/newsfirstlive-kannada/media/post_attachments/wp-content/uploads/2024/10/DARSHAN_LAWYER.jpg)
ಬರೋಬ್ಬರಿ 126 ದಿನಗಳು, ಅಂದ್ರೆ, 3024 ಗಂಟೆಗಳಿಗೂ ಹೆಚ್ಚು. ತಪ್ಪು ಮಾಡಿ ಜೈಲು ಸೇರೋ ಸಾಮಾನ್ಯ ಮನುಷ್ಯರಿಗೇ ಆಗೋದಿಲ್ಲ ಸ್ವಾಮಿ.ಅಂತದ್ದರಲ್ಲಿ ದರ್ಶನ್ ಅನ್ನೋ ಬಿಳಿ ಆನೆಯನ್ನ ಕರೆದುಕೊಂಡು ಹೋಗಿ ಜೈಲಲ್ಲಿ ಕೂಡಿ ಹಾಕಿಬಿಟ್ರೆ ಹೇಗಿರಬೇಡ. ಎರಡು ದಶಕ. ಬರೋಬ್ಬರಿ 2 ದಶಕದಿಂದ ದರ್ಶನ್, ತನ್ನ ಲೈಫಲ್ಲಿ ಗಂಟೆ ಗಂಟೆಗೂ ಲಕ್ಷ ಲಕ್ಷದಂತೆ ಲೆಕ್ಕ ಹಾಕಿ ಕೋಟಿ ಕೋಟಿ ದುಡಿದ ನಟ.
ಅಂತಹ ನಟ ಕೊಲೆ ಕೇಸಲ್ಲಿ ಕಳೆದ 126 ದಿನಗಳಿಂದ ಕಂಬಿ ಎಣಿಸ್ತಿರೋದನ್ನ ನೀವೆಲ್ರೂ ನೋಡ್ತಾನೆ ಇದ್ದೀರಾ. ಆದ್ರೆ, ಇತ್ತ ದರ್ಶನ್ ಜೈಲು ಸೇರಿದಾಗಿನಿಂದ ಅವ್ರ ಅಭಿಮಾನಿಗಳದ್ದು ಒಂದೇ ಗೋಳು. ನಮ್ ಬಾಸ್ ಆಚೆ ಬರ್ತಾರೆ, ಆಮೇಲ್ ಎಲ್ರಿಗೂ ಉತ್ತರ ಕೊಡ್ತೀವಿ ಅಂತಾ ಡೈಲಾಗ್ ಹೊಡೀತಿರೋದೇ ಹೊಡಿತೀರೋದು. ಕೊನೆಗೂ, ಅಂದ್ರೆ ಈಗ ದಾಸ ಕೊಲೆ ಕೇಸಲ್ಲಿ ಕಂಬಿ ಹಿಂದೆ ಸೇರಿ 4 ತಿಂಗಳಾದ ಮೇಲೆ ದರ್ಶನ್ ಆಚೆ ಬರ್ತಾರೋ ಇಲ್ವೋ ಅನ್ನೋ ಕುತೂಹಲಕ್ಕೆ ಉತ್ತರ ನೀಡುವ ದಿನ ಬಂದೇಬಿಟ್ಟಿದೆ.
ಜಾಮೀನಿಗಾಗಿ ವೆರೈಟಿ ವೆರೈಟಿ ತಂತ್ರಗಳನ್ನ ಮಾಡ್ತಿರೋ ದರ್ಶನ್ ಹಾಗೂ ಅವರಿಗಾಗಿ ಸಾಲು ಸಾಲು ಪೂಜೆ ಪುನಸ್ಕಾರಗಳನ್ನ ಮಾಡ್ತಿರೋ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು, ದೇವರಿಗೆ ಒಂದು ಈಡುಗಾಯಿ ಎಕ್ಸ್ಟ್ರಾ ಹೊಡೆಯೋ ಟೈಮ್ ಬಂದಿದೆ. ದರ್ಶನ್‌ಗೆ ಜಾಮೀನು ಸಿಗುತ್ತಾ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಪಡೆಯೋದಕ್ಕೆ ಕೌಂಟ್ಡೌನ್ ಶುರುವಾಗಿದೆ. ಎರಡೂ ಕಡೆಯ ವಾದ ಪ್ರತಿವಾದಗಳನ್ನ ಆಲಿಸಿರುವ ನ್ಯಾಯಾಧೀಶರು ಬೇಲ್ ಕೊಡ್ತಾರಾ, ಇಲ್ವಾ ಅನ್ನೋದು ಇಂದು ಗೊತ್ತಾಗಲಿದೆ. ಅಷ್ಟಕ್ಕೂ ದರ್ಶನ್ ಪರ ಸಿವಿ ನಾಗೇಶ್, ಪೊಲೀಸರ ಪರ ಪ್ರಸನ್ನಕುಮಾರ್ ಮಂಡಿಸಿರೋ ವಾದ ಪ್ರತಿವಾದವನ್ನ ನೋಡಿದ್ರೆ ಬೇಲ್ ಸಿಗುತ್ತಾ? ಇಲ್ವಾ ಅನ್ನೋದನ್ನ ನಾವು ಡೈರೆಕ್ಟಾಗಿ ಹೇಳೋದಕ್ಕಾಗಲ್ಲ. ಬಟ್, ಕೋರ್ಟ್ ಈ ಪ್ರಕರಣವನ್ನ ಯಾವ ರೀತಿ ನೋಡಬಹುದು ಅನ್ನೋ ಅಂದಾಜು ಮಾಡಬಹುದು.
ದರ್ಶನ್‌ಗೆ ಶುಭವಾಗುತ್ತಾ ಸೋಮವಾರ? ಆದೇಶಕ್ಕೆ ಕಾತರ!
ದರ್ಶನ್ ಕುಟುಂಬ ಮತ್ತು ದರ್ಶನ್‌ಗೆ ಇರೋ ಲಕ್ಷ ಲಕ್ಷ ಅಭಿಮಾನಿಗಳು ಬೇಲ್ ಪಕ್ಕಾ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ, ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, ಖ್ಯಾತ ವಕೀಲರಾಗಿರೋ ಸಿವಿ ನಾಗೇಶ್ ಅವ್ರು ದರ್ಶನ್ ಪರ ಕೋರ್ಟ್‌ನಲ್ಲಿ ಪ್ರಬಲ ವಾದ ಮಂಡಿಸಿರೋದು. ದರ್ಶನ್ ಪರ ಭರ್ಜರಿ ಲಾ ಪಾಯಿಂಟ್ಸ್ ಹಾಕಿರೋ ಸಿವಿ ನಾಗೇಶ್, ನಟನ ವಿರುದ್ಧ ಇರೋ ಸಾಕ್ಷ್ಯಗಳು ಸಾಕ್ಷ್ಯಗಳೇ ಅಲ್ಲ.. ಈ ಕೊಲೆ ಕೇಸ್ಗೂ ದರ್ಶನ್ಗೂ ಸಂಬಂಧವೇ ಇಲ್ಲ ಅನ್ನೋದನ್ನ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ಪೊಲೀಸರೇ ದರ್ಶನ್ ವಿರುದ್ಧ ಸಾಕ್ಷ್ಯಗಳನ್ನ ಸೃಷ್ಟಿ ಮಾಡಿದ್ದಾರೆ ಅನ್ನೋದಕ್ಕೂ ಕೆಲವೊಂದು ದಾಖಲೆಗಳನ್ನ ತೋರಿಸಿದ್ದಾರೆ. ನಾಗೇಶ್ ಮಂಡಿಸಿರೋ ಈ ವಾದ ನೋಡುತ್ತಿದ್ದರೆ, ದರ್ಶನ್‌ಗೆ ಜಾಮೀನು ಕೊಡಿಸುವಲ್ಲಿ ಅವರು ಯಶಸ್ವಿಯಾಗ್ತಾರಾ ಅನ್ನೋದು ಕುತೂಹಲ ಹುಟ್ಟಿಸದೇ ಇರೋದಿಲ್ಲ.
ಇದನ್ನೂ ಓದಿ: ಮಹಾಲಕ್ಷ್ಮಿ ಸಾವು ಹೇಗಾಯ್ತು.. ವೈಯಾಲಿಕಾವಲ್ ಪೊಲೀಸ್ ಕೈ ಸೇರಿದ ಮತ್ತೊಂದು ರಿಪೋರ್ಟ್!
ಪೊಲೀಸರು ತಮ್ಮ ಚಾರ್ಜ್‌ಶೀಟ್‌ನಲ್ಲಿ ಮೊಬೈಲ್ ಟವರ್, ಫೋನ್ ಕಾಲ್ ಡಿಟೇಲ್ಸ್ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನೇ ಪ್ರಬಲವಾಗಿ ಉಲ್ಲೇಖ ಮಾಡಿದ್ರು. ಅದ್ರಲ್ಲಿ ಟವರ್ ಡಂಪ್, ಗೂಗಲ್ ಲೋಕೇಶನೇ ಬಹುಮುಖ್ಯ ಸಾಕ್ಷಿ ಅಂತಾ ಕರೆಸಿಕೊಂಡಿತ್ತು. ಅಂದ್ರೆ, ಕೃತ್ಯ ನಡೆದ ದಿನ ದರ್ಶನ್ ಅಂಡ್ ಗ್ಯಾಂಗ್ ಪಟ್ಟಣಗೆರೆ ಶೆಡ್‌ನಲ್ಲಿತ್ತು ಅನ್ನೋದಕ್ಕೆ ಟವರ್ ಡಂಪ್ ಸಾಕ್ಷ್ಯ ನೀಡಿದ್ರು. ಹಾಗೇ ಆರೋಪಿಗಳು ರೇಣುಕಾಸ್ವಾಮಿ ಹತ್ಯೆಯಾಗಿರೋ ವೇಳೆ ಪಟ್ಟಣಗೆರೆ ಶೆಡ್ ಹೋಗಿದ್ದಾರೆ ಅನ್ನೋ ಗೂಗಲ್ ಲೋಕೇಶನ್ ಕೊಟ್ಟಿದ್ರು. ಆದ್ರೆ, ಸಿವಿ ನಾಗೇಶ್ ಅವ್ರು ಡಿಜಿಟಲ್ ಸಾಕ್ಷಿ ಸಾಕ್ಷಿನೇ ಅಲ್ಲ ಅಂತಾ ಸಾರಾಸಗಟಾಗಿ ಹೇಳಿದ್ದಾರೆ. ಡಿಜಿಟಲ್ ಸಾಕ್ಷಿಗಳನ್ನು ಎಡಿಟ್ ಮಾಡಬಹುದು ಅನ್ನೋದನ್ನು ನ್ಯಾಯಾಧೀಶರ ಮುಂದಿಟ್ಟಿದ್ದಾರೆ. ಹಾಗೇ ಪೊಲೀಸರಿಗೆ ಸಾಕ್ಷ್ಯಗಳ ಹೇಳಿಕೆ ತಡವಾಗಿದ್ದು ಏಕೆ? ಪೋಸ್ಟ್ ಮಾರ್ಟಂ 3 ದಿನ ತಡ ಮಾಡಿದ್ದು ಏಕೆ? ಅಂತಾ ಬಲವಾಗಿಯೇ ಪ್ರಶ್ನಿಸಿದ್ದಾರೆ. ಪೊಲೀಸರ ತಂತ್ರ ದರ್ಶನ್ ಅನ್ನು ಕೇಸ್‌ನಲ್ಲಿ ಸಿಕ್ಕಿ ಹಾಕಿಸೋದು ಅಂತಾ ವಾದಿಸಿದ್ದಾರೆ. ಹೀಗಾಗಿ ದರ್ಶನ್ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಬೇಲ್ ಸಿಗುತ್ತೆ ಅನ್ನೋ ಆತ್ಮವಿಶ್ವಾಸ ಹುಟ್ಟಿಸಿದೆ.
ಇದನ್ನೂ ಓದಿ: ದರ್ಶನ್ ಸಿಗ್ನಲ್ ಬಳಿಕ DBoss ಸೆಲೆಬ್ರಿಟಿಸ್‌ಗೆ ವಿಜಯಲಕ್ಷ್ಮಿ ಮೆಸೇಜ್.. ಫ್ಯಾನ್ಸ್‌ಗೆ ಗುಡ್‌ನ್ಯೂಸ್!
