ಶಾಸಕ ಮುನಿರತ್ನ ಬಂಧನ ಕೇಸ್‌ಗೆ ಹೊಸ ಟ್ವಿಸ್ಟ್.. ದೂರು ಕೊಟ್ಟ ಗುತ್ತಿಗೆದಾರ ಚೆಲುವರಾಜು ಏನಂದ್ರು?

author-image
Gopal Kulkarni
Updated On
KGF ಕಥೆಯನ್ನೇ ಮೀರಿಸುತ್ತೆ ಶಾಸಕ ಮುನಿರತ್ನ ಬದುಕು; ಬೀದಿಯಲ್ಲಿ ಇಡ್ಲಿ ಮಾರುತ್ತಿದ್ದ ಇವ್ರು ಬೆಳೆದಿದ್ದೇ ರೋಚಕ!
Advertisment
  • ಜೀವ ಬೆದರಿಕೆ, ಜಾತಿನಿಂದನೆ ಕೇಸ್​ನಲ್ಲಿ ಮಾಜಿ ಸಚಿವ ಮುನಿರತ್ನ ಬಂಧನ
  • ಗುತ್ತಿಗೆದಾರ ಚೆಲುವರಾಜು ಅವರಿಗೆ ಜೀವ ಬೆದರಿಕೆ ಹಾಕಿದ್ದ ಮಾಜಿ ಸಚಿವ
  • ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಚೆಲುವರಾಜು ಮಾಡಿದ ಆರೋಪಗಳೇನು?

ಬೆಂಗಳೂರು: ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರ ಬಂಧನ ಆಗಿದೆ. ಆಂಧ್ರದ ಚಿತ್ತೂರಿಗೆ ಹೊರಟಿದ್ದ ಮಾಜಿ ಸಚಿವ ಮುನಿರತ್ನರನ್ನ ಮುಳಬಾಗಿಲು ತಾಲೂಕಿನ ಹೊರವಲಯದ ನಂಗಲಿ ಬಳಿ ಬಂಧನ ಮಾಡಲಾಗಿದೆ. ಚೆಲುವರಾಜು ಎಂಬ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಸದ್ಯ ಮುನಿರತ್ನ ಅವರ ಮೇಲಿದೆ.

publive-image

ಇದನ್ನೂ ಓದಿ:FIR ದಾಖಲು ಆಗುತ್ತಿದ್ದಂತೆ ಆಂಧ್ರಕ್ಕೆ ತೆರಳುತ್ತಿದ್ದ ಮುನಿರತ್ನ.. ಶಾಸಕ ಅರೆಸ್ಟ್ ಆಗಿದ್ದು ಎಲ್ಲಿ?

ಈ ಬಗ್ಗೆ ನ್ಯೂಸ್ ​ಫಸ್ಟ್​ನೊಂದಿಗೆ ಮಾತನಾಡಿದ ದೂರುದಾರ ಚೆಲುವರಾಜು, ನಾನೊಬ್ಬ ಸಣ್ಣ ಗುತ್ತಿಗೆದಾರ, ನನಗೆ ಮೋಸವಾಗಿದೆ. ನನ್ನ ದೂರಿನ ಹಿಂದೆ ಯಾವುದೇ ರಾಜಕೀಯ ಶಕ್ತಿಗಳು ಅಡಗಿಕೊಂಡಿಲ್ಲ. ಅಸಲಿಗೆ ನನಗೆ ರಾಜಕೀಯದಲ್ಲಿ ಯಾರೂ ಅಷ್ಟೊಂದು ಪರಿಚಯವೂ ಇಲ್ಲ ಎಂದು ಹೇಳಿದ್ದಾರೆ. ಇನ್ನು ಮುನಿರತ್ನ ಅವರ ಕಾಟದಿಂದ ಎಷ್ಟು ಜನ ಊರು ಖಾಲಿ ಮಾಡಿದ್ದಾರೆ. ಎಷ್ಟು ಜನ ಮನೆ ಬಿಟ್ಟಿದ್ದಾರೆ ಎಂದು ಅವರನ್ನೇ ಕೇಳಿ. ದುಡ್ಡು ಹೊಡೆಯೋದು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ ಎಂದು ಚೆಲುವರಾಜು ಹೇಳಿದ್ದಾರೆ.

publive-image

ಇದನ್ನೂ ಓದಿ:BREAKING: ಬಿಜೆಪಿ ಶಾಸಕ ಮುನಿರತ್ನ ಬಂಧನ; ಕಾರಣವೇನು?

ಮುನಿರತ್ನ ಅವರು ನನಗೆ ಮೂರರಿಂದ ನಾಲ್ಕು ವರ್ಷದಿಂದ ಪರಿಚಯ. ನನಗೆ 20 ಲಕ್ಷ ರೂಪಾಯಿ ಮೋಸವಾದಾಗ ನಾನು ಅವರ ವಿರುದ್ಧ ಸಿಡಿದು ನಿಂತಿದ್ದು. ನಾನು ಯಾವುದೇ ರಾಜಕೀಯ ಪ್ರೇರಣೆಯಿಂದಾಗಿ ದೂರು ಕೊಟ್ಟಿಲ್ಲ. ಅವರು ಅನೇಕ ಬಾರಿ ಕೆಟ್ಟದಾಗಿ ಮಾತನಾಡುವುದು, ಬೆದರಿಕೆ ಹಾಕುವುದನ್ನು ಮಾಡಿದ್ದಾರೆ. ಅವರ ಬಂಧನವಾಗಿದ್ದನ್ನು ಮಾಧ್ಯಗಳಲ್ಲಿ ನೋಡಿ ಖುಷಿಯಾಯ್ತು. ನನ್ನ ಪರವಾಗಿ ಜನರು ನಿಂತಿದ್ದಾರೆ ಎಂಬ ಸಂತೋಷವಾಯ್ತು ಎಂದು ನ್ಯೂಸ್​ ಫಸ್ಟ್​​ಗೆ ಚೆಲುವರಾಜು ಹೇಳಿದ್ದಾರೆ.

ಇನ್ನು ಮುನಿರತ್ನ ಅವರ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ದೂರುದಾರ ಚೆಲುವರಾಜು, ನಾನು ಸಜ್ಜಾಗಿದ್ದಕ್ಕೆ ದೂರು ಕೊಟ್ಟಿರೋದು, ಇಲ್ಲವಾದಲ್ಲಿ ನಾನ್ಯಾಕೆ ದೂರು ಕೊಡಲು ಹೋಗುತ್ತಿದ್ದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment