/newsfirstlive-kannada/media/post_attachments/wp-content/uploads/2024/05/Chikkamagaluru.jpg)
ನೀರಿಗಾಗಿ ಕಾದು ಕುಳಿತಿದ್ರು. ಎಷ್ಟೊತ್ತಿಗೆ ಅಂತಾ ಕಾದುಕುಳಿತ್ತಿದ್ದರಿಗೆ ಶಾಕ್ ಅಗಿದ್ದು ಏಕಾಏಕಿ ಬೋರ್ ವೇಲ್ ಕೊರೆಯೋ ಜಾಗದ ಸುತ್ತ ಕಾಣಿಸಿಕೊಂಡ ಬಿರುಕು. ಕೆಲವ್ರು ಶಬ್ದ ಬಂತು ಅಂತಿದ್ರೆ ಇನ್ನೂ ಕೆಲವ್ರು ಇಲ್ಲ ಅಂತಿದ್ದಾರೆ. ಅದ್ರೂ ಡ್ಯಾಮೇಜ್ ಗೆ ಅತಂಕವಂತೂ ಜನ್ರಲ್ಲಿ ಮೂಡಿದೆ.
/newsfirstlive-kannada/media/post_attachments/wp-content/uploads/2024/05/Chikkamagaluru-1.jpg)
ಬಿರುಕು ಬಿಟ್ಟಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ. ನೆಲದಲ್ಲಿ ಗೆರೆಯಂತೆ ಭಾಗ ಬಿಟ್ಟಿರೋ ಭೂಮಿ. ಭಯದಲ್ಲಿಯೇ ನೋಡುತ್ತಾ ನಿಂತಿರೋ ಅಧಿಕಾರಿಗಳು, ಜನರು. ಇದು ಕಾಫಿ ನಾಡು ಚಿಕ್ಕಮಗಳೂರಿನ ಅಲ್ದೂರಿನಲ್ಲಿ ನಡೆದಿರುವ ವಿಚಿತ್ರ ಘಟನೆ.
ಅಲ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಬೋರ್ ವೇಲ್ ಕೊರೆಸಲಾಗ್ತಿತ್ತು. ಆಗ ಏಕಾಏಕಿ ಬಿರುಕು ಕಾಣಿಸಿದೆ. ಬೋರ್ ವೇಲ್ ಕೊರೆಯೋವಾಗ ಶಬ್ದ ಬಂತು ಎಂದು ಕೆಲವರು ಹೇಳ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/05/Chikkamagaluru-2-1.jpg)
ಇನ್ನೂ ಭೂಮಿಯಲ್ಲಿ ಬಿರುಕು ಕಂಡು ಬಂದಿರುವುದು ಜನರಲ್ಲಿ ಅತಂಕ ತಂದಿದೆ. ಇದಲ್ಲದೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡವಂತೂ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಗೋಡೆ ಸೇರಿದಂತೆ ಹಲವೆಡೆ ಬಿರುಕು ಕಾಣಿಸಿಕೊಂಡಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಹಾನಿಯ ಪ್ರಮಾಣದ ಬಗ್ಗೆಯೂ ಮಾಹಿತಿ ಕಲೆಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2024/05/Chikkamagaluru-3-1.jpg)
ಒಟ್ಟಾರೆ ನೀರಿಗಾಗಿ ಬೋರ್​ ಕೊರೆಸಿದವರಿಗೇ ಶಾಕ್ ಎದುರಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಭೂಮಿ ಬಿರುಕು ಬಿಡಲು ಅಸಲಿ ಕಾರಣವನ್ನು ಪತ್ತೆ ಹಚ್ಚಿ ಜನರ ಆತಂಕವನ್ನು ದೂರ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us