/newsfirstlive-kannada/media/post_attachments/wp-content/uploads/2023/08/DHAWAN.jpg)
ವಿದಾಯ..! ಎರಡು ತಿಂಗಳ ಹಿಂದೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ಸ್​ T20 ಕ್ರಿಕೆಟ್​​​​ಗೆ ಗುಡ್​​ಬೈ ಹೇಳಿದರು. ಆ ಶಾಕ್​​ನಿಂದ ಫ್ಯಾನ್ಸ್ ಇನ್ನೂ ಹೊರಬಂದಿಲ್ಲ. ಆಗಲೇ ಲೆಜೆಂಡ್ರಿ ಬ್ಯಾಟ್ಸ್​​ಮನ್ ಶಿಖರ್ ಧವನ್​ ನಿವೃತ್ತಿ ಘೋಷಿಸಿ ಎಲ್ಲರನ್ನ ಅಚ್ಚರಿಗೆ ತಳ್ಳಿದ್ದಾರೆ. ಗಬ್ಬರ್​​ ಸಿಂಗ್ ದಿಢೀರನೆ ಗುಡ್ ​ಬೈ ಹೇಳಿದ್ದು ಯಾಕೆ?
ಎಲ್ಲದಕ್ಕೂ ಕೊನೆ ಅನ್ನೋದು ಇದ್ದೆ ಇದೆ. ಇದ್ರಿಂದ ಕ್ರಿಕೆಟರ್ಸ್​ ಕೂಡ ಹೊರತಾಗಿಲ್ಲ. ದಶಕಗಳ ಕಾಲ ವಿಜೃಂಭಿಸಿ ಫ್ಯಾನ್ಸ್​ ಮನದಲ್ಲಿ ಹಾಸು ಹೊಕ್ಕಾಗಿದ್ದ ಅದೆಷ್ಟೋ ಲೆಜೆಂಡ್ಸ್​ ಕ್ರಿಕೆಟ್​​​​ಗೆ ಗುಡ್ ​​ಬೈ ಹೇಳಿದ್ದಾರೆ. ಇದೀಗ ಆ ಲಿಸ್ಟ್​​ಗೆ ಟೀಮ್ ಇಂಡಿಯಾದ ಮತ್ತೋರ್ವ ದಿಗ್ಗಜ ಸೇರಿಕೊಂಡಿದ್ದಾರೆ. ಆ ಜಗಮೆಚ್ಚಿದ ಕ್ರಿಕೆಟಿಗ ಮತ್ಯಾರು ಅಲ್ಲ, ಗಬ್ಬರ್​​​ ಸಿಂಗ್ ಖ್ಯಾತಿಯ ಶಿಖರ್ ಧವನ್​​​.
ಇದನ್ನೂ ಓದಿ: ಕಳೆದ ಬಾರಿ ಹಸರಂಗ ಯಾಕೆ IPL ಆಡಲಿಲ್ಲ? ಇಲ್ಲೂ ಇದೆ ಆರ್​ಸಿಬಿಯ ಒಂದು ನಿರ್ಧಾರದ ಕತೆ..!
/newsfirstlive-kannada/media/post_attachments/wp-content/uploads/2024/08/DHAWAN-1.jpg)
ಶಿಖರ್ ಧವನ್​​​. ಟೀಮ್ ಇಂಡಿಯಾದ ತೂಫಾನ್​​​​​​​​​​​​. ಅಟ್ಯಾಕಿಂಗ್ ಹಾಗೂ ಆಗ್ರೆಸ್ಸಿವ್ ಆಟಕ್ಕೆ ಎತ್ತಿದ ಕೈ. ವಿಶ್ವದ ಸ್ಟಾರ್​ ಓಪನರ್. ಬ್ಯಾಟ್​ ಅನ್ನೋ ಅಸ್ತ್ರ ಹಿಡಿದು ಅಂಗಳಕ್ಕಿದ್ರೆ ಎದುರಾಳಿ ಪಡೆ ಧ್ವಂಸ ಆಗ್ತಿತ್ತು. ಧವನ್​ರ ಇಂತಹ ಟೆರರ್​ ಬ್ಯಾಟಿಂಗ್​ ಇನ್ಮುಂದೆ ನೆನಪು ಮಾತ್ರ. ಯಾಕಂದ್ರೆ ದಶಕಗಳ ಕಾಲ ಉಸಿರಾಗಿಸಿಕೊಂಡಿದ್ದ ಕ್ರಿಕೆಟ್​ ಆಟಕ್ಕೆ ಧವನ್​ ಗುಡ್​ಬೈ ಹೇಳಿದ್ದಾರೆ.
ನಾನು ಭಾರತಕ್ಕಾಗಿ ಆಡುವ ಗುರಿಯನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಅದನ್ನ ಸಾಧಿಸಿದೆ. ಇದಕ್ಕಾಗಿ ಬಹಳಷ್ಟು ಜನರಿಗೆ ಧನ್ಯವಾದಗಳು. ಮೊದಲನೆಯದಾಗಿ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತೆ. ನಂತರ ನಾನು ವರ್ಷಗಳ ಕಾಲ ಆಡಿದ ನನ್ನ ಇಡೀ ತಂಡ ಹಾಗೂ ಕುಟುಂಬದಿಂದ ಖ್ಯಾತಿ, ಪ್ರೀತಿ ಮತ್ತು ಬೆಂಬಲ ಸಿಕ್ಕಿತು. ಜೀವನದಲ್ಲಿ ಮುನ್ನಡೆಯಲು ಪುಟವನ್ನು ತಿರುಗಿಸುವುದು ಮುಖ್ಯ. ಅದಕ್ಕಾಗಿಯೇ ನಾನು ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ -ಶಿಖರ್ ಧವನ್, ಮಾಜಿ ಕ್ರಿಕೆಟಿಗ
ಇದನ್ನೂ ಓದಿ: ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತನಾಡೋರ ವಿರುದ್ಧ ಡಾಲಿ ಧನಂಜಯ ಆಕ್ರೋಶ.. ಏನಂದ್ರು
/newsfirstlive-kannada/media/post_attachments/wp-content/uploads/2023/07/Dhawan-Car.jpg)
ದೆಹಲಿಯ ಧವನ್​ ತಮ್ಮ ಮನೋಜ್ಞ ಆಟದಿಂದ ಅಪಾರ ಖ್ಯಾತಿ ಗಳಿಸಿದ್ರು. 2010 ರಲ್ಲಿ ಭಾರತಕ್ಕೆ ಎಂಟ್ರಿಕೊಟ್ಟ ಲೆಫ್ಟಿ ಬ್ಯಾಟರ್​​ ಲೆಕ್ಕವಿಲ್ಲದಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. 34 ಟೆಸ್ಟ್​​​, 167 ಏಕದಿನ ಪಂದ್ಯ ಹಾಗೂ 68 ಟಿ20 ಪಂದ್ಯಗಳಲ್ಲಿ ನೀಡಿದ ಕೊಡುಗೆಯನ್ನ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ.
ದೇಶಕ್ಕಾಗಿ ನಾನು ಸಾಕಷ್ಟು ಆಡಿದ್ದೇನೆ ಎಂಬ ತೃಪ್ತಿ ಇದೆ. ನನಗೆ ಈ ಅವಕಾಶವನ್ನು ನೀಡಿದ ಬಿಸಿಸಿಐ, ಡಿಡಿಸಿಎ ಮತ್ತು ಬೆಂಬಲಸಿದ ಎಲ್ಲಾ ಅಭಿಮಾನಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನಾನು ಮತ್ತೆ ದೇಶಕ್ಕಾಗಿ ಆಡುವುದಿಲ್ಲ ಎಂದು ದುಃಖಿಸಬೇಡಿ. ಆದರೆ ನಿಮ್ಮ ದೇಶಕ್ಕಾಗಿ ಆಡಿದ್ದಕ್ಕಾಗಿ ಯಾವಾಗಲೂ ಸಂತೋಷವಾಗಿರಿ. ಇದು ನನ್ನ ದೊಡ್ಡ ಸಾಧನೆಯಾಗಿದೆ-ಶಿಖರ್ ಧವನ್, ಮಾಜಿ ಕ್ರಿಕೆಟಿಗ
ಇದನ್ನೂ ಓದಿ: ಶಿಖರ್ ಧವನ್​ರನ್ನು ಮಿಸ್ಟರ್ ಐಸಿಸಿ ಎಂದು ಕರೆಯೋದೇಕೆ? ಗಬ್ಬರ್ ದಾಖಲೆಗೆ ತಲೆ ಬಾಗಿದ್ದ ICC
2 ವರ್ಷದಿಂದ ಟೀಮ್ ಇಂಡಿಯಾದಲ್ಲಿ ನೋ ಚಾನ್ಸ್​​..!
