ಈ ಸವಾಲುಗಳ ಚಕ್ರವ್ಯೂಹ ಬೇಧಿಸಿ ಕೊಹ್ಲಿ ಗೆದ್ದು ಬೀಗ್ತಾರಾ?
ಸೆಂಚುರಿ ಜತೆ ಬಿಗ್ ಇನ್ನಿಂಗ್ಸ್ ಕಟ್ಟುವ ಒತ್ತಡ ಕೊಹ್ಲಿ ಮೇಲೆ
ತಂಡದಲ್ಲಿ ಪೈಪೋಟಿ ಹೆಚ್ಚು, ವಿರಾಟ್ ರನ್ ಗಳಿಸಲೇಬೇಕು
ಪ್ರತಿ ಸರಣಿಗೂ ಮುನ್ನ ಕಿಂಗ್ ಕೊಹ್ಲಿ ಎದುರಾಳಿ ತಂಡಕ್ಕೆ ದೊಡ್ಡ ಸವಾಲು ಆಗಿರುತ್ತಿದ್ದರು. ಆದ್ರೀಗ ಮುಂಬರುವ ಬಾಂಗ್ಲಾ ಟೆಸ್ಟ್ ಸರಣಿ ರನ್ ಮಷಿನ್ ಬಿಗ್ಗೆಸ್ಟ್ ಚಾಲೆಂಜ್ ಆಗಿದೆ. ಕ್ರಿಕೆಟ್ ದಂತಕಥೆ ಹಲವು ಸವಾಲುಗಳ ಸುಳಿಯಲ್ಲಿ ಸಿಲುಕಿದ್ದಾರೆ. ಒಂದೊಂದು ಚಾಲೆಂಜ್ ಡಿಫರೆಂಟ್. ಅಷ್ಟಕ್ಕೂ ಕಿಂಗ್ ಕೊಹ್ಲಿ ಮುಂದಿರೋ ಚಾಲೆಂಜ್ಗಳೇನು?.
ಅಭ್ಯಾಸದ ಅಖಾಡಕ್ಕೆ ಧುಮುಕಿದ ಕಿಂಗ್ ಕೊಹ್ಲಿ..!
ಟೀಮ್ ಇಂಡಿಯಾ ಟೆಸ್ಟ್ ಸೀಸನ್ಗೆ ಕೌಂಟ್ಡೌನ್ ಶುರುವಾಗಿದೆ. ಸೆಪ್ಟೆಂಬರ್ 19 ರಿಂದ ಇಂಡೋ-ಬಾಂಗ್ಲಾದೇಶ ನಡುವೆ ರೆಡ್ಬಾಲ್ ಫೈಟ್ ನಡೆಯಲಿದೆ. ಮೆಗಾ ಬ್ಯಾಟಲ್ ಸಮೀಪಿಸಿದ ಬೆನ್ನಲ್ಲೆ ಕಿಂಗ್ ಕೊಹ್ಲಿ ಲಂಡನ್ನಿಂದ ಭಾರತಕ್ಕೆ ವಾಪಾಸಾಗಿದ್ದಾರೆ. ಪ್ಯಾಡ್ ಕಟ್ಟಿ ನೆಟ್ಸ್ನಲ್ಲಿ ಭರ್ಜರಿ ಬೆವರು ಹರಿಸಿದ್ದಾರೆ. ಆ ಮೂಲಕ ಬಾಂಗ್ಲಾ ಬೇಟೆಗೆ ನಾನ್ ರೆಡಿ ಅನ್ನೋ ಮೆಸೇಜ್ ರವಾನಿಸಿದ್ದಾರೆ. ಆದ್ರೆ, ಬಾಂಗ್ಲಾ ಹುಲಿಗಳ ಬೇಟೆ ಅಷ್ಟು ಸುಲಭವಿಲ್ಲ. ಸವಾಲುಗಳ ಚಕ್ರವ್ಯೂಹವನ್ನ ಬೇಧಿಸುವ ಬಿಗ್ಗೆಸ್ಟ್ ಚಾಲೆಂಜ್ ಕಿಂಗ್ ಕೊಹ್ಲಿ ಮುಂದಿದೆ.
ಇದನ್ನೂ ಓದಿ: ರೋಹಿತ್ ಲೇಜಿಯಾಗಿ, ಕ್ಯಾಸುವೆಲ್ ಆಗಿ ಕಾಣುತ್ತಾರೆ.. ಆದ್ರೆ ಸತ್ಯವಾಗಲೂ..; ಅಂಪೈರ್ ಬಿಗ್ ಸ್ಟೇಟ್ಮೆಂಟ್!
