₹20 ಲಂಚ.. ನಿವೃತ್ತ ಕಾನ್​ಸ್ಟೇಬಲ್ ಬಂಧನಕ್ಕೆ ಸೂಚನೆ; 34 ವರ್ಷದ ನಂತ್ರ ಕೇಸ್‌ ಬೆಳಕಿಗೆ ಬಂದಿದ್ದೇ ರೋಚಕ!

author-image
Bheemappa
Updated On
₹20 ಲಂಚ.. ನಿವೃತ್ತ ಕಾನ್​ಸ್ಟೇಬಲ್ ಬಂಧನಕ್ಕೆ ಸೂಚನೆ; 34 ವರ್ಷದ ನಂತ್ರ ಕೇಸ್‌ ಬೆಳಕಿಗೆ ಬಂದಿದ್ದೇ ರೋಚಕ!
Advertisment
  • ಕೋರ್ಟ್​ ಅನ್ನೇ ಹೇಗೆ ಯಾಮರಿಸಿದ್ದ ಕಿಲಾಡಿ ಕಾನ್​ಸ್ಟೆಬಲ್?
  • ನಿವೃತ್ತಿ ಹೊಂದಿರುವ ಕಾನ್​ಸ್ಟೇಬಲ್​ ಅನ್ನು DGP ಬಂಧಿಸಬೇಕಿದೆ
  • 34 ವರ್ಷಗಳ ನಂತರವೂ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?

ಪಾಟ್ನಾ: ಕ್ರಿಮಿನಲ್ ಎಷ್ಟೇ ಬುದ್ಧಿವಂತನಾಗಿದ್ದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಘಟನೆ ಉದಾಹರಣೆ ಆಗಿದೆ. 34 ವರ್ಷಗಳ ಹಿಂದೆ ತರಕಾರಿ ಮಾರುವ ಮಹಿಳೆಯಿಂದ 20 ರೂಪಾಯಿ ಲಂಚ ಪಡೆದಿದ್ದ ಕಾನ್​ಸ್ಟೇಬಲ್​ನನ್ನ ಅರೆಸ್ಟ್ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಕೋರ್ಟ್​ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಗಣಪತಿಗೆ 20 ಕೆ.ಜಿ ಬಂಗಾರದ ಕಿರೀಟ ದಾನ.. ಅನಂತ್ ಅಂಬಾನಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂಪಾಯಿ? 

ಸುರೇಶ್ ಪ್ರಸಾದ್ ಸಿಂಗ್ ಎನ್ನುವರು ಬರಹಿಯಾ ನಗರದ ಠಾಣೆಯಲ್ಲಿ ಕಾನ್​ಸ್ಟೇಬಲ್​​ ಆಗಿದ್ದರು. 1990, ಮೇ 6 ರಂದು ಕಾನ್​ಸ್ಟೇಬಲ್​ ಸಹರ್ಸಾ ರೈಲು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಮಹೇಶಖುಂಟ್ ಪ್ರದೇಶದ ಮಹಿಳೆ ಸೀತಾದೇವಿ ಎನ್ನುವ ತರಕಾರಿ ಮಾರಾಟ ಮಾಡುವ ಮಹಿಳೆ ರೈಲು ನಿಲ್ದಾಣಕ್ಕೆ ತರಕಾರಿ ತೆಗೆದುಕೊಂಡು ಬರುತ್ತಿದ್ದರು. ಆಗ ಕಾನ್​ಸ್ಟೇಬಲ್​ ಮಹಿಳೆಯ ಬಳಿ 20 ರೂಪಾಯಿಗಳ ಲಂಚ ಪಡೆಯುತ್ತಾನೆ. ಆಗ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅಂದಿನ ರೈಲ್ವೆ ಸ್ಟೇಷನ್ ಇನ್ ಚಾರ್ಜ್ ಕಾನ್​ಸ್ಟೇಬಲ್​ರನ್ನ ರೆಡ್ ಹ್ಯಾಂಡ್ ಆಗಿ ಹಿಡಿದು ಲಂಚಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡುತ್ತಾರೆ.

publive-image

ಕೋರ್ಟ್​ಗೆ ಕೇಸ್ ಹೋದ ಮೇಲೆ ಕಾನ್​ಸ್ಟೇಬಲ್ ಲಖಿಸರಾಯ್ ಜಿಲ್ಲೆಯ ಬರ್ಹಿಯಾದ ಬಿಜೋಯ್ ಗ್ರಾಮದಲ್ಲಿ ವಾಸಿಸುತ್ತಿದ್ರೂ ಸಹರ್ಸಾದಲ್ಲಿ ಮಹೇಶ್‌ಖುಂಟ್​ನಲ್ಲಿ ಇದ್ದೇನೆ ಎಂದು ತರಕಾರಿ ಮಾರುವ ಮಹಿಳೆ ಊರಿನ ಸುಳ್ಳು ವಿಳಾಸ ನೀಡಿರುತ್ತಾನೆ. ಹೀಗಾಗಿ ಕೋರ್ಟ್​​ಗೆ ಹಾಜರಾಗುತ್ತಿರಲಿಲ್ಲ. ವಿಚಾರಣೆ ಹಾಗೇ ಮುಂದುವರೆದಿದ್ದರಿಂದ 1999ರಲ್ಲಿ ಅವರ ಜಾಮೀನು ಅನ್ನು ಕೋರ್ಟ್​ ರದ್ದು ಮಾಡಿ ಬಂಧನ ವಾರೆಂಟ್ ಹೊರಡಿಸಿತ್ತು. ಆವಾಗಿನಿಂದ ಕಾನ್​ಸ್ಟೇಬಲ್ ತಲೆಮರೆಸಿಕೊಂಡಿದ್ದರು. ಅವರು ಈ ಹಿಂದೆ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.

ಇದನ್ನೂ ಓದಿ:ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಎಷ್ಟು ತಿಂಗಳಾಯಿತು.. ಶತಕ ಸಿಡಿಸುವಲ್ಲಿ ವಿರಾಟ್ ಫೇಲ್​; ಯಾಕೆ?

ಇದೀಗ ಸಹರ್ಸಾದಲ್ಲಿರುವ ವಿಶೇಷ ವಿಜಿಲೆನ್ಸ್ ನ್ಯಾಯಾಧೀಶ ಸುದೇಶ್ ಶ್ರೀವಾಸ್ತವ ಅವರ ಹೊಸ ನಿರ್ದೇಶನ ಜಾರಿಗೊಂಡಿದೆ. ನಿರ್ದೇಶನದಂತೆ ನಿವೃತ್ತ ಕಾನ್​ಸ್ಟೇಬಲ್​ನನ್ನ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕೆಂದು ಬಿಹಾರ ಪೊಲೀಸ್ ಡಿಜಿಪಿಗೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರ, ದುರ್ನಡತೆ ಬಗೆಹರಿಯದ ಬಾಕಿ ಉಳಿದ ಕೇಸ್​ಗಳನ್ನು ವಿಚಾರಣೆ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment