newsfirstkannada.com

ಪಂಜಾಬ್ ವಿರುದ್ಧ RCBಗೆ ರೋಚಕ ಗೆಲುವು; ಬೆಂಗಳೂರು ತಂಡದ ಗೆಲುವಿನ ಹಿಂದಿದೆ 8 ಕಾರಣಗಳು..!

Share :

Published March 26, 2024 at 9:02am

    ಚಿನ್ನಸ್ವಾಮಿಯಲ್ಲಿ ಆರ್​​ಸಿಬಿ ಚಿನ್ನದಂಥ ಗೆಲುವು

    ರಣರೋಚಕವಾಗಿ ಗೆದ್ದು ಬೀಗಿದ ನಮ್ಮ ಆರ್​​ಸಿಬಿ

    ಆರ್​​ಸಿಬಿ ಗೆಲುವಿನ ಹಿಂದಿನ ಸೀಕ್ರೆಟ್​​ ಏನು ಗೊತ್ತಾ?

ಪಂಜಾಬ್​ ವಿರುದ್ಧದ ಕದನದಲ್ಲಿ ಆರ್​​ಸಿಬಿ ರಾಯಲ್​ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಸೋತ ಆರ್​ಸಿಬಿ, ಬೆಂಗಳೂರಲ್ಲಿ ರೋಚಕ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿತು. ಅಷ್ಟಕ್ಕೂ ಡುಪ್ಲೆಸಿ ಪಡೆ ಹೋಮ್​​ಗ್ರೌಂಡ್​ನಲ್ಲಿ ಗೆದ್ದಿದ್ದೇಗೆ? ಗೆಲುವಿಗೆ ಕಾರಣ ಏನು?

ಸೀಸನ್​​ 17ರ ಐಪಿಎಲ್​ನಲ್ಲಿ ಆರ್​​ಸಿಬಿ ಗೆಲುವಿನ ಖಾತೆ ತೆರೆದಿದೆ. ತವರು ಚಿನ್ನಸ್ವಾಮಿ ಅಂಗಳದಲ್ಲಿ RCB​​ ಪಡೆಯ ಘರ್ಜನೆಗೆ ಪಂಜಾಬ್​ ಪತರುಗುಟ್ಟಿತು. ಆರಂಭದಿಂದ ಅಂತ್ಯದವರೆಗೆ ಆರ್​​ಸಿಬಿ ಸಖತ್​ ಡಿಸಿಪ್ಲೀನ್​ ಆಟವಾಡ್ತು. ಅದೇ ಗೆಲುವಿಗೆ ಕಾರಣವಾಯ್ತು.

ಕಾರಣ ನಂ.1: ಪವರ್​​​ಪ್ಲೇನಲ್ಲಿ ಪವರ್​​ಫುಲ್​ ಬೌಲಿಂಗ್​
ಚಿಕ್ಕಗ್ರೌಂಡ್​ ಚಿನ್ನಸ್ವಾಮಿಯಲ್ಲಿ ಆರ್​​ಸಿಬಿ ಬೌಲರ್ಸ್​​ ರನ್​ ಕಂಟ್ರೋಲ್​ ಮಾಡ್ತಾರಾ ಅನ್ನೋ ಪ್ರಶ್ನೆಗೆ ನಿನ್ನೆಯ ಆಟವೇ ಉತ್ತರ ನೀಡ್ತು. ಪವರ್​ಪ್ಲೇನಲ್ಲಿ ಪವರ್​ಫುಲ್​ ಬೌಲಿಂಗ್​ ಮಾಡಿದ ಆರ್​ಸಿಬಿ ಬೌಲರ್ಸ್​​ 6 ಓವರ್​ಗಳಲ್ಲಿ ಜಸ್ಟ್​ 40 ರನ್​ ನೀಡಿ 1 ವಿಕೆಟ್​ ಕಬಳಿಸಿದ್ರು.

ಕಾರಣ ನಂ.2: ಅಲ್ಪ ಮೊತ್ತಕ್ಕೆ ಬಿಗ್​ ಹಿಟ್ಟರ್ಸ್​ ಬಲೆಗೆ
ಪಂಜಾಬ್​ ಪಡೆಯ ಬಿಗ್​ ಹಿಟ್ಟರ್​ಗಳಾದ ಜಾನಿ ಬೇರ್​ಸ್ಟೋ, ಲಯಾಮ್​ ಲಿವಿಂಗ್​ ಸ್ಟೋನ್​​ ಆರ್ಭಟಿಸಲು ಆರ್​​ಸಿಬಿ ಬೌಲರ್ಸ್​​ ಬಿಡ್ಲೇ ಇಲ್ಲ. ಸ್ಯಾಮ್​ ಕರನ್​ ಆಟವೂ ನಡೀಲಿಲ್ಲ.

ಕಾರಣ ನಂ.3: ಪಂಜಾಬ್​ ಬ್ಯಾಟರ್ಸ್​ ಸೆಟಲ್​ ಆಗಲು ಚಾನ್ಸ್​ ನೀಡಲಿಲ್ಲ
ಚಿನ್ನಸ್ವಾಮಿ ಮೈದಾನಕ್ಕಿಳಿದ ಪಂಜಾಬ್​ ಬ್ಯಾಟ್ಸ್​ಮನ್​ಗಳನ್ನ ಆರ್​​ಸಿಬಿ ಬೌಲರ್ಸ್​ ಕಾಡಿದ್ರು. ಸೆಟಲ್​ ಆಗಲು ಚಾನ್ಸ್​ ನೀಡದೆ ಬಿಗ್​ ಪಾರ್ಟನರ್​​ಶಿಪ್​ಗಳು ಬರದಂತೆ ನೋಡಿಕೊಂಡರು.

ಕಾರಣ ನಂ.4: ಮೈದಾನದಲ್ಲಿ ಮಿಂಚಿನ ಸಂಚಾರ, ಸಾಲಿಡ್​ ಫೀಲ್ಡಿಂಗ್​
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿ ಫೀಲ್ಡಿಂಗ್​ನಲ್ಲಿ ಫ್ಲಾಪ್​ ಆಗಿತ್ತು. ನಿನ್ನೆ ಆಟಗಾರರು ಚುರುಕಿನ ಫೀಲ್ಡಿಂಗ್​ ನಡೆಸಿ ರನ್​ ಸೇವ್​ ಮಾಡಿದ್ರು. ಕೀಪರ್​ ಅನುಜ್​ ರಾವತ್​ 4 ಕ್ಯಾಚ್​​ ಹಿಡಿದು ಗಮನ ಸೆಳೆದ್ರು.

ಕಾರಣ ನಂ.5: ಯಶ್​​ ದಯಾಳ್​​, ಮೊಹಮ್ಮದ್​ ಸಿರಾಜ್​ ಶಿಸ್ತಿನ ದಾಳಿ
ಆರ್​​ಸಿಬಿ ವೇಗಿಗಳಾದ ಯಶ್​ ದಯಾಳ್​, ಮೊಹಮ್ಮದ್​ ಸಿರಾಜ್​ ಶಿಸ್ತಿನ ಬೌಲಿಂಗ್​ ಸಂಘಟಿಸಿದ್ರು. 4 ಓವರ್​ ಬೌಲಿಂಗ್​ ಮಾಡಿ 2 ವಿಕೆಟ್​ ಕಬಳಿಸಿದ ಸಿರಾಜ್​ 26 ರನ್​ ಬಿಟ್ಟುಕೊಟ್ರು. ಯಶ್​ ದಯಾಳ್​ 4 ಓವರ್​ಗಳಲ್ಲಿ 1 ವಿಕೆಟ್​ ಬೇಟೆಯಾಡಿ ಕೇವಲ 23 ರನ್​ ಬಿಟ್ಟು ಕೊಟ್ರು.

ಕಾರಣ ನಂ.6: ವಿರಾಟ್​​ ಕೊಹ್ಲಿ ಕೈ ಹಿಡಿದ ಅದೃಷ್ಟ
177 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಆರಂಭದಲ್ಲೇ ಆರ್​​ಸಿಬಿಗೆ ಆಘಾತ ಕಾದಿತ್ತು. 3ನೇ ಎಸೆತದಲ್ಲಿ ವಿರಾಟ್​ ಕೊಹ್ಲಿ ಬ್ಯಾಟ್​​ಗೆ ಸವರಿದ ಚೆಂಡು ಸೀದಾ ಜಾನಿ ಬೇರ್​ಸ್ಟೋ ಕೈಗೆ ಹೋಯ್ತು. ಆದ್ರೆ, ಬೇರ್​ಸ್ಟೋ ಕ್ಯಾಚ್​ ಡ್ರಾಪ್​ ಮಾಡಿದ್ರು.

ಕಾರಣ ನಂ.7: ಅದೃಷ್ಟದ ಅವಕಾಶ, ಸರಿಯಾಗಿ ರುಬ್ಬಿದ ಕೊಹ್ಲಿ
ಅದೃಷ್ಟದ ಅವಕಾಶಗಿಟ್ಟಿಸಿಕೊಂಡ ಕೊಹ್ಲಿ ಪಂಜಾಬ್​ ಬೌಲರ್​ಗಳನ್ನ ರುಬ್ಬಿದ್ರು. 11 ಬೌಂಡರಿ, 2 ಸಿಕ್ಸರ್​ ಸಹಿತ 49 ಎಸೆತಗಳಲ್ಲಿ 77 ರನ್​ ಸಿಡಿಸಿದ್ರು.

ಕಾರಣ ನಂ.8: ಕಾರ್ತಿಕ್​​ – ಲೋಮ್ರೋರ್​​ ಬೊಂಬಾಟ್​ ಆಟ
ಆರ್​​ಸಿಬಿಯನ್ನ ಗೆಲುವಿನ ದಡ ಸೇರಿಸಿದ್ದೇ ದಿನೇಶ್​ ಕಾರ್ತಿಕ್​ – ಮಹಿಪಾಲ್​ ಲೋಮ್ರೋರ್​.! ಕೊನೆಯ 3 ಓವರ್​​ಗಳಲ್ಲಿ 36 ರನ್​​ ಬೇಕಿದ್ದಾಗ ಈ ಜೋಡಿ ಬೊಂಬಾಟ್​ ಆಟವಾಡಿತು. ಬೌಂಡರಿ, ಸಿಕ್ಸರ್​ ಅಬ್ಬರಿಸಿದ ಈ ಜೋಡಿ ಗೆಲುವಿನ ರೂವಾರಿಯಾದ್ರು.

ಇದನ್ನೂ ಓದಿ: ಈ ಬಾರಿ ಮೋದಿ ಸ್ಟೇಡಿಯಂನಲ್ಲಿ IPL ಫೈನಲ್ ಪಂದ್ಯ ನಡೆಯಲ್ಲ; ಮತ್ತೆಲ್ಲಿ ನಡೆಯೋದು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಂಜಾಬ್ ವಿರುದ್ಧ RCBಗೆ ರೋಚಕ ಗೆಲುವು; ಬೆಂಗಳೂರು ತಂಡದ ಗೆಲುವಿನ ಹಿಂದಿದೆ 8 ಕಾರಣಗಳು..!

https://newsfirstlive.com/wp-content/uploads/2024/03/RCB-DINESH-KARTHIK.jpg

Load More