ಚಾಲೆಂಜ್ ನಂ.1- ರೆಡ್ಬಾಲ್ಗೆ ಹೊಂದಿಕೊಳ್ಳೋದು!
ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡದೇ ಬರೋಬ್ಬರಿ 8 ತಿಂಗಳಾಗಿದೆ. ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆ ಬಾರಿ ಕಾಣಿಸಿಕೊಂಡಿದ್ರು ಆ ಬಳಿಕ ಕೇವಲ ಏಕದಿನ ಹಾಗೂ ಟಿ20 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿಗೆ ವೈಟ್ಬಾಲ್ನಿಂದ ರೆಡ್ಬಾಲ್ ಕ್ರಿಕೆಟ್ಗೆ ಹೊಂದಿಕೊಳ್ಳುವ ಸವಾಲು ಎದುರಾಗಿದೆ. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅಗ್ರೆಸ್ಸಿವ್ ಮೈಂಡ್ಸೆಟ್ನಿಂದ ಬ್ಯಾಟ್ ಬೀಸಿದ್ದ ಕೊಹ್ಲಿ ಟೆಸ್ಟ್ನಲ್ಲಿ ತಾಳ್ಮೆಯ ಮಂತ್ರ ಜಪಿಸುವ ಅಗತ್ಯವಿದೆ.
ಚಾಲೆಂಜ್ ನಂ.2- ಸ್ಪಿನ್ ವೀಕ್ನೆಸ್ ಮೆಟ್ಟಿನಿಲ್ಲುವುದು
ಇದು ಕಿಂಗ್ ಕೊಹ್ಲಿ ಮುಂದಿರೋ ಎರಡನೇ ಬಿಗ್ಗೆಸ್ಟ್ ಚಾಲೆಂಜ್. ಟೆಸ್ಟ್ ಕ್ರಿಕೆಟ್ನಲ್ಲಿ ಸ್ಪಿನ್ನರ್ಸ್ ವಿರುದ್ಧ ರನ್ ಗಳಿಸಲು ಪರದಾಡ್ತಿದ್ದಾರೆ. ವೇಗಿಗಳನ್ನ ಲೀಲಾಜಾಲವಾಗಿ ದಂಡಿಸುವ ಕೊಹ್ಲಿ ಸ್ಪಿನ್ನರ್ಸ್ ಎದುರು ಮಕಾಡೆ ಮಲಗ್ತಿದ್ದಾರೆ. 2023 ರಿಂದ ಇಲ್ಲಿ ತನಕ ಒಟ್ಟು 8 ಬಾರಿ ಸ್ಪಿನ್ನರ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ. ಬಾಂಗ್ಲಾ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್ಗಳ ದಂಡಿದ್ದು, ಹೇಗೆ ಎದುರಿಸ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಚಾಲೆಂಜ್ ನಂ.3- ಮೂರಂಕಿ ದಾಟದೇ 14 ತಿಂಗಳು!
ಕೊಹ್ಲಿಗೆ ಸೆಂಚುರಿ ಸಿಡಿಸೋದು ನೀರು ಕುಡಿದಷ್ಟೇ ಸುಲಭ ಅನ್ನೋ ಮಾತಿದೆ. ಆದ್ರೀಗ ಇದೇ ಸ್ಪೆಷಲಿಸ್ಟ್ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದೇ 14 ತಿಂಗಳಾಗಿದೆ. 2023ರ ಜುಲೈನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಕೊನೆ ಶತಕ ಸಿಡಿಸಿದ್ದಾರೆ. ಆ ಬಳಿಕ ಆಡಿದ ಸೌತ್ ಆಫ್ರಿಕಾ ಪ್ರವಾಸದಲ್ಲಿ ಆಡಿದ್ರೂ ಸೆಂಚುರಿ ಗಳಿಸಲು ಫೇಲಾಗಿದ್ರು. ಈಗ ಸೆಂಚುರಿ ಜೊತೆ ಬಿಗ್ ಇನ್ನಿಂಗ್ಸ್ ಕಟ್ಟುವ ಒತ್ತಡ ಕೊಹ್ಲಿ ಮೇಲಿದೆ.
