newsfirstkannada.com

ಪೊಲೀಸರ ಮುಂದೆ ಎಳೆ ಎಳೆಯಾಗಿ ವಿಷಯ ಬಿಚ್ಚಿಡುತ್ತಿರುವ ಸೋನು ಶ್ರೀನಿವಾಸ್ ಗೌಡ..!

Share :

Published March 23, 2024 at 9:11am

Update March 23, 2024 at 9:43am

    ಮಗು ದತ್ತು ಪಡೆದ ಪ್ರಕರಣದಲ್ಲಿ ಸೋನು ಗೌಡ ಅರೆಸ್ಟ್

    ನಿಯಮ ಉಲ್ಲಂಘಿಸಿ ಮಗು ದತ್ತು ಪಡೆದ ಆರೋಪ

    ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರುವ ಸೋನುಗೌಡ

ಕಾನೂನು ಬಾಹೀರವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಬಿಗ್​ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನಕ್ಕೆ ಒಳಗಾಗಿದ್ದಾರೆ. ನಿನ್ನೆ ಬಂಧಿಸಿದ್ದ ಬೆಂಗಳೂರು ಬ್ಯಾಡರಳ್ಳಿ ಪೊಲೀಸರು, ಕೋರ್ಟ್​ಗೆ ಹಾಜರುಪಡಿಸಿದ್ದರು. ಸೋನು ಗೌಡ ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ.

ಇನ್ನು ತೀವ್ರ ವಿಚಾರಣೆಗೆ ಒಳಗಾಗಿರುವ ಸೋನು ಗೌಡ ಪೊಲೀಸರ ಮುಂದೆ ಮಗು ದತ್ತು ಪಡೆದ ವಿಚಾರದ ಬಗ್ಗೆ ಎಳೆಎಳೆಯಾಗಿ ಬಾಯಿಬಿಡುತ್ತಿದ್ದಾರೆ. ಮಗುವನ್ನ ದತ್ತು ಪಡೆದು 41 ದಿನಗಳಾಗಿದೆ. ಮಗುವಿನ ಕುಟುಂಬ ನಾನು ವಾಸವಿದ್ದ ಅಪಾರ್ಟ್​​​ಮೆಂಟ್ ಪಕ್ಕದಲ್ಲೇ ಕೂಲಿ ಕೆಲಸ ಮಾಡುತ್ತಿತ್ತು. ಮಗುವಿನ ಕುಟುಂಬದಲ್ಲಿ ಒಟ್ಟು ನಾಲ್ವರು ಮಕ್ಕಳಿದ್ದಾರೆ.

ಇದನ್ನೂ ಓದಿ: ಮಾಸ್ಕೋದಲ್ಲಿ ನರಮೇಧ; ಭೂತಾನ್​ನಿಂದಲೇ ರಷ್ಯಾದ ಮೇಲಿನ ದಾಳಿ ಖಂಡಿಸಿದ ಪ್ರಧಾನಿ ಮೋದಿ

ಮೊದಲನೆಯದು ಗಂಡು, ಮೂವರು ಹೆಣ್ಮಕ್ಕಳು. ಅವರಲ್ಲಿ ಎರಡನೇ ಮಗುವನ್ನ ದತ್ತು ಪಡೆದಿದ್ದೇನೆ. ನನಗೆ ಒಂದು ವರ್ಷದ ಹಿಂದೆಯೇ ಮಗು ಪರಿಚಯ ಆಗಿತ್ತು. ಮನೆ ಪಕ್ಕದಲ್ಲಿ ಮಗುವಿನ ಪೋಷಕರು ಕೂಲಿ ಕಾರ್ಮಿಕರಾಗಿ ಬಂದಿದ್ದರು. ಈ ವೇಳೆ ಮಗು ನನ್ನ ಬಳಿ ತಿನ್ನಲು ತಿಂಡಿ ಕೇಳುತ್ತಿತ್ತು.

ದಿನನಿತ್ಯ ಮಗುವಿಗೆ ಏನಾದರೂ ತಿಂಡಿ ಕೊಡುತ್ತಿದ್ದರಿಂದ ಸಲುಗೆ ಬೆಳೆದಿತ್ತು. ಮಗುವಿಗೆ ಏನಾದರೂ ಸಹಾಯ ಮಾಡಬೇಕು ಅನ್ನಿಸಿತ್ತು. ಕೆಲ ತಿಂಗಳುಗಳ ಹಿಂದೆ ದಂಪತಿ ಮತ್ತು ಮಕ್ಕಳನ್ನ ಕರೆದುಕೊಂಡು ಹುಟ್ಟೂರಿಗೆ ತೆರಳಿದ್ದರು. ಆಗ ನಾನು ಒಂಟಿಯಾಗಿ ಇರೋದ್ರಿಂದ ಮಗುವನ್ನ ಕರೆ ತರೋಣ ಎಂದು ಫೋನ್ ಮೂಲಕ ಸಂಪರ್ಕ ಮಾಡಿದ್ದೆ. ನಂತರ ಮಗುವನ್ನು ಯಾವುದೇ ದಾಖಲೆ ಇಲ್ಲದೆ ಕರೆ ತಂದಿದ್ದೇನೆ ಎಂದು ಮಾಹಿತಿ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಲೀಸರ ಮುಂದೆ ಎಳೆ ಎಳೆಯಾಗಿ ವಿಷಯ ಬಿಚ್ಚಿಡುತ್ತಿರುವ ಸೋನು ಶ್ರೀನಿವಾಸ್ ಗೌಡ..!

https://newsfirstlive.com/wp-content/uploads/2024/03/SONU-GOWDA-6.jpg

Load More