/newsfirstlive-kannada/media/post_attachments/wp-content/uploads/2024/05/Soft-Drink.jpg)
ಕೋವಿಶೀಲ್ಡ್ ಲಸಿಕೆ ಪಡೆದಿರೋರು ಫ್ರಿಜ್ ನೀರು, ಐಸ್ಕ್ರೀಂ, ತಂಪು ಪಾನೀಯ ಕುಡಿಯಬಾರದು? ನಾಲಿಗೆ ರುಚಿಯಿಂದ ಇದನ್ನೆಲ್ಲಾ ತಿಂದ್ರೆ ಬಿದರ್ ಮೋಟರ್ ಗ್ಯಾರೆಂಟಿನಾ? ಕೋವಿಶೀಲ್ಡ್ ಬಗ್ಗೆ ಟೆನ್ಷನ್ ಬೇಡ ಅಂತ ನ್ಯೂಸ್ಫಸ್ಟ್ ವೈದ್ಯರು ಸ್ಪೆಷಲ್ ವರದಿ ಕೂಡ ಮಾಡಿದ್ದರು. ಆದರೆ ಇಂಥದೊಂದು ಆಘಾತಕಾರಿ ವಿಚಾರ ಜನರನ್ನ ಬೆದರಿಸ್ತಿದೆ.
ಹೌದು, ಅದ್ಯಾವಾಗ ಲಂಡನ್ ಕೋರ್ಟ್ನಲ್ಲಿ ಕೊರೊನಾ ಔಷಧಗಳ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ ಸೈಡ್ ಎಫೆಕ್ಟ್ ಇದೆ ಅಂತ ಒಪ್ಪಿಕೊಳ್ತೋ. ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಜೀವ ಭಯ ಶುರುವಾಗಿತ್ತು. ಆದ್ರೆ ಚಿಕ್ಕಬಳ್ಳಾಪುರ ಸಿದ್ದರಾಮಯ್ಯ ಲಾ ಕಾಲೇಜಿನ ಹೆಸರಲ್ಲಿ ಲೆಟರ್ ಒಂದು ವೈರಲ್ ಆಗ್ತಿದೆ. ಕಾಲೇಜ್ ಆಡಳಿತ ಮಂಡಳಿಗೆ ಆರೋಗ್ಯ ಇಲಾಖೆ ನೋಟಿಸ್ ಕೊಟ್ಟಿದೆ.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಟಾಕ್ಸಿಕ್ ಶೂಟಿಂಗ್.. ಯಶ್ ಅಕ್ಕನ ಪಾತ್ರದಲ್ಲಿ ಬಹುಭಾಷಾ ಸುಂದರಿ ನಯನಾ ತಾರಾ?
ವೈರಲ್ ಆದ ಆ ಪತ್ರದಲ್ಲೇನಿದೆ?
ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿಯ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಫ್ರಿಜ್ ನೀರು, ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು. ಕೋವಿಡ್ ಸಮಯದಲ್ಲಿ ಕೋವಿಶೀಲ್ಡ್ ಹಾಕಿಸಿಕೊಂಡಿರುವ ಕಾರಣ ರಕ್ತ ಹೆಪ್ಪುಗಟ್ಟುವುದು ದಿಢೀರ್ ಹೃದಯಾಘಾತ ಸಂಭವಿಸಿ, ಪ್ರಾಣಹಾನಿಯಾಗುತ್ತಿದೆ, ಈ ವಿಷಯವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸುತ್ತ ತಮ್ಮ ಪೋಷಕರಿಗೆ ಮತ್ತು ಇತರರಿಗೆ ತಿಳಿಸಬೇಕೆಂದು ಕೋರಲಾಗಿದೆ.
- ಸಿದ್ದರಾಮಯ್ಯ ಲಾ ಕಾಲೇಜು
ಚಿಕ್ಕಬಳ್ಳಾಪುರ ಮೂಲದ ಸಿದ್ದರಾಮಯ್ಯ ಲಾ ಕಾಲೇಜಿನ ಹೆಸರಲ್ಲಿ ಪತ್ರ ಹೊರಡಿಸಲಾಗಿತ್ತು. ಈ ಪತ್ರ ವೈರಲ್ ಆದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿಗೆ ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟೀಕರಣ ಕೇಳಿ ನೋಟೀಸ್ ನೀಡಿದೆ.
ಸ್ಪಷ್ಟೀಕರಣ ಕೇಳಿ ನೋಟಿಸ್
ಫ್ರಿಜ್ ನೀರು, ಐಸ್ ಕ್ರೀಂ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು, ಇದು ಸುಳ್ಳು ವದಂತಿ ಹಬ್ಬಿಸಿರುವುದು ಸರಿಯಷ್ಟೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆಯಿಂದ ಯಾವುದೇ ಸೂಚನೆಯು ಪ್ರಕಟಿಸಿರುವುದಿಲ್ಲ. ಈ ರೀತಿ ಸುಳ್ಳು ವದಂತಿ ಹಬ್ಬಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕಂಡುಬಂದಿರುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಪತ್ರ ತಲುಪಿದ ಕೂಡಲೇ ತಮ್ಮ ಸೂಕ್ತ ಸ್ಪಷ್ಟಿಕರಣವನ್ನು ನೀಡುವಂತೆ ಈ ಮೂಲಕ ಸೂಚಿಸಿದೆ.
-ಆರೋಗ್ಯ ಇಲಾಖೆ
ಇನ್ನು, ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಬಾಯಲ್ಲಿ ಬಂದಿದ್ದು ಕಾಯಕವೇ ಕೈಲಾಸ ಅನ್ನೋ ವಚನ ಸಾಹಿತ್ಯ. ವಚನಗಳನ್ನ ಹೇಳೋ ಮೂಲಕ ಪ್ರತಿಕ್ರಿಯೆ ನೀಡೋಕೆ ನಿರಾಕರಿಸಿದ್ದಾರೆ. 2ನೇ ತಾರೀಖು ಪತ್ರ ಬರೆದಿರೋದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಸ್ಪಷ್ಟಿಕರಣ ಕೇಳಿ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ಕೂಡ ಕೊಟ್ಟಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ಕೇಳಿದ್ರೆ ಕಾಲೇಜು ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