ಚಾಲೆಂಜ್ ನಂ.4- ಕೊನೆ ಸರಣಿಯಲ್ಲಿ ಡಿಸೆಂಟ್ ಆಟ
ಕೊಹ್ಲಿ ಆಡಿದ ದಕ್ಷಿಣ ಆಫ್ರಿಕಾ ಎದುರಿನ ಕೊನೆ ಟೆಸ್ಟ್ ಸರಣಿಯಲ್ಲಿ ಫ್ಯಾನ್ಸ್ ಎಕ್ಸ್ಪೆಕ್ಟೇಶನ್ ರೀಚ್ ಮಾಡಿರಲಿಲ್ಲ. ಒನ್ಮ್ಯಾನ್ ಆರ್ಮಿಯಂತೆ ಹೋರಾಡಬೇಕಿದ್ದ ಕೊಹ್ಲಿ ಡೀಸೆಂಟ್ ಪರ್ಪಾಮೆನ್ಸ್ ನೀಡಿದ್ರು. ಆಡಿದ 4 ಇನ್ನಿಂಗ್ಸ್ಗಳಲ್ಲಿ 43.00ರ ಎವರೇಜ್ನಲ್ಲಿ 172 ರನ್ ಅಷ್ಟೇ ಬಾರಿಸಿದ್ರು. 76 ರನ್ ಇವರ ಬ್ಯಾಟ್ನಿಂದ ಮೂಡಿ ಬಂದ ಬೆಸ್ಟ್ ಸ್ಕೋರ್ ಆಗಿತ್ತು. ಇದೀಗ ತವರಿನಲ್ಲಾದ್ರು ಬಾಂಗ್ಲಾ ವಿರುದ್ಧ ಅಸಲಿ ಖದರ್ ತೋರಿಸಬೇಕಿದೆ.
ಇದನ್ನೂ ಓದಿ: ಡಾ.ಬ್ರೋ ಕಂಪನಿಯಲ್ಲಿ ಉದ್ಯೋಗ ಅವಕಾಶ.. ಗೋಪ್ರವಾಸದಲ್ಲಿ ಗಗನ್ ಜೊತೆ ನೀವೂ ಸೇರಿಕೊಳ್ಳಿ!
ಚಾಲೆಂಜ್ ನಂ.5- ಯಂಗ್ಸ್ಟರ್ಸ್ ಪೈಪೋಟಿ
ಕಿಂಗ್ ಕೊಹ್ಲಿ ರೆಡ್ಬಾಲ್ ಕ್ರಿಕೆಟ್ನಲ್ಲಿ ಹಳೆ ಖದರ್ ಉಳಿಸಿಕೊಂಡಿಲ್ಲ. ಕನ್ಸಿಸ್ಟೆನ್ಸಿ ಸಮಸ್ಯೆ ಎದುರಿಸ್ತಿದ್ದಾರೆ. ಇನ್ನೊಂದೆಡೆ ಯಂಗ್ಸ್ಟರ್ಸ್ ಸಾಲಿಡ್ ಪ್ರದರ್ಶನ ನೀಡ್ತಿದ್ದಾರೆ. ಇದರಿಂದ ವಿರಾಟ್ ಸ್ಥಾನಕ್ಕೆ ಕುತ್ತು ಎದುರಾಗಿದೆ. ತಂಡದಲ್ಲಿ ಪೈಪೋಟಿ ಹೆಚ್ಚಿರೋದ್ರಿಂದ ವಿರಾಟ್ ರನ್ಗಳಿಸಲೇ ಬೇಕಿದೆ. ಈ ಕಾರಣಕ್ಕಾಗಿ ಮುಂಬರೋ ಬಾಂಗ್ಲಾ ಸರಣಿ ಕಿಂಗ್ ಕೊಹ್ಲಿಗೆ ಮಹತ್ವದ್ದಾಗಿದೆ.
ಬಾಂಗ್ಲಾ ಟೆಸ್ಟ್ ಸಿರೀಸ್ ಸೆಂಚುರಿ ಸಾಮ್ರಾಟನಿಗೆ ಚಾಲೆಂಜಿಂಗ್ ಸರಣಿಯಾಗಿದೆ. ಈ ಸವಾಲುಗಳ ಚಕ್ರವ್ಯೂಹ ಬೇಧಿಸಿ ಕಿಂಗ್ ಕೊಹ್ಲಿ ಗೆದ್ದು ಬೀಗ್ತಾರಾ?. ಇಲ್ಲ ಫೇಲ್ ಆಗಿ ಟೀಕಾಕಾರರ ಬಾಯಿಗೆ ಆಹಾರಾವಾಗ್ತಾರಾ.? ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