newsfirstkannada.com

‘ಕನ್ನಡ್’ ಎಂದವನಿಗೆ ಮೂಲಾಜಿಲ್ಲದೇ KL ರಾಹುಲ್ ಕ್ಲಾಸ್; ಕನ್ನಡಿಗರ ಹೃದಯಗೆದ್ದ ಈ ವಿಡಿಯೋದ ಅಸಲಿ ಕಥೆ ಏನು?

Share :

Published February 24, 2024 at 11:42am

    ಹಿಂದಿ ವ್ಯಕ್ತಿಯೊಬ್ಬರಿಗೆ ಕನ್ನಡ ಕ್ಲಾಸ್ ಮಾಡಿದ ಕ್ರಿಕೆಟರ್​ ಕೆ.ಎಲ್.ರಾಹುಲ್

    ಕೆ.ಎಲ್.ರಾಹುಲ್ ಕನ್ನಡ ಹೇಳಿಕೊಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ

    ಅಂದು ನಟ ಹೇಳಿದ್ದರು ಕನ್ನಡ ಅಂಥ, ಇಂದು ಕ್ರಿಕೆಟರ್ ಕಲಿಸಿದರು ಕನ್ನಡ

ಟೀಮ್ ಇಂಡಿಯಾದ ಸ್ಟಾರ್​ ಪ್ಲೇಯರ್ ಕೆ.ಎಲ್.ರಾಹುಲ್ ಇತ್ತೀಚೆಗಷ್ಟೇ ತುಮಕೂರಿನಲ್ಲಿನ ಪ್ರಸಿದ್ಧ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಕನ್ನಡ ಮಾತನಾಡಿದ್ದರು. ಇದು ಎಲ್ಲ ಕನ್ನಡಿಗರ ಮನ ಗೆದ್ದಿತ್ತು. ಈ ಹಿಂದೆ ಕಿಚ್ಚ ಸುದೀಪ್ ಅವರು ಮಹಿಳಾ ಆ್ಯಂಕರ್​ಗೆ ಕನ್ನಡ್ ಅಲ್ಲ, ಕನ್ನಡ ಎಂದು ಕಲಿಸಿದ್ದರು. ಇದೀಗ ಕೆ.ಎಲ್.ರಾಹುಲ್ ಕೂಡ ಇದೇ ರೀತಿ ಹಿಂದಿಯ ಯುವಕನೊಬ್ಬನಿಗೆ ಹೇಳಿಕೊಟ್ಟಿರುವುದು ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನು ಓದಿ: VIDEO: ’ಅದು ಕನ್ನಡ್​ ಅಲ್ಲ, ಕನ್ನಡ’- ಕನ್ನಡವನ್ನು ತಪ್ಪಾಗಿ ಬಳಸಿದವರಿಗೆ KL ರಾಹುಲ್ ಕನ್ನಡ ಪಾಠ

ವಿಡಿಯೋದ ಅಸಲಿ ಕಥೆ ಏನು..?

ಈ ವೇಳೆ ಕೆ.ಎಲ್​ ರಾಹುಲ್​ ಸ್ಕ್ರಿಪ್ಟ್​ ಓದುವಾಗ ಡೈರೆಕ್ಷನ್​ ಡಿಪಾರ್ಟ್​ಮೆಂಟ್​ ಯುವಕನೊಬ್ಬ ‘ಕನ್ನಡ್’ ಎಂದು ಹೇಳಿದ್ದಾರೆ. ತಕ್ಷಣ ಅವರ ಮುಖ ನೋಡಿದ ಕೆ.ಎಲ್​ ರಾಹುಲ್​​ ಏನು ಹೇಳಿದೆ ಅಂತ ಕೇಳಿದ್ದಾರೆ. ಅದಕ್ಕೆ ಕನ್ನಡ್​​ ಎಂದು ಉತ್ತರಿಸಿದ್ದಾನೆ. ಎ ಭಾಯ್​ ಅದು ಕನ್ನಡ್ ಅಲ್ಲ, ‘ಕನ್ನಡ’ ಎಂದು ಸರಿಯಾಗಿ ಹೇಳಿಕೊಟ್ಟಿದ್ದಾರೆ. ಅಲ್ಲದೇ ಯುವಕನಿಂದಲೂ ಕನ್ನಡ ಎಂದು ಹೇಳಿಸಿದ್ದಾರೆ. ಅಂದ್ಹಾಗೆ ಇದು ಐಪಿಎಲ್​ನ ಫಿಲ್ಮ್​ ಶೂಟ್​ನ ಒಂದು ದೃಶ್ಯವಾಗಿದೆ. ಮಾರ್ಚ್​ 22 ರಿಂದ ಐಪಿಎಲ್​ ಶುರುವಾಗುತ್ತಿದ್ದು, ಅದರ ಪ್ರಮೋಷನ್ ವಿಡಿಯೋ ಇದಾಗಿದೆ ಎನ್ನಲಾಗಿದೆ.

ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾ ಕುರಿತು ಕಿಚ್ಚ ಸುದೀಪ್ ಅವರು ಸಂದರ್ಶನ ನೀಡುವಾಗ ಮಹಿಳಾ ಆ್ಯಂಕರ್​ರೊಬ್ರು ಕನ್ನಡ್ ಎಂದು ಹೇಳಿದ್ದರು. ಆಗ ಸುದೀಪ್ ಅವರು ಮೇಡಂ ಕನ್ನಡ್ ಅಲ್ಲ, ಕನ್ನಡ ಎಂದು ಹೇಳಿದ್ದರು. ಹೇಗೆ ಹಿಂದಿ, ಹಿಂದ್​ ಆಗಲ್ವೋ ಹಾಗೇ ಕನ್ನಡ, ಕನ್ನಡ್ ಆಗಲ್ಲ ಎಂದು ಆನ್​ ಕ್ಯಾಮೆರಾ ಸಂದರ್ಶನದಲ್ಲೇ ಕಿಚ್ಚ ನೇರವಾಗಿ ಹೇಳಿದ್ದರು. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಕ್ರಿಕೆಟರ್​ ಕೆ.ಎಲ್ ರಾಹುಲ್​ ಹಾಗೂ ಕಿಚ್ಚ ಸುದೀಪ್​ ಅವರು ಕನ್ನಡ ಹೇಳಿಕೊಡುತ್ತಿರುವ ವಿಡಿಯೋ ಸಖತ್ ಸೆನ್ಷೇಷನ್ ಮೂಡಿಸುತ್ತಿದೆ.

​​ ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಕನ್ನಡ್’ ಎಂದವನಿಗೆ ಮೂಲಾಜಿಲ್ಲದೇ KL ರಾಹುಲ್ ಕ್ಲಾಸ್; ಕನ್ನಡಿಗರ ಹೃದಯಗೆದ್ದ ಈ ವಿಡಿಯೋದ ಅಸಲಿ ಕಥೆ ಏನು?

https://newsfirstlive.com/wp-content/uploads/2024/02/KL_RAHUL_SUDEEP.jpg

Load More