newsfirstkannada.com

ಈ ಬಾರಿ ಮೋದಿ ಸ್ಟೇಡಿಯಂನಲ್ಲಿ IPL ಫೈನಲ್ ಪಂದ್ಯ ನಡೆಯಲ್ಲ; ಮತ್ತೆಲ್ಲಿ ನಡೆಯೋದು..?

Share :

Published March 26, 2024 at 7:27am

    ಐಪಿಎಲ್​ ಪಂದ್ಯಗಳ ಪೂರ್ಣ ವೇಳಾಪಟ್ಟಿ ಪ್ರಕಟ

    ಭಾರತದಿಂದ ಐಪಿಎಲ್​ ಪಂದ್ಯಗಳು ಶಿಫ್ಟ್ ಆಗುತ್ತಾ?

    ಚುನಾವಣಾ ಹಬ್ಬದ ಜೊತೆಗೆ ಐಪಿಎಲ್​ ಜಾತ್ರೆಯೂ ಜೋರು

ಐಪಿಎಲ್​ 2024ರ 2ನೇ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಂದ್ಯಗಳು ಭಾರತದಿಂದ ವಿದೇಶಕ್ಕೆ ಶಿಫ್ಟ್ ಆಗಲಿವೆ ಎನ್ನಲಾಗಿತ್ತು. ಆದರೆ ಎಲ್ಲಾ ಐಪಿಎಲ್ ಪಂದ್ಯಗಳನ್ನು ಭಾರತದಲ್ಲಿಯೇ ನಡೆಸಲು ಬಿಸಿಸಿಐ ನಿರ್ಧರಿಸಿದ್ದು, ಅದರಂತೆ ಶೆಡ್ಯೂಲ್ ರಿಲೀಸ್ ಮಾಡಿದೆ.

ಮೊದಲ ಕ್ವಾಲಿಫೈಯರ್ ಪಂದ್ಯ ಗುಜರಾತ್​ನ ಅಹ್ಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೇ 21 ರಂದು ಈ ಪಂದ್ಯ ನಡೆಯಲಿದೆ. ಹೆಚ್ಚುವರಿಯಾಗಿ 22 ದಿನವನ್ನೂ ಮೀಸಲಿಡಲಾಗಿದೆ. ಎರಡನೇ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯ ಚೆನ್ನೈ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ: VIDEO: ಏಕಾಏಕಿ ಮೈದಾನಕ್ಕೆ ನುಗ್ಗಿದ RCB ಅಭಿಮಾನಿ; ಕೊಹ್ಲಿ ಕಾಲು ಹಿಡಿದು ಹುಚ್ಚಾಟ!

ಎರಡನೇ ಕ್ವಾಲಿಫೈಯರ್ ಪಂದ್ಯ ಮೇ 24 ರಂದು ನಡೆದರೆ, ಮೇ 26 ರಂದು ಫೈನಲ್ ಪಂದ್ಯ ನಡೆಯಲಿದೆ. ಲೋಕಸಭೆ ಚುನಾವಣೆ ಜೊತೆ ಜೊತೆಯಲ್ಲೇ ಐಪಿಎಲ್ ಪಂದ್ಯ ನಡೆಯಲಿದೆ. ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್ ಪಂದ್ಯಗಳ ಪೂರ್ಣ ಶೆಡ್ಯೂಲ್ ಪ್ರಕಟ ಮಾಡಿರಲಿಲ್ಲ. ಮೊದಲ 17 ದಿನಗಳ ವರೆಗೆ ನಡೆಯುವ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿತ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಈ ಬಾರಿ ಮೋದಿ ಸ್ಟೇಡಿಯಂನಲ್ಲಿ IPL ಫೈನಲ್ ಪಂದ್ಯ ನಡೆಯಲ್ಲ; ಮತ್ತೆಲ್ಲಿ ನಡೆಯೋದು..?

https://newsfirstlive.com/wp-content/uploads/2023/07/IPL2023.jpg

Load More