ಯುವರಾಜ್‌ ಕುಮಾರ್ ಡಿವೋರ್ಸ್‌ ಕೇಸ್‌ಗೆ ಬಿಗ್ ಟ್ವಿಸ್ಟ್‌.. ಕೋರ್ಟ್‌ ಮಹತ್ವದ ಆದೇಶ; ಏನದು?

author-image
admin
Updated On
ಯುವ ರಾಜ್​ಕುಮಾರ್‌ ಪತ್ನಿ ಶ್ರೀದೇವಿಗೆ ಬಿಗ್​​ ಶಾಕ್​; ಕಾನೂನು ಸಮರಕ್ಕೆ ಮುಂದಾದ ನಟಿ ಸಪ್ತಮಿ ಗೌಡ
Advertisment
  • ಕೋರ್ಟ್‌ಗೆ ಯುವ ಹಾಗೂ ಶ್ರೀದೇವಿ ಪರ ವಕೀಲರು ಹಾಜರು
  • ಶ್ರೀದೇವಿ ಪರ ವಕೀಲರಿಂದ ವಿಚ್ಛೇದನ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ
  • 1 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಿಂದ ಮಹತ್ವದ ಆದೇಶ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಯುವರಾಜ್‌ ಕುಮಾರ್ ಡಿವೋರ್ಸ್‌ ಕೇಸ್‌ನ ವಿಚಾರಣೆ ಇಂದು ಫ್ಯಾಮಿಲಿ ಕೋರ್ಟ್‌ನಲ್ಲಿ ನಡೆದಿದೆ. ಯುವರಾಜ್‌ ಕುಮಾರ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಕಲ್ಪನಾ ಎಂ.ಎಸ್ ಅವರು ಮಹತ್ವದ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಇಂದು ಯುವ ಡಿವೋರ್ಸ್ ಅರ್ಜಿ ವಿಚಾರಣೆ.. ಕೋರ್ಟ್​ಗೆ ತೆರಳುವ ಮುನ್ನ ಹೀಗೊಂದು ಪೋಸ್ಟ್​ ಹಂಚಿಕೊಂಡ ಶ್ರೀದೇವಿ! 

ಫ್ಯಾಮಿಲಿ ಕೋರ್ಟ್ ವಿಚಾರಣೆ ವೇಳೆ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಪರ ವಕೀಲರು ಹಾಜರಿದ್ದರು. ಆರಂಭದಲ್ಲಿ ಶ್ರೀದೇವಿ ಪರ ವಕೀಲೆ ದೀಪ್ತಿ ವಾದ ಮಾಡಿದರು. ನಾವು ಗುರುರಾಜ ಕು‌ಮಾರ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸುತ್ತೇವೆ ಎಂದರು. ಹೀಗಾಗಿ ವಿಚ್ಛೇದನ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲಾಗಿದೆ.

publive-image

ಯುವರಾಜ್ ಕುಮಾರ್ ವಿಚ್ಛೇದನ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಬಳಿಕ ಶ್ರೀದೇವಿ ಪರ ವಕೀಲೆ ತಮ್ಮ ಆಕ್ಷೇಪಣೆ ಬಗ್ಗೆ ವಾದ ಮಾಡಲು ಅವಕಾಶ ಕೋರಿದರು. ಆದರೆ ಇದಕ್ಕೆ ಜಡ್ಜ್ ಅವಕಾಶ ಸಾಧ್ಯವಿಲ್ಲ ಎಂದರು. ವಿಚ್ಛೇದನ ಅರ್ಜಿಯ ಪ್ರಕ್ರಿಯೆ ಎಲ್ಲಾ ಮುಗಿದ ಮೇಲೆ ವಾದ ಆಲಿಸಲಾಗುತ್ತೆ. ಸುಪ್ರಿಂಕೋರ್ಟ್ ನಿರ್ದೇಶನ ಫಾಲೋ ಮಾಡಬೇಕು ಎಂದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಯುವರಾಜ್ ಕುಮಾರ್ ಡಿವೋರ್ಸ್ ಪ್ರಕರಣವನ್ನು ಮಿಡಿಯೇಷನ್ ಕೌನ್ಸೆಲಿಂಗ್‌ಗೆ ರೆಫರ್ ಮಾಡಿದ್ದಾರೆ. ಮೊದಲು ಮಿಡಿಯೇಷನ್ ಕೌನ್ಸೆಲಿಂಗ್ ಮುಕ್ತಾಯ ಆಗಲಿ. ಬಳಿಕ ಆಕ್ಷೇಪಣೆ ಕೈಗೆತ್ತಿಕೊಳ್ಳುವುದಾಗಿ ಜಡ್ಜ್ ತಿಳಿಸಿದ್ದಾರೆ.

publive-image

ಇದು ಕೌಟುಂಬಿಕ ಕಲಹ ಮೊದಲು ಕೌನ್ಸೆಲಿಂಗ್ ನಡೆಯಬೇಕು. ಕೌನ್ಸೆಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಬಳಿಕ ವಿಚ್ಛೇದನದ ಆಕ್ಷೇಪಣೆಯ ವಾದ ಕೇಳೋದಾಗಿ ನ್ಯಾಯಾಧೀಶರು ಹೇಳಿದ್ದಾರೆ. ಅದಕ್ಕೆ ಶ್ರೀದೇವಿ ಪರ ವಕೀಲರಿಂದ ಸಮ್ಮತಿ ಸಿಕ್ಕಿದೆ.

ಇದನ್ನೂ ಓದಿ:‘ಯವ ರಾಜ್​ಕುಮಾರ್​​ಗೆ ಸಹನಟಿ ಜತೆ ಅಫೇರ್​’- ದೊಡ್ಮನೆ ಕುಡಿ ವಿರುದ್ಧ ಶ್ರೀದೇವಿ ಆರೋಪ

ಯುವರಾಜ್ ಕುಮಾರ್ ಡಿವೋರ್ಸ್‌ ಕೇಸ್‌ನಲ್ಲಿ ಮುಂದಿನ ಆಗಸ್ಟ್ 23ಕ್ಕೆ ಮಿಡಿಯೇಷನ್ ಕೌನ್ಸೆಲಿಂಗ್‌ಗೆ ದಿನಾಂಕ ಫಿಕ್ಸ್ ಆಗಿದೆ. ಅಂದು ಗುರುರಾಜ್ ಕುಮಾರ್ & ಶ್ರೀದೇವಿ ಅವರಿಗೆ ಅರ್ಬಿಟ್ರೇಟರ್ ಮೂಲಕ ಕೌನ್ಸೆಲಿಂಗ್ ನಡೆಯಲಿದೆ. ಕೌನ್ಸೆಲಿಂಗ್ ವರದಿ ಆಧಾರದ ಮೇಲೆ ವಿಚಾರಣೆ ನಡೆಯಲಿದೆ. 1 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶೆ ಕಲ್ಪನಾ ಎಂ ಎಸ್ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment