Advertisment

‘ಕಾಂಗ್ರೆಸ್​ನ ಅಚ್ಚರಿ ಅಭ್ಯರ್ಥಿ ಜೈಲು ಕಂಬಿ ಎಣಿಸ್ತಿದ್ದಾರೆ’ ಸಂಚಲನ ಸೃಷ್ಟಿಸಿದ ಯೋಗೇಶ್ವರ್ ಹೇಳಿಕೆ..!

author-image
Ganesh
Updated On
‘ಕಾಂಗ್ರೆಸ್​ನ ಅಚ್ಚರಿ ಅಭ್ಯರ್ಥಿ ಜೈಲು ಕಂಬಿ ಎಣಿಸ್ತಿದ್ದಾರೆ’ ಸಂಚಲನ ಸೃಷ್ಟಿಸಿದ ಯೋಗೇಶ್ವರ್ ಹೇಳಿಕೆ..!
Advertisment
  • ಬೈಎಲೆಕ್ಷನ್​ಗೆ ದರ್ಶನ್ ಲಿಂಕ್ ಕೊಟ್ಟ ಯೋಗೇಶ್ವರ್..?
  • ಡಿ.ಕೆ ಬ್ರದರ್ಸ್​​​ಗೆ ಟಾಂಗ್ ಕೊಟ್ಟ ಸಿಪಿ ಯೋಗೇಶ್ವರ್
  • ಚನ್ನಪಟ್ಟಣ ವಿಧಾನಸಭೆಗೆ ಶೀಘ್ರದಲ್ಲೇ ಉಪಚುನಾವಣೆ

ರಾಮನಗರ: ಕೇಂದ್ರ ಸಚಿವ ಹೆಚ್.​ಡಿ. ಕುಮಾರಸ್ವಾಮಿ ಅವರಿಂದ ತೆರವು ಆಗಿರುವ ಚನ್ನಪ್ಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನಟ ದರ್ಶನ್ ಸ್ಪರ್ಧೆ ಮಾಡಲು ಬಯಸಿದ್ದರಾ ಎಂಬ ಅನುಮಾನ ಹುಟ್ಟಿದೆ. ಇಷ್ಟಕ್ಕೆಲ್ಲ ಕಾರ ಮಾಜಿ ಸಚಿವ ಸಿಪಿ ಯೋಗೇಶ್ವರ್ ನೀಡಿರುವ ಅದೊಂದು ಹೇಳಿಕೆ.

Advertisment

ಇದನ್ನೂ ಓದಿ:ತಪ್ಪಿಸಿಕೊಳ್ಳೋಕೆ ಚಾನ್ಸೇ ಇಲ್ಲ.. ದರ್ಶನ್ ವಿರುದ್ಧ ಸಿಕ್ಕಿದೆ ಎನ್ನಲಾದ 16 ಸಾಕ್ಷಿಗಳ ಲಿಸ್ಟ್ ಇಲ್ಲಿದೆ..!

ಯೋಗೇಶ್ವರ್ ಹೇಳಿದ್ದೇನು..?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಬಂಧನ ಬೆನ್ನಲ್ಲೇ ಸಿಪಿ ಯೋಗೇಶ್ವರ್​ ನೀಡಿರುವ ಹೇಳಿಕೆ ಈ ಎಲ್ಲ ಅನುಮಾನಗಳಿಗೆ ಕಾರಣವಾಗಿದೆ. ಆದರೆ ಯೋಗೇಶ್ವರ್ ಎಲ್ಲಿಯೂ ಕೂಡ ದರ್ಶನ್ ಹೆಸರನ್ನು ಪ್ರಸ್ತಾಪ ಮಾಡಿಲ್ಲ.

ಗೊತ್ತು ನನಗೆ.. ಅಚ್ಚರಿ ಅಭ್ಯರ್ಥಿ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಅಚ್ಚರಿ ಅಭ್ಯರ್ಥಿ ಯಾರು ಎಂದು ನನಗೆ ಗೊತ್ತಿದೆ. ಅವರ ಅಚ್ಚರಿ ಅಭ್ಯರ್ಥಿ ಯಾವುದೋ ಕೊಲೆ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡು ಜೈಲು ಕಂಬಿ ಎಣಿಸುತ್ತಿದ್ದಾರೆ. ಅಚ್ಚರಿ ಅಭ್ಯರ್ಥಿಯಾದರೂ ಬರಲಿ, ಇನ್ನಾದರೂ ಬರಲಿ. ಚುನಾವಣೆ ಎದುರಿಸಲು ನಾವು ರೆಡಿ ಇದ್ದೀವಿ - ಸಿ.ಪಿ.ಯೋಗೇಶ್ವರ್​, ಮಾಜಿ ಸಚಿವ

Advertisment

ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಿಂದ ಸಿಪಿ ಯೋಗೇಶ್ವರ್ ನಿಲ್ಲೋದು ಪಕ್ಕಾ ಎನ್ನಲಾಗ್ತಿದೆ. ಆದರೆ ಕಾಂಗ್ರೆಸ್​ನಿಂದ ಡಿ.ಕೆ.ಸುರೇಶ್ ನಿಲ್ಲಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ತಾವು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಅಚ್ಚರಿಯ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ:ದರ್ಶನ್ ಮತ್ತು ಬೇರೆ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್​ಮೆಂಟ್ ಅನುಮಾನ -ಉಮಾಪತಿ ಸ್ಫೋಟಕ ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment