/newsfirstlive-kannada/media/post_attachments/wp-content/uploads/2024/08/cooker.jpg)
ಬೆಳಗಾವಿ: ಕುಕ್ಕರ್ ಬ್ಲಾಸ್ಟ್ ಆಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿರೋ ಘಟನೆ ಸವದತ್ತಿಯ ಹೋಟೆಲ್ ರೂಮ್ನಲ್ಲಿ ನಡೆದಿದೆ.
ಕುಟುಂಬ ಸಮೇತರಾಗಿ ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಬಂದಿದ್ದರು. ಅವರಲ್ಲಿ ಬೆಂಗಳೂರಿನಿಂದ 5 ಜನ, ಯಾದಗಿರಿ ಜಿಲ್ಲೆಯಿಂದ 3 ಭಕ್ತರು ಬಂದಿದ್ದರು. ಹೀಗಾಗಿ ಹೋಳಿಗೆ ಮಾಡಲು ಕುಕ್ಕರ್ನಲ್ಲಿ ಬೇಳೆ ಬೇಯಿಸಲು ಗ್ಯಾಸ್ ಹೊತ್ತಿಸಿದ್ದರು. ಈ ವೇಳೆ ಕುಕ್ಕರ್ ಎರಡು ಸೀಟಿ ಹೊಡೆದ ಬಳಿಕ ಸ್ಫೋಟಗೊಂಡಿದೆ. ಆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ:ನೈಟ್ ಡ್ಯೂಟಿ ವೈದ್ಯೆಗೆ ರೇಪ್ ಆದ್ರೆ ಇನ್ನೆಲ್ಲಿ ರಕ್ಷಣೆ; ಸಿಡಿದೆದ್ದ ಆಶಿಕಾ ರಂಗನಾಥ್; ಹೇಳಿದ್ದೇನು?
ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