ದರ್ಶನ್ ಬೇಲ್‌ಗೆ ಅರ್ಹವಾಗಿದ್ದಾರೆ ಅಂತಾ ಖ್ಯಾತ ವಕೀಲರಾಗಿರೋ ಸಿವಿ ನಾಗೇಶ್ ಹೇಗೆ ಪ್ರಬಲವಾದ ವಾದ ಮಂಡಿಸಿದ್ದಾರೋ? ಸೇಮ್ ಹಾಗೇ ದರ್ಶನ್‌ಗೆ ಜಾಮೀನು ನೀಡಬಾರದು ಅಂತಾ ಎಸ್‌ಪಿಪಿ ಪ್ರಸನ್ನ ಕುಮಾರ್ ಅವ್ರು ವಾದ ಮಾಡಿದ್ದಾರೆ. ಕೋರ್ಟ್‌ನಲ್ಲಿ ಎರಡ್ಮೂರು ದಿನಗಳ ಕಾಲ ವಾದ, ಕೌಂಟರ್, ರೀ ಕೌಂಟರ್ ಭರ್ಜರಿಯಾಗಿನೇ ನಡೆದಿದೆ. ಮುಖ್ಯವಾಗಿ ಸಿವಿ ನಾಗೇಶ್ ಅವ್ರು ಪೋಸ್ಟ್ ಮಾರ್ಟಂ ಮೂರು ದಿನ ತಡವಾಗಿ ಮಾಡಿದ್ದು ಏಕೆ? ಬಟ್ಟೆಯನ್ನು ಕುಕ್ಕಿ ಕುಕ್ಕಿ ತೊಳೆದು ರಕ್ತದ ಕಲೆ ಅದು ಹೇಗೆ ಇರುತ್ತೆ? ಜಿಡಿಟಲ್ ಸಾಕ್ಷಿಗಳು ಸಾಕ್ಷಿನೇ ಅಲ್ಲ ಅಂತಾ ಕೊಟ್ಟಿರೋ ಪಾಯಿಂಟ್‌ಗಳಿಗೆ ಎಸ್‌ಪಿಪಿ ಕೌಂಟರ್ ಕೊಟ್ಟಿದ್ದಾರೆ.
ಪೊಲೀಸರು ರೇಣಕುಸ್ವಾಮಿ ಹತ್ಯೆ ಕೇಸ್‌ನಲ್ಲಿ ಬರೋಬ್ಬರಿ 3991 ಪುಟಗಳನ್ನು ಸಲ್ಲಿಕೆ ಮಾಡಿದ್ರು. ಅದ್ರಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಸ್ಟೇಟ್‌ಮೆಂಟ್, 164 ಸೇಟ್‌ಮೆಂಟ್, ಡಿಜಿಟಲ್ ಸಾಕ್ಷ್ಯಗಳು, ವೈಜ್ಞಾನಿಕ, ವೈದ್ಯಕೀಯ ಸಾಕ್ಷಿಗಳನ್ನು ಉಲ್ಲೇಖ ಮಾಡಿದ್ರು. ಅದೆಲ್ಲವನ್ನು ಕೋರ್ಟ್‌ನಲ್ಲಿ ಪ್ರಸನ್ನ ಕುಮಾರ್ ಅವ್ರು ಸಮರ್ಥನೆ ಮಾಡ್ಕೊಂಡಿದ್ದಾರೆ. ಹಾಗೇ ಅದೆಲ್ಲವೂ ಸತ್ಯವಾಗಿದೆ. ರೇಣುಕಾಸ್ವಾಮಿ ಮೇಲೆ ದರ್ಶನ್ ಅಂಡ್ ಗ್ಯಾಂಗ್ ಹಲ್ಲೆ ಮಾಡಿ ಸಾಯಿಸಿದ್ದಾರೆ ಅನ್ನೋದನ್ನು ಒತ್ತಿ ಒತ್ತಿ ಹೇಳಿದ್ದಾರೆ. ಇನ್ನು ಕ್ರೂರವಾಗಿ ಹತ್ಯೆ ಮಾಡಿರೋದ್ರಿಂದ ಇದು ಜೀವಾವಧಿ ಶಿಕ್ಷೆಗೆ ಒಳಪಡುವ ಸೆಕ್ಷನ್ ಆಗಿದ್ದು ಆರೋಪಿಗೆ ಜಾಮೀನು ಕೊಡಬಾರದು ಅಂತ ವಾದಿಸಿದ್ದಾರೆ.
