೆ ಅಂತ ಈ ಹಿಂದೆ ಯುವತಿ ದೂರು ನೀಡಿದ್ದಳು. ಈ ಕುರಿತು ಕೋಣನಕುಂಟೆ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆ ಪ್ರಕರಣದಲ್ಲಿ ಆರೋಪಿ ಜೈಲು ಸೇರಿದ್ದ. ಜೈಲಿನಿಂದ ಬೇಲ್ ಮೇಲೆ ಹೊರ ಬಂದ ಬಳಿಕ ಆರೋಪಿ, ಕಾನ್ಸ್‌ಟೇಬಲ್ ಯದುಕುಮಾರ್ ಅನ್ನು ಭೇಟಿಯಾಗಿದ್ದ. ಅಷ್ಟೇ ಅಲ್ಲ, ಯಾವ ಯುವತಿ ಕೋಣನಕುಂಟೆಯಲ್ಲಿ ದೂರು ನೀಡಿದ್ದಳೋ ಆಕೆಯ ವಿರುದ್ಧವೇ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದ. ಆದ್ರೆ, ಈ ಕೇಸ್‌ನಲ್ಲಿ ಆ ಯುವತಿಯ ವಿಚಾರಣೆ ಕೂಡ ಆಗಿಲ್ಲ.‌

ಇದನ್ನೂ ಓದಿ: ಪೊಲೀಸರ ಮುಂದೆ ಎಳೆ ಎಳೆಯಾಗಿ ವಿಷಯ ಬಿಚ್ಚಿಡುತ್ತಿರುವ ಸೋನು ಶ್ರೀನಿವಾಸ್ ಗೌಡ..!

ಎಫ್ಐಆರ್ ಆದ 35 ದಿನದಲ್ಲೇ ಚಾರ್ಜ್ ಶೀಟ್ ಫೈಲ್ ಮಾಡಲಾಗಿತ್ತು. ಇದೇ ಯದುಕುಮಾರ್ ತನಿಖಾಧಿಕಾರಿ ಗಮನಕ್ಕೆ ತರದೆ, ಸರ್ಕಾರಿ ವಕೀಲರ ಗಮನಕ್ಕೆ ತಂದು ಚಾರ್ಜ್ ಶೀಟ್​ನ ಪೊಲೀಸ್ ಐಟಿಯಲ್ಲಿ ಅಪ್ಲೋಡ್ ಮಾಡಿದ್ದ. ಬಳಿಕ ಕೋರ್ಟ್‌ನಿಂದ ಯುವತಿಗೆ ನೋಟೀಸ್ ಜಾರಿಯಾಗಿತ್ತು.‌ ನೋಟೀಸ್ ಬಂದ ಮೇಲೆ ಯುವತಿ ಕೆಂಗೇರಿ ಗೇಟ್ ಉಪ ವಿಭಾಗ ಎಸಿಪಿ ಭರತ್ ರೆಡ್ಡಿ ಗಮನಕ್ಕೆ ವಿಚಾರ ತಂದಿದ್ದಾಳೆ. ವಿಚಾರ ತಿಳಿದು ಕೂಲಂಕುಷವಾಗಿ ತನಿಖೆ ನಡೆಸಿದಾಗ ಯದುಕುಮಾರ್ ಬಂಡವಾಳ ಬಟಾ ಬಯಲಾಗಿದೆ.

ಸದ್ಯ ಈ ವರದಿ ಆಧಾರದ ಮೇಲೆ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್, ಪೇದೆ ಯದುಕುಮಾರ್​ನನ್ನ ಸಸ್ಪೆಂಡ್​​ ಮಾಡಿ ಆದೇಶ ಹೊರಡಿಸಿದ್ದಾರೆ. ತಪ್ಪಿಗೆ ತಕ್ಕ ಶಿಕ್ಷೆ ಸಿಕ್ಕಿದೆ. ಅದೇನೇ ಹೇಳಿ ಕಾನೂನಿನ ಚೌಕಟ್ಟನ್ನ ಮೀರದಂತೆ ಕಾಯಬೇಕಾದವ್ರೆ ಹೀಗೆ ಅಡ್ಡ ದಾರಿ ಹಿಡಿದಿದ್ದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಪ್ಲೇಂಟ್ ​ಕೊಟ್ಟ ಯುವತಿ ಮೇಲೆ ಸುಳ್ಳು ಚಾರ್ಜ್​ಶೀಟ್​.. ಕಾನ್ಸ್‌ಟೇಬಲ್​ ಕಳ್ಳಾಟಕ್ಕೆ ಬೆಚ್ಚಿ ಬಿದ್ದ ಪೊಲೀಸ್‌!

https://newsfirstlive.com/wp-content/uploads/2024/03/Police-Constable.jpg

Load More