ಸ್ಟಾರ್ ಓಪನರ್​ ಅನ್ನಿಸಿಕೊಂಡಿದ್ದ ಧವನ್​ಗೆ ಎರಡು ವರ್ಷದಿಂದ ಭಾರತ ಪರ ಆಡುವ ಅವಕಾಶ ಸಿಕ್ಕಿಲ್ಲ. 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆ ಏಕದಿನ ಪಂದ್ಯವಾಡಿದ್ರು. ಟೆಸ್ಟ್​ ಆಡಿ 6 ವರ್ಷಗಳಾಗಿದೆ. ಇತ್ತೀಚೆಗಷ್ಟೇ ಬಿಸಿಸಿಐ ಸೆಪ್ಟೆಂಬರ್​​ 5 ರಿಂದ ಆರಂಭಗೊಳ್ಳುವ ದುಲೀಪ್​ ಟ್ರೋಫಿಗೆ ತಂಡವನ್ನ ಪ್ರಕಟಿಸಿತ್ತು. ಅದರಲ್ಲೂ ಧವನ್ ಹೆಸರು ಕಾಣಿಸಿಕೊಂಡಿರಲಿಲ್ಲ. ಇದರಿಂದ ಬೇಸರಗೊಂಡ ಧವನ್​​​​ ಹಠಾತ್​ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಇನ್ಮುಂದೆ ಐಪಿಎಲ್​​ನಲ್ಲಿ ಮಾತ್ರ ಗಬ್ಬರ್ ಸಿಂಗ್ ದರ್ಶನ
ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಧವನ್​​ ಮುಂದೇನ್ ಮಾಡ್ತಾರೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. ಸದ್ಯ ಲೆಫ್ಟಿ ಬ್ಯಾಟರ್ ಅಂತಾರಾಷ್ಟ್ರೀಯ ಹಾಗೂ ಡೊಮೆಸ್ಟಿಕ್​ ಕ್ರಿಕೆಟ್​ಗೆ ಮಾತ್ರ ನಿವೃತ್ತಿ ಕೊಟ್ಟಿದ್ದಾರೆ. ಹಾಗಾಗಿ ಅವರು ಐಪಿಎಲ್​ನಲ್ಲಿ ಮುಂದುವರಿಯಲಿದ್ದಾರೆ. ಧವನ್​​ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಪಂಜಾಬ್ ಫ್ರಾಂಚೈಸಿ ಅವರನ್ನ ರಿಟೇನ್ ಮಾಡಿಕೊಳ್ಳುವ ಸಾಧ್ಯತೆ ಕಮ್ಮಿ ಇದ್ದು, ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿಯಬಹುದು.
ಇದನ್ನೂ ಓದಿ: ಶಿಖರ್ ಧವನ್​ಗೂ ಬಿಸಿಸಿಐ ಅನ್ಯಾಯ -ಗಬ್ಬರ್ ಸಿಂಗ್ ನಿವೃತ್ತಿ ಹಿಂದಿದೆ ಕೋಪ, ಆಕ್ರೋಶ
/newsfirstlive-kannada/media/post_attachments/wp-content/uploads/2024/08/DHAWAN-2.jpg)
12 ವರ್ಷಗಳ ವರ್ಣರಂಜಿತ ಕರಿಯರ್​ನಲ್ಲಿ ಧವನ್​​ ಫ್ಯಾನ್ಸ್​​ಗೆ ಫುಲ್​​ ಮೀಲ್ಸ್​ ಉಣಬಡಿಸಿದ್ದಾರೆ. ವಿವಾದ ರಹಿತ ವ್ಯಕ್ತಿತ್ತ. ಯಾರನ್ನ ದ್ವೇಷಿಸಿದವರಲ್ಲ. ಗೆಲುವಿರಲಿ, ಸೋಲಿರಲಿ, ಸದಾ ನಗುಮೊಗದಿಂದಲೇ ಎಲ್ಲವನ್ನ ಸಮಾನವಾಗಿ ಸ್ವೀಕರಿಸಿದವರು. ಇಂತಹ ಮಾದರಿ ಕ್ರಿಕೆಟಿಗನ ನಿವೃತ್ತಿಯಾಚೆಗಿನ ಬದುಕು ಕೂಡ ಸುಖಮಯವಾಗಿರಲಿ ಎಂದು ಆಶಿಸೋಣ.
ಇದನ್ನೂ ಓದಿ:ರೋಹಿತ್​ ಖರೀದಿಗೆ 50 ಕೋಟಿ ರೂಪಾಯಿ ಖರ್ಚು ಮಾಡಲು ರೆಡಿಯಾದ ಎರಡು ಫ್ರಾಂಚೈಸಿ..!
ಇದನ್ನೂ ಓದಿ:ಕೊಹ್ಲಿ ಜರ್ಸಿ 40 ಲಕ್ಷಕ್ಕೆ ಸೇಲ್.. KL ರಾಹುಲ್​ ಮಾನವೀಯ ಸೇವೆಗೆ ಹರಿದುಬಂದು ಹಣದ ಹೊಳೆ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us