ದರ್ಶನ್ ಪರ ವಕೀಲರಾಗಿರೋ ಸಿವಿ ನಾಗೇಶ್ ಅವ್ರು ಜಡ್ಜ್ ಮುಂದೆ ಯಾವ ಯಾವ ಪಾಯಿಂಟ್ ಇಡಬೇಕಾಗಿತ್ತೋ ಅದೆಲ್ಲವನ್ನು ಇಟ್ಟಿದ್ದಾರೆ. ಹಾಗೇ ಪ್ರಸನ್ನ ಕುಮಾರ್ ಅವರು ಜಾಮೀನು ಯಾಕೆ ಕೊಡಬಾರದು ಅನ್ನೋದನ್ನೂ ಪ್ರಬಲವಾಗಿ ವಾದಿಸಿದ್ದಾರೆ. ಈಗ ದರ್ಶನ್ ಬೇಲ್ ಅರ್ಹರು ಹೌದೋ? ಅಲ್ವೋ? ಅನ್ನೋದನ್ನು ತೀರ್ಮಾನಿಸುವರು ನ್ಯಾಯಾಧೀಶರಾಗಿದ್ದಾರೆ. ಹಾಗಾದ್ರೆ, ಬೇಲ್ ಕೊಡುವಾಗ ನ್ಯಾಯಾಧೀಶರು ಮುಖ್ಯವಾಗಿ ಯಾವ ಅಂಶವನ್ನು ಪರಿಗಣಿಸುತ್ತಾರೆ. ಅದು ವೇರಿ ವೇರಿ ಇನ್‌ಪಾರ್ಟೆಂಟ್ ಆಗಿರುತ್ತೆ.
‘ಡಿ’ ಢವಢವ-01
ಅಪರಾಧದ ತೀವ್ರತೆ ಶಾಕ್ ಕೊಡುತ್ತಾ?
ಬೇಲ್ ವಿಚಾರಣೆ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವ್ರು cruelty Of crime,ಅಂದ್ರೆ, ಅಪರಾಧದ ತೀವ್ರತೆಯನ್ನು ಒತ್ತಿ ಒತ್ತಿ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ರೇಣುಕಾಸ್ವಾಮಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಆ ಭೀಕರ ಟಾರ್ಚರ್ನಿಂದಲೇ ಅವನು ಜೀವ ಬಿಟ್ಟಿದ್ದಾನೆ ಅನ್ನೋದನ್ನ ಒತ್ತಿ ಒತ್ತಿ ಹೇಳಿದ್ದಾರೆ. ಒಂದು ವೇಳೆ ಅವರು ಹೇಳಿದಂತೆ ಅಪರಾಧದ ತೀವ್ರತೆ ಏನಾದ್ರೂ ದರ್ಶನ್‌ಗೆ ಮುಳುವಾಗಬಹುದಾ ಅನ್ನೋ ಪ್ರಶ್ನೆ ಹುಟ್ಟುತ್ತಲ್ವಾ?
‘ಡಿ’ ಢವಢವ-02
ಪ್ರಭಾವಶಾಲಿ ಆಗಿದ್ದು ಸಮಸ್ಯೆಯಾಗುತ್ತಾ?
ಇವತ್ತು ಈ ಕೊಲೆ ಕೇಸ್ ಇಡೀ ರಾಜ್ಯವನ್ನೇ ಆತಂಕಗೊಳಿಸಿದೆ ಅಂದ್ರೆ ಅದಕ್ಕೆ ಮುಖ್ಯ ಕಾರಣ ಆರೋಪಿ ಸ್ಥಾನದಲ್ಲಿ ನಟ ದರ್ಶನ್ ನಿಂತಿರೋದು. ಅದೇ ಸ್ಥಾನದಲ್ಲಿ ಸಾಮಾನ್ಯ ವ್ಯಕ್ತಿಗಳು ಇದ್ರೆ ಇಷ್ಟೊಂದು ಪರಿಪ್ರಮಾಣದಲ್ಲಿ ಕೇಸ್ ಸದ್ದು ಮಾಡ್ತಾ ಇರಲಿಲ್ಲ. ಆದ್ರೆ, ತಾನೊಬ್ಬ ಸೆಲೆಬ್ರಿಟಿಯಾಗಿರೋದೇ ದರ್ಶನ್‌ಗೆ ಈಗ ಟೆನ್ಶನ್ ಶುರು ಮಾಡಿದೆ. ಹಾಗೊಂದು ವೇಳೆ ಕೋರ್ಟ್ ತಾನು ಪ್ರಭಾವಿ ಅಂತಾ ಬೇಲ್ ನಿರಾಕರಣೆ ಮಾಡಿ ಬಿಟ್ರೆ ಅನ್ನೋ ಟೆನ್ಶನ್ ದರ್ಶನ್‌ಗಿದೆ. ಎಸ್‌ಪಿಪಿ ಕೂಡ ದರ್ಶನ್ ಪ್ರಭಾವಶಾಲಿ ವ್ಯಕ್ತಿಯಾಗಿದ್ದು, ಜಾಮೀನು ಕೊಟ್ರೆ ಸಾಕ್ಷಿ ನಾಶ ಯತ್ನ ನಡೆಯೋ ಸಾಧ್ಯತೆ ಇದೆ ಅನ್ನೋದನ್ನು ಕೋರ್ಟ್ ಗಮನಕ್ಕೆ ತಂದಿದ್ದಾರೆ.
