newsfirstkannada.com

ಮೋದಿ ಗ್ಯಾರಂಟಿನಾ? I.N.D.I.A ಮ್ಯಾಜಿಕ್ ಮಾಡುತ್ತಾ? ಇಡೀ ವಿಶ್ವವೇ ಕಾಯುತ್ತಿರೋ ರಿಸಲ್ಟ್‌ಗೆ ಕೌಂಟ್​ಡೌನ್

Share :

Published June 4, 2024 at 6:53am

  ಕೆಲವೇ ಕ್ಷಣದಲ್ಲಿ 543 ಲೋಕಸಭಾ ಕ್ಷೇತ್ರಗಳ ಮತಎಣಿಕೆ ಆರಂಭ

  ಪ್ರಜಾಪ್ರಭುತ್ವದ ಅತಿದೊಡ್ಡ ಮತಯುದ್ಧಕ್ಕೆ ಇಂದು ಮೆಗಾ ಉತ್ತರ

  ಅಬ್ ಕಿ ಬಾರ್ 400 ಪಾರ್ ಅಂದಿದ್ದ ಎನ್​ಡಿಎ ಭವಿಷ್ಯ ನಿಜವಾಗುತ್ತಾ?

ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಇಡೀ ವಿಶ್ವದ ಕುತೂಹಲ, ಪ್ರಜಾಪ್ರಭುತ್ವದ ಅತಿದೊಡ್ಡ ಮತಯುದ್ಧಕ್ಕೆ ಇನ್ನು ಕೆಲವೇ ಗಂಟೆಯಲ್ಲಿ ಉತ್ತರ ಸಿಗಲಿದೆ. ದೇಶಾದ್ಯಂತ ಲೋಕಸಭಾ ಚುನಾವಣೆಯ ಮತಎಣಿಕೆಗೆ ಕೊನೇ ಹಂತದ ತಯಾರಿಗಳು ನಡೆಯುತ್ತಿದೆ.

ದೇಶಾದ್ಯಂತ ಮತಎಣಿಕೆಗೆ ಚುನಾವಣಾ ಆಯೋಗ ಸಜ್ಜಾಗಿದ್ದು, ಇವತ್ತು ಸಂಜೆಯೊಳಗೆ 543 ಲೋಕಸಭಾ ಕ್ಷೇತ್ರಗಳ ಭವಿಷ್ಯ ಹೊರ ಬೀಳಲಿದೆ. ಈ ಬಾರಿ ಒಟ್ಟು 7 ಹಂತಗಳಲ್ಲಿ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆದಿತ್ತು.

ಈಗಾಗಲೇ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎಗೆ ಭರ್ಜರಿ ಬಹುಮತ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಎಕ್ಸಿಟ್ ಪೋಲ್ ವರದಿಯೇ ಚುನಾವಣಾ ಫಲಿತಾಂಶದಲ್ಲೂ ಪ್ರತಿಫಲಿಸುತ್ತಾ ಅನ್ನೋದು ಕುತೂಹಲದ ಕೇಂದ್ರ ಬಿಂದುವಾಗಿದೆ.

ಅಬ್ ಕಿ ಬಾರ್ 400 ಪಾರ್ ಅಂದಿದ್ದ ಎನ್​ಡಿಎ ಭವಿಷ್ಯ ನಿಜವಾಗುತ್ತಾ? ಮೂರನೇ ಬಾರಿ ಹ್ಯಾಟ್ರಿಕ್ ಸಾಧಿಸಿ ಸರ್ಕಾರ ರಚಿಸ್ತಾರಾ ಮೋದಿ? ಮತ್ತೊಮ್ಮೆ ನಮೋ ಆಡಳಿತಕ್ಕೆ ಜೈ ಹೋ ಅಂತಾರಾ ಮತದಾರರು ಅನ್ನೋದಕ್ಕೆ ಕೆಲವೇ ಗಂಟೆಯಲ್ಲಿ ಉತ್ತರ ಸಿಗಲಿದೆ.

ಮೋದಿ ಗ್ಯಾರಂಟಿನಾ? ಕಾಂಗ್ರೆಸ್ ಗ್ಯಾರಂಟಿನಾ?
ಈ ಲೋಕಸಭಾ ಚುನಾವಣೆಯನ್ನು ಗ್ಯಾರಂಟಿಗಳ ಮೂಲಕವೇ ಕಾಂಗ್ರೆಸ್ ಪಕ್ಷ ಮತಯಾಚನೆ ಮಾಡಿತ್ತು. ಪ್ರಮಖವಾಗಿ ಇಂಡಿಯಾ ಒಕ್ಕೂಟ ಗೆದ್ದರೆ ಖಾತೆಗೆ ₹8500 ಹಣ ಟಕಾ ಟಕ್ ಅಂತ ಜಮೆ ಆಗುತ್ತೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಟಕಾ ಟಕ್ ಹಣ ಜಮೆಯಾಗುವ ಜೊತೆಗೆ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ವಿಶ್ವದಲ್ಲೇ ಇದೇ ಮೊದಲು.. ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಭಾರತ; ಓದಲೇಬೇಕಾದ ಸ್ಟೋರಿ! 

ಕಾಂಗ್ರೆಸ್​ ಗ್ಯಾರಂಟಿಗೆ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೌಂಟರ್ ಕೊಟ್ಟಿದ್ದರು. ನಾನೇ ಗ್ಯಾರಂಟಿ ಅಂತಾ ಪ್ರಧಾನಿ ನರೇಂದ್ರ ಮೋದಿ ಅವರು ಮತಯಾಚನೆ ಮಾಡಿದ್ದರು. ಈ ಎಲ್ಲಾ ರಣತಂತ್ರಗಳಿಗೆ ಮತದಾರನ ಉತ್ತರ ಇನ್ನು ಕೆಲವೇ ಗಂಟೆಯಲ್ಲಿ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಗ್ಯಾರಂಟಿನಾ? I.N.D.I.A ಮ್ಯಾಜಿಕ್ ಮಾಡುತ್ತಾ? ಇಡೀ ವಿಶ್ವವೇ ಕಾಯುತ್ತಿರೋ ರಿಸಲ್ಟ್‌ಗೆ ಕೌಂಟ್​ಡೌನ್

https://newsfirstlive.com/wp-content/uploads/2024/03/Modi-rahul.jpg

Load More