newsfirstkannada.com

ಲೋಕಸಭೆ ಜೊತೆಗೆ 4 ರಾಜ್ಯಕ್ಕೆ ಇಂದೇ ಚುನಾವಣಾ ದಿನಾಂಕ ಘೋಷಣೆ; ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ

Share :

Published March 16, 2024 at 1:01pm

Update March 16, 2024 at 1:03pm

    ಏಪ್ರಿಲ್ ಹಾಗೂ ಮೇನಲ್ಲಿ ದೇಶಾದ್ಯಂತ ಲೋಕಸಭಾ ಚುನಾವಣೆಯ ಹಬ್ಬ

    ಈ ಬಾರಿ 97 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹ

    ಜೂನ್ 16ರ ಒಳಗೆ ಲೋಕಸಭಾ ಚುನಾವಣೆ ನಡೆದು ಹೊಸ ಸರ್ಕಾರ ರಚನೆ

ನವದೆಹಲಿ: 2024ರ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಕೇಂದ್ರ ಚುನಾವಣಾ ಆಯೋಗ ಮಧ್ಯಾಹ್ನ 3 ಗಂಟೆಗೆ ಮಹತ್ವದ ಸುದ್ದಿಗೋಷ್ಟಿ ನಡೆಸಲಿದ್ದು, ಬಹು ನಿರೀಕ್ಷಿತ ಎಲೆಕ್ಷನ್ ಡೇಟ್ ಅನೌನ್ಸ್ ಆಗಲಿದೆ. ದೆಹಲಿ ವಿಜ್ಞಾನ ಭವನದಲ್ಲಿ ನಡೆಯುವ ಸುದ್ದಿಗೋಷ್ಟಿ ಮೇಲೆ ಇಡೀ ದೇಶದ ಗಮನ ಕೇಂದ್ರೀಕೃತವಾಗಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಯಲಿದ್ದು, ನೇರಪ್ರಸಾರದಲ್ಲಿ 17ನೇ ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲಾಗುತ್ತಿದೆ. 16ನೇ ಲೋಕಸಭೆಯ ಅವಧಿ ಜೂನ್ 16ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಏಪ್ರಿಲ್ ಹಾಗೂ ಮೇನಲ್ಲಿ ದೇಶಾದ್ಯಂತ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಆಗಲಿದೆ.

ಇದನ್ನೂ ಓದಿ: ನಾಳೆಯಿಂದಲೇ ಚುನಾವಣಾ ನೀತಿ ಸಂಹಿತೆ; ದೇಶಾದ್ಯಂತ ಜಾರಿಯಾಗೋ ಕಠಿಣ ಕಾನೂನು ಏನು?

2024ರ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ 97 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. 12 ಲಕ್ಷ ಮತಗಟ್ಟೆಯಲ್ಲಿ ಈ ಬಾರಿ ಪ್ರಜಾಪ್ರಭುತ್ವ ಹಬ್ಬ ಎಂದೇ ಬಿಂಬಿಸಲಾಗಿರುವ ಮತದಾನ ನಡೆಯುತ್ತಿದೆ.

4 ವಿಧಾನಸಭಾ ಚುನಾವಣೆ ಪ್ರಕಟ
ಲೋಕಸಭಾ ಚುನಾವಣೆಯ ದಿನಾಂಕದ ಜೊತೆಗೆ 4 ರಾಜ್ಯದ ವಿಧಾನಸಭಾ ಚುನಾವಣೆಯೂ ಇಂದೇ ಪ್ರಕಟವಾಗಲಿದೆ. ಮೂಲಗಳ ಪ್ರಕಾರ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಲಿದೆ. ಇದಾದ ಬಳಿಕ 2024ರಲ್ಲೇ ಜಮ್ಮು ಕಾಶ್ಮೀರ, ಲಡಾಖ್, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್‌ಗೂ ಚುನಾವಣೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಜೊತೆಗೆ 4 ರಾಜ್ಯಕ್ಕೆ ಇಂದೇ ಚುನಾವಣಾ ದಿನಾಂಕ ಘೋಷಣೆ; ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ

https://newsfirstlive.com/wp-content/uploads/2023/10/ELECTION.jpg

Load More