‘ಡಿ’ ಢವಢವ-03
ಸಾಕ್ಷಿಗಳೇ ಬೇಲ್‌ಗೆ ಅಡ್ಡಿಯಾಗಬಹುದು?
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಪೊಲೀಸರು ಪಣಕ್ಕೆ ಬಿದ್ದು ಸಾಕ್ಷಿ ಸಂಗ್ರಹ ಮಾಡಿದ್ದಾರೆ. ಅದ್ರಲ್ಲಿ ವೈಜ್ಞಾನಿಕ, ತಾಂತ್ರಿಕ, ವೈದ್ಯಕೀಯ ಮತ್ತು ಪ್ರತ್ಯಕ್ಷ ಸಾಕ್ಷಿಗಳನ್ನು ಕೋರ್ಟ್‌ಗೆ ನೀಡಿದ್ದಾರೆ. ಪ್ರಸನ್ನ ಕುಮಾರ್ ಅವ್ರು ಕೂಡ ಇದೇ ಸಾಕ್ಷ್ಯಗಳನ್ನು ಇಟ್ಟುಕೊಂಡು ವಾದ ಮಾಡಿದ್ದಾರೆ. ಹಾಗೇ ರೇಣುಕಾಸ್ವಾಮಿ ಹತ್ಯೆಯಾದ ದಿನ ಏನಾದ್ರೂ ದರ್ಶನ್ ಬೇರೆ ನಗರದಲ್ಲೋ? ಬೇರೆ ರಾಜ್ಯದಲ್ಲೋ? ಇದ್ರೆ ಈ ಕೇಸ್‌ನಲ್ಲಿ ದರ್ಶನ್ ಭಾಗಿಯಾಗಿಲ್ಲ ಅನ್ನೋದನ್ನು ನ್ಯಾಯಾಧೀಶರ ಮುಂದೆ ತರಬಹುದಾಗಿತ್ತು. ಆದರೆ, ಟವರ್ ಡಂಪ್, ಗೂಗಲ್ ಮ್ಯಾಪ್ , ಸಿಸಿ ಟಿವಿ ಸಾಕ್ಷಿಗಳ ಪ್ರಕಾರ ದರ್ಶನ್ ಪಟ್ಟಣಗೆರೆ ಶೆಡ್‌ನಲ್ಲಿದ್ದರು ಅನ್ನುವದನ್ನು ಹೇಳಿದೆ. ಈ ಸಾಕ್ಷಿಗಳೇ ದರ್ಶನ್ ಪಾಲಿಗೆ ಬಹುದೊಡ್ಡ ಆಘಾತ ಮೂಡಿಸುತ್ತಿವೆ. ಇಷ್ಟೇ ಅಲ್ಲ, ಇನ್ನಷ್ಟು ವಿಷ್ಯಗಳು ದರ್ಶನ್‌ಗೆ ಢವಢವ ಮೂಡಿಸುತ್ತಿವೆ. ಒಂದ್ ವೇಳೆ ಜಾಮೀನು ಸಿಗದೇ ಇದ್ರೆ ಏನ್ ಮಾಡೋದು ಅನ್ನೋ ಟೆನ್ಷನ್ ಕೂಡ ದರ್ಶನ್‌ಗೆ ಬೆನ್ನು ನೋವಿನಷ್ಟೇ ತೀವ್ರವಾಗಿ ಕಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