ಅದು ಕನ್ನಡ್ ಅಲ್ಲ, ಕನ್ನಡ ಎಂದ ಕೆ.ಎಲ್ ರಾಹುಲ್
ಕನ್ನಡ್ ಎಂದವರಿಗೆ ಕೆ.ಎಲ್ ರಾಹುಲ್ ಫುಲ್ ಕ್ಲಾಸ್!
ಮತ್ತೊಮ್ಮೆ ಕನ್ನಡಿಗರ ಮನಸ್ಸು ಗೆದ್ದ ಸ್ಟಾರ್ ಬ್ಯಾಟರ್
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕನ್ನಡಿಗ ಕೆ.ಎಲ್ ರಾಹುಲ್ ಕನ್ನಡಿಗರ ಮನ ಗೆದ್ದಿದ್ದಿದ್ದಾರೆ. ಕನ್ನಡವನ್ನು ತಪ್ಪಾಗಿ ಹೇಳಿದವರಿಗೆ ಮುಲಾಜಿಲ್ಲದೆ ಅದು ಕನ್ನಡ್ ಅಲ್ಲ, ಕನ್ನಡ ಎಂದು ಹೇಳಿಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಕನ್ನಡವನ್ನು ಹೇಗೆ ಸ್ಪಷ್ಟವಾಗಿ ಉಚ್ಛರಿಸುವುದು ಎಂದು ಹೇಳಿಕೊಟ್ಟಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆ್ಯಡ್ ಶೂಟ್ವೊಂದರಲ್ಲಿ ಕೆ.ಎಲ್ ರಾಹುಲ್ ಸ್ಕ್ರಿಪ್ಟ್ ಓದುತ್ತಿದ್ದರು. ಆಗ ಡೈರೆಕ್ಷನ್ ಡಿಪಾರ್ಟ್ಮೆಂಟ್ ಹುಡುಗ ‘ಕನ್ನಡ್’ ಎಂದಿದ್ದಾರೆ. ಕೂಡಲೇ ಕೆ.ಎಲ್ ರಾಹುಲ್ ಅದು ಕನ್ನಡ್ ಅಲ್ಲ, ಕನ್ನಡ ಎಂದಿದ್ದಾರೆ. ಹಿಂದಿ ಹೇಗೆ ಹಿಂದ್ ಆಗುವುದಿಲ್ಲವೋ ಹಾಗೇ ಕನ್ನಡ ಕೂಡ ಕನ್ನಡ್ ಆಗುವುದಿಲ್ಲ ಎಂದು ಮುಖದ ಮೇಲೆ ನೇರವಾಗಿ ಹೇಳಿದ್ದಾರೆ.
When someone from North keeps saying KANNAD KANNAD
Kannad nahi, Kannada bolo.. pic.twitter.com/mAClgo6Uha
— Mister C (@misterc_speaks) February 23, 2024
ತಮಿಳು, ತೆಲುಗು ಹೆಸರನ್ನು ಸರಿಯಾಗಿ ಹೇಳುತ್ತೀರಿ. ಆದರೆ ಕನ್ನಡದ ಹೆಸರನ್ನು ಮಾತ್ರ ಸರಿಯಾಗಿ ಹೇಳುವುದಿಲ್ಲ. ಮೊದಲು ಕನ್ನಡ ಎಂದು ಹೇಳುವುದು ಕಲಿಯಿರಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಯಾರ ಮೊಬೈಲ್ ವಾಟ್ಸಪ್ ಸ್ಟೇಟಸ್ ನೋಡಿದ್ರೂ ಇದೇ ವಿಡಿಯೋ ರಾರಾಜಿಸುತ್ತಿದೆ. ಕನ್ನಡ ಬಗ್ಗೆ ಕೆ.ಎಲ್ ರಾಹುಲ್ಗಿರೋ ಅಭಿಮಾನ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