/newsfirstlive-kannada/media/post_attachments/wp-content/uploads/2024/10/Cow-Dung-Clock.jpg)
ಭಾರತೀಯರು ಸ್ವದೇಶಿ ವಸ್ತುಗಳನ್ನು ಬಿಟ್ಟು ವಿದೇಶಿ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಆದರೆ ವಿದೇಶಿಗರು ಭಾರತೀಯ ವಸ್ತುಗಳಿಗೆ ಈಗ ಮುಗಿಬೀಳುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಾಗುವ ವಸ್ತುಗಳು ವಿದೇಶಿಗರ ಗಮನಸೆಳೆದಿದ್ದು, ಹಸುವಿನ ಸಗಣಿಯಿಂದ ತಯಾರಿಸಲಾದ ಗಡಿಯಾರಕ್ಕೆ ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ ದೇಶಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಮಹಿಳೆಯರು ಹಸುವಿನ ಸಗಣಿ ಬಳಸಿ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಅದರ ಜೊತೆಗೆ ಹಸುವಿನ ಸಗಣಿಯಿಂದ ಗಡಿಯಾರವನ್ನು ತಯಾರಿಸುತ್ತಿದ್ದಾರೆ. ಆದರೆ ಸಗಣಿಯಿಂದ ತಯಾರಿಸಿದ ಅಲಂಕಾರಿಕ ಗಡಿಯಾರಕ್ಕೆ ವಿದೇಶದಿಂದ ಬೇಡಿಕೆ ಬರುತ್ತಿದೆ.
ಇದನ್ನೂ ಓದಿ: ಐಫೋನ್ ಕೊಡಿಸದ ಪೋಷಕರು.. ತನ್ನ ಮನೆಯಲ್ಲಿ ತಾನೇ ದರೋಡೆ ಮಾಡಿ ಸಿಕ್ಕಿ ಬಿದ್ದ ಮಗ!
ಗೋಡೆ ಗಡಿಯಾರವನ್ನು ಹಸುವಿನ ಸಗಣಿಯಿಂದ ಅಲಂಕರಿಸುವ ಮೂಲಕ ಮಧ್ಯಪ್ರದೇಶದ ಮಹಿಳೆಯರು ಪರಿಸರ ಸ್ನೇಹಿ ಉತ್ಪನ್ನಕ್ಕೆ ಹೆಚ್ಚು ಒತ್ತುನೀಡುತ್ತಿದ್ದಾರೆ. ನಗರದ 750 ಮಹಿಳೆಯರು ಈ ಉತ್ಪನ್ನ ತಯಾರಿಸುತ್ತಾ ಗಮನಸೆಳೆದಿದ್ದಾರೆ.
ದೀಪಾವಳಿಗೆ ಮುಂಚಿತವಾಗಿ ಮಹಿಳೆಯರ ಗುಂಪು ಸುಮಾರು 5 ಸಾವಿರ ಹಸುವಿನ ಸಗಣಿಯಿಂದ ಗೋಡೆ ಗಡಿಯಾರವನ್ನು ತಯಾರಿಸಿದ್ದಾರೆ. ಬೇಡಿಕೆ ಅನ್ವಯ ಶೇ90ರಷ್ಟು ಗಡಿಯಾರಗಳು ಮಾರಾಟಗೊಂಡಿವೆ. ಆಕರ್ಷಕ ವಿನ್ಯಾಸವನ್ನು ನೋಡಿ ವಿದೇಶಿಗರಂತು ಮನಸೋತಿದ್ದಾರೆ.
ಇದನ್ನೂ ಓದಿ: ಅಬ್ಬಾ.. ಬುರ್ಜ್ ಖಲೀಫಾಗೆ ಸೆಡ್ಡು; ಸೌದಿ ಅರೇಬಿಯಾದಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ದೊಡ್ಡ ಕಟ್ಟಡ! ಏನಿದರ ವಿಶೇಷ?
ಇನ್ನು ಈ ವರ್ಷ ಮಹಿಳೆಯರು 1.1 ಮಿಲಿಯನ್ ದೀಪಗಳನ್ನು ತಯಾರಿಸಿದ್ದಾರೆ. ಈಗಾಗಲೇ ಹಲವು ಜಿಲ್ಲೆಗಳಿಗೆ ಸರಬರಾಜು ಮಾಡಲಾಗಿದೆ. ಅಮೆರಿಕಾದಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಅಂದಹಾಗೆಯೇ ಶೇ70ರಷ್ಟು ಹಸುವಿನ ಸಗಣಿ ಮತ್ತು ಶೇ30 ರಷ್ಟು ಮಣ್ಣು ಬಳಸಿ ಗೋಡೆ ಗಡಿಯಾರವನ್ನು ವಿನ್ಯಾಸ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